ಬಿಗ್​ ಬಾಸ್​ ಬಳಿಕ ರಂಜಿಸಲು ಬರ್ತಿವೆ ಹೊಸ ಸೀರಿಯಲ್​ಗಳು; ಲಕ್ಷಣ, ಕನ್ಯಾಕುಮಾರಿ ಕಥೆ ಏನು?

ಬಿಗ್​ ಬಾಸ್​ ಬಳಿಕ ರಂಜಿಸಲು ಬರ್ತಿವೆ ಹೊಸ ಸೀರಿಯಲ್​ಗಳು; ಲಕ್ಷಣ, ಕನ್ಯಾಕುಮಾರಿ ಕಥೆ ಏನು?
ಬಿಗ್​ ಬಾಸ್​ ಬಳಿಕ ರಂಜಿಸಲು ಬರ್ತಿವೆ ಹೊಸ ಸೀರಿಯಲ್​ಗಳು; ಲಕ್ಷಣ, ಕನ್ಯಾಕುಮಾರಿ ಕಥೆ ಏನು?

ಆ.9ರಿಂದ ಕಲರ್ಸ್​ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ರಾತ್ರಿ 9.30ಕ್ಕೆ ಹೊಸ ಧಾರಾವಾಹಿ ‘ಲಕ್ಷಣ’ ಹಾಗೂ 10 ಗಂಟೆಗೆ ‘ಕನ್ಯಾಕುಮಾರಿ’ ಪ್ರಸಾರ ಆಗಲಿದೆ. ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ..

TV9kannada Web Team

| Edited By: Madan Kumar

Aug 07, 2021 | 11:51 AM


ಕನ್ನಡದ ಕಿರುತೆರೆ ಪ್ರೇಕ್ಷಕರಿಗೆ ‘ಬಿಗ್ ಬಾಸ್​ ಕನ್ನಡ ಸೀಸನ್​ 8’​ ಮೋಡಿ ಮಾಡಿದೆ. ಇಷ್ಟು ದಿನ ಪ್ರತಿ ರಾತ್ರಿ 9.30 ಆದ ತಕ್ಷಣ ವೀಕ್ಷಕರನ್ನು ಈ ಕಾರ್ಯಕ್ರಮ ಸೆಳೆದುಕೊಳ್ಳುತ್ತಿತ್ತು. 115ಕ್ಕೂ ಹೆಚ್ಚು ದಿನಗಳ ಕಾಲ ಎಲ್ಲರನ್ನೂ ರಂಜಿಸಿದ ಈ ಶೋ ಆ.8ರಂದು ಮುಕ್ತಾಯ ಆಗುತ್ತಿದೆ. ಇದೇ ಭಾನುವಾರ ಬಿಗ್​ ಬಾಸ್​ ಫಿನಾಲೆ ನಡೆಯಲಿದೆ. ಮಂಜು ಪಾವಗಡ, ವೈಷ್ಣವಿ ಗೌಡ, ಅರವಿಂದ್​ ಕೆ.ಪಿ., ಪ್ರಶಾಂತ್​ ಸಂಬರಗಿ, ದಿವ್ಯಾ ಉರುಡುಗ ನಡುವೆ ಫಿನಾಲೆಯಲ್ಲಿ ಹಣಾಹಣಿ ನಡೆಯುತ್ತಿದೆ. ಯಾರು ವಿನ್ನರ್​ ಎಂಬುದು ಆ.8ರ ರಾತ್ರಿ ಗೊತ್ತಾಗುತ್ತದೆ. ಅಲ್ಲಿಗೆ ಬಿಗ್​ ಬಾಸ್​ ಕನ್ನಡ ಸೀಸನ್​ 8ರ ಜರ್ನಿ ಅಂತ್ಯವಾಗುತ್ತದೆ. ಹಾಗಾದರೆ, ಇನ್ಮುಂದೆ ರಾತ್ರಿ 9.30ಕ್ಕೆ ವೀಕ್ಷಕರಿಗೆ ಮನರಂಜನೆ ಕೊಡೋರು ಯಾರು? ಅದಕ್ಕೀಗ ಉತ್ತರ ಸಿಕ್ಕಿದೆ. ‘ಲಕ್ಷಣ’ ಮತ್ತು ‘ಕನ್ಯಾಕುಮಾರಿ’ ಎಂಬ ಎರಡು ಹೊಸ ಸೀರಿಯಲ್​ಗಳು ಪ್ರಸಾರ ಆರಂಭಿಸಲು ಸಜ್ಜಾಗಿವೆ.

ಬಿಗ್​ ಬಾಸ್​ ಮುಗಿದ ಬಳಿಕ ಕಲರ್ಸ್​ ಕನ್ನಡದಲ್ಲಿ ಪ್ರತಿ ರಾತ್ರಿ 9.30ಕ್ಕೆ ಹೊಸ ಧಾರಾವಾಹಿ ‘ಲಕ್ಷಣ’ ಪ್ರಸಾರ ಆಗಲಿದೆ. ಕಪ್ಪು ಮೈಬಣ್ಣವನ್ನು ಬಹುತೇಕರು ಜರಿಯುತ್ತಾರೆ. ಬಿಳಿ ತ್ವಚೆಯ ಮೇಲೆ ಎಲ್ಲರಿಗೂ ವ್ಯಾಮೋಹ. ಅಂಥ ಕಾನ್ಸೆಪ್ಟ್​​ಗೆ ಸವಾಲೊಡ್ಡುವಂತಹ ಕಥೆಯನ್ನು ‘ಲಕ್ಷಣ’ ಧಾರಾವಾಹಿ ಹೊಂದಿದೆ. ಈ ಸೀರಿಯಲ್​ನ ಪ್ರೋಮೋಗಳು ಈಗಾಗಲೇ ಭಾರಿ ನಿರೀಕ್ಷೆ ಹುಟ್ಟುಹಾಕಿವೆ. ಬಿಗ್​ ಬಾಸ್​ ವೇದಿಕೆಯಲ್ಲಿ ಸುದೀಪ್​ ಕೂಡ ಈ ಧಾರಾವಾಹಿಯ ಬಗ್ಗೆ ಪ್ರಚಾರ ಮಾಡಿದ್ದಾರೆ. ಹಾಗಾಗಿ ಹೈಪ್​ ಸೃಷ್ಟಿ ಆಗಿದೆ.

ಇನ್ನು, ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ರಾತ್ರಿ 10 ಗಂಟೆಗೆ ‘ಕನ್ಯಾಕುಮಾರಿ’ ಎಂಬ ಹೊಸ ಸೀರಿಯಲ್​ ಪ್ರಸಾರಕ್ಕೆ ಅಣಿಯಾಗಿದೆ. ಈ ಧಾರಾವಾಹಿಯ ಕಥೆ ಏನು ಎಂಬುದನ್ನು ತಿಳಿಸುವಂತಹ ಪ್ರೋಮೋಗಳನ್ನು ಈಗಾಗಲೇ ಕಲರ್ಸ್​ ಕಂಡ ವಾಹಿನಿ ಹಂಚಿಕೊಂಡಿದೆ. ಬಡತನದ ಕುಟುಂಬದಲ್ಲಿರುವ ಕಥಾನಾಯಕ ಚರಣ್​ ಒಬ್ಬ ಕ್ಯಾಬ್​ ಚಾಲಕ. ಮನೆ ಚಿಕ್ಕದಾದರೂ ಮನೆಯವರ ಪ್ರೀತಿಗೆ ಕೊರತೆ ಇಲ್ಲ. ಕೆಲಸವನ್ನೇ ದೇವರು ಎಂದು ಆತ ನಂಬಿದ್ದಾನೆ. ಅದೇ ರೀತಿ, ದೇವರಿಗಾಗಿ ಯಾವ ಕೆಲಸ ಬೇಕಾದರೂ ಮಾಡ್ತೀನಿ ಎನ್ನುವ ಹುಡುಗಿ ಕನ್ನಿಕಾ. ಒಂದಿನ ಕಥಾನಾಯಕ ಚರಣ್​ ಕ್ಯಾಬ್​ನಲ್ಲಿ ಕನ್ನಿಕಾ ಕುಳಿತುಕೊಂಡ ಬಳಿಕ ಎಲ್ಲವೂ ಬದಲಾಗಿ ಬಿಡುತ್ತದೆ. ಮುಂದೇನು ಎಂಬುದು ‘ಕನ್ಯಾಕುಮಾರಿ’ ಸೀರಿಯಲ್​ನ ಕಥಾಕೌತುಕ.

ದಿನದಿಂದ ದಿನಕ್ಕೆ ಕಿರುತೆರೆ ಲೋಕ ದೊಡ್ಡದಾಗುತ್ತಿದೆ. ಯಾವ ಸಿನಿಮಾಗೂ ಕಡಿಮೆ ಇಲ್ಲ ಎಂಬಂತೆ ಧಾರಾವಾಹಿಗಳ ತಾಂತ್ರಿಕ ಗುಣಮಟ್ಟ ಹೆಚ್ಚುತ್ತಿದೆ. ಆ ಕಾರಣ ವಾಹಿನಿಗಳ ನಡುವೆ ಭರ್ಜರಿ ಪೈಪೋಟಿ ಕೂಡ ಇದೆ. ಈಗಾಗಲೇ ಪ್ರೇಕ್ಷಕರ ಮನಗೆದ್ದಿರುವ ಇತರೆ ಧಾರಾವಾಹಿಗಳಿಗೆ ‘ಲಕ್ಷಣ’ ಮತ್ತು ‘ಕನ್ಯಾಕುಮಾರಿ’ ಹೇಗೆ ಸ್ಪರ್ಧೆ ನೀಡುತ್ತವೆ ಎಂಬುದನ್ನು ಕಾದುನೋಡಬೇಕು.

ಇದನ್ನೂ ಓದಿ:

‘ನೀವು ಗೆದ್ದು ಬನ್ನಿ’; ಫಿನಾಲೆ ತಲುಪಿದ ಮಂಜುಗೆ ಶಿವರಾಜ್​ಕುಮಾರ್ ವಿಶೇಷ ಹಾರೈಕೆ

ಸಾಮಾಜಿಕ ಸಂದೇಶ ಹೊತ್ತು ಬರುತ್ತಿದ್ದಾರೆ ತನ್ವಿ ರಾವ್; ರಾಧೆ ಶ್ಯಾಮ ಧಾರಾವಾಹಿಯಲ್ಲಿ ಭಿನ್ನ ಪ್ರಯತ್ನ

Follow us on

Related Stories

Most Read Stories

Click on your DTH Provider to Add TV9 Kannada