AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​, ದಿವ್ಯಾಗೆ ಗೆಲ್ಲೋ ಚಾನ್ಸ್​ ಎಷ್ಟು?

ಐದು ಸ್ಪರ್ಧಿಗಳು ಸದ್ಯ ಫಿನಾಲೆ ತಲುಪಿದ್ದು, ಇದರಲ್ಲಿ ಒಬ್ಬರು ಗೆಲ್ಲಲಿದ್ದಾರೆ. ಬಿಗ್​ ಬಾಸ್​ ಗೆಲ್ಲುವ ಸ್ಪರ್ಧಿ ಕಪ್​ ಜತೆಗೆ 50 ಲಕ್ಷ ರೂಪಾಯಿ ಹಣವನ್ನು ಮನೆಗೆ ಕೊಂಡೊಯ್ಯಲಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​, ದಿವ್ಯಾಗೆ ಗೆಲ್ಲೋ ಚಾನ್ಸ್​ ಎಷ್ಟು?
ಪ್ರಶಾಂತ್​ ಸಂಬರಗಿ-ದಿವ್ಯಾ ಉರುಡುಗ
TV9 Web
| Edited By: |

Updated on: Aug 07, 2021 | 7:13 AM

Share

ಕನ್ನಡ ಬಿಗ್​ ಬಾಸ್​ ಸೀಸನ್​ 8ರ ಫಿನಾಲೆ ಇಂದು (ಆ.7) ಹಾಗೂ ನಾಳೆ (ಆ.8) ನಡೆಯುತ್ತಿದೆ. ಈ ಬಾರಿಯ ಬಿಗ್​ ಬಾಸ್​ ಸೀಸನ್​ ಯಾರು ಗೆಲ್ಲಲಿದ್ದಾರೆ ಅನ್ನೋದು ಸದ್ಯದ ಕುತೂಹಲ. ಐದು ಸ್ಪರ್ಧಿಗಳು ಸದ್ಯ ಫಿನಾಲೆ ತಲುಪಿದ್ದು, ಇದರಲ್ಲಿ ಒಬ್ಬರು ಗೆಲ್ಲಲಿದ್ದಾರೆ. ಬಿಗ್​ ಬಾಸ್​ ಗೆಲ್ಲುವ ಸ್ಪರ್ಧಿ ಕಪ್​ ಜತೆಗೆ 50 ಲಕ್ಷ ರೂಪಾಯಿ ಹಣವನ್ನು ಮನೆಗೆ ಕೊಂಡೊಯ್ಯಲಿದ್ದಾರೆ. ಫಿನಾಲೆ ಲಿಸ್ಟ್​ನಲ್ಲಿ ಪ್ರಶಾಂತ್​ ಸಂಬರಗಿ ಹಾಗೂ ದಿವ್ಯಾ ಉರುಡುಗು ಕೂಡ ಇದ್ದು ಇವರು ಗೆಲ್ಲೋ ಸಾಧ್ಯತೆ ತುಂಬಾನೇ ಕಡಿಮೆ ಅನ್ನೋದು ಅಭಿಮಾನಿಗಳ ಲೆಕ್ಕಾಚಾರ.

ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಉರುಡುಗ ಸ್ಟ್ರಾಂಗ್​ ಕಂಟೆಸ್ಟೆಂಟ್​​ ಆಗಿ ಗುರುತಿಸಿಕೊಂಡಿದ್ದಾರೆ. ಮನೆಯಲ್ಲಿ ಕ್ಯಾಪ್ಟನ್​ ಆದ ಮೊದಲ ಮಹಿಳಾ ಸ್ಪರ್ಧಿ ಎಂದರೆ ಅದು ದಿವ್ಯಾ ಉರುಡುಗ. ಪ್ರತಿ ಟಾಸ್ಕ್​ ಅನ್ನು ಅವರು ಉತ್ತಮವಾಗಿ ಆಡುತ್ತಾರೆ. ಇನ್ನು, ಅರವಿಂದ್​ ಜತೆಗಿನ ಗೆಳೆತನ ಎಲ್ಲರ ಗಮನ ಸೆಳೆಯುತ್ತಿದೆ. ಈ ಎಲ್ಲಾ ಕಾರಣಕ್ಕೆ ದಿವ್ಯಾ ಫಿನಾಲೆ ತಲುಪಿದ್ದಾರೆ. ಆದರೆ, ವೈಷ್ಣವಿ, ಮಂಜು ಹಾಗೂ ಅರವಿಂದ್​ಗೆ ಕಾಂಪಿಟೇಷನ್​ ನೀಡಿ ದಿವ್ಯಾ ಉರುಡುಗ ಬಿಗ್​ ಬಾಸ್​ ಗೆಲ್ಲುವ ಸಾಧ್ಯತೆ ತುಂಬಾನೇ ಕಡಿಮೆ ಎನ್ನಲಾಗುತ್ತಿದೆ. ಹೀಗಾಗಿ, ಅವರು ಈ ಬಾರಿ ಕಪ್​ ಗೆಲ್ಲುವ ಸಾಧ್ಯತೆ ತುಂಬಾನೇ ಕಡಿಮೆ.

ಇನ್ನು ಪ್ರಶಾಂತ್​ ಸಂಬರಗಿ ಕೂಡ ಫಿನಾಲೆ ಲಿಸ್ಟ್​ನಲ್ಲಿದ್ದಾರೆ. ಇವರು ಎರಡು ಬಾರಿ ಬಿಗ್​ ಬಾಸ್​ ಎಕ್ಸಿಟ್​ ಬಾಗಿಲನ್ನು ಮುಟ್ಟಿ ಬಂದಿದ್ದಾರೆ. ಮನೆಯಲ್ಲಿ ನ್ಯಾಯದ ಪರ ಹಾಗೂ ಗುಂಪುಗಾರಿಕೆ ವಿರುದ್ಧ ತೀವ್ರವಾಗಿ ಹೋರಾಡಿದವರು ಪ್ರಶಾಂತ್​. ಸಾಕಷ್ಟು ಬಾರಿ ಅವರು ಏರು ಧ್ವನಿಯಲ್ಲಿ ಮಾತನಾಡಿದ್ದಾರೆ. ನಾಲ್ಕು ಬಾರಿ ಕಳಪೆ ಪಟ್ಟ ಪಡೆದಿದ್ದಾರೆ ಪ್ರಶಾಂತ್​. ಅಂತಿಮವಾಗಿ ಪ್ರಶಾಂತ್​ ಸಂಪೂರ್ಣವಾಗಿ ಬದಲಾಗಿದ್ದರು. ಅವರು ಎಲ್ಲರ ಜತೆ ಬೆರೆಯೋಕೆ ಪ್ರಾರಂಭಿಸಿದ್ದರು. ಇದು ಅವರಿಗೆ ಪ್ಲಸ್​ ಪಾಯಿಂಟ್​ ಆಗಿದೆ. ಆದರೆ, ಪ್ರಶಾಂತ್​ ಗೆಲ್ಲುವ ಸಾಧ್ಯತೆ ತುಂಬಾನೇ ಕಡಿಮೆ ಎಂದೇ ಹೇಳಲಾಗುತ್ತಿದೆ.

ಇದನ್ನೂ ಓದಿ:

ಪ್ರಶಾಂತ್​ ಕಾರಿನ ಮೇಲೆ ದೈತ್ಯ ಕಲ್ಲನ್ನು ಹಾಕಿದ್ದ ದುಷ್ಕರ್ಮಿಗಳು; ಕೊಲೆ ಪ್ರಯತ್ನದ ಬಗ್ಗೆ ಬಿಗ್​ ಬಾಸ್​ನಲ್ಲಿ ಹೇಳಿಕೊಂಡ ಸಂಬರಗಿ

ಹಳೆಯ ಫೋಟೋ ವೈರಲ್​ ಪ್ರಕರಣ; ಕೋರ್ಟ್​ ಮೊರೆ ಹೋದ ಬಿಗ್​ ಬಾಸ್​ ಸ್ಪರ್ಧಿ ದಿವ್ಯಾ ಉರುಡುಗ

Follow Us
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ