ಪ್ರಶಾಂತ್​ ಕಾರಿನ ಮೇಲೆ ದೈತ್ಯ ಕಲ್ಲನ್ನು ಹಾಕಿದ್ದ ದುಷ್ಕರ್ಮಿಗಳು; ಕೊಲೆ ಪ್ರಯತ್ನದ ಬಗ್ಗೆ ಬಿಗ್​ ಬಾಸ್​ನಲ್ಲಿ ಹೇಳಿಕೊಂಡ ಸಂಬರಗಿ

ಪ್ರಶಾಂತ್​ ಕಾರಿನ ಮೇಲೆ ದೈತ್ಯ ಕಲ್ಲನ್ನು ಹಾಕಿದ್ದ ದುಷ್ಕರ್ಮಿಗಳು; ಕೊಲೆ ಪ್ರಯತ್ನದ ಬಗ್ಗೆ ಬಿಗ್​ ಬಾಸ್​ನಲ್ಲಿ ಹೇಳಿಕೊಂಡ ಸಂಬರಗಿ
ಪ್ರಶಾಂತ್​ ಸಂಬರಗಿ

ಪ್ರಶಾಂತ್​ ಅವರ ಕುಲದೇವರು ಎಲ್ಲಮ್ಮ. ಆ ದೇವಿಯಿಂದ ಆದ ಪವಾಡಗಳು ಹಲವು ಅನ್ನೋದು ಅವರ ಅಭಿಪ್ರಾಯ.

TV9kannada Web Team

| Edited By: Rajesh Duggumane

Aug 06, 2021 | 10:48 AM

ಹೋರಾಟ, ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡವರಿಗೆ ಕೊಲೆ ಬೆದರಿಕೆ ಬರೋದು ಸಾಮಾನ್ಯ. ಅವರು ಮಾಡುವ ಸಮಾಜಮುಖಿ ಕೆಲಸ ದುಷ್ಟರ ಕೆಂಗಣ್ಣಿಗೆ ಗುರಿಯಾಗುತ್ತದೆ. ಈ ಕಾರಣಕ್ಕೆ ಬೆದರಿಕೆಗಳು ಬರುತ್ತವೆ. ಬಿಗ್​ ಬಾಸ್​ ಮನೆಯಲ್ಲಿರುವ ಪ್ರಶಾಂತ್​ ಸಂಬರಗಿಗೂ ಇದೇ ರೀತಿ ಆಗಿತ್ತಂತೆ. ಅವರು ಈ ಬಗ್ಗೆ ಹೇಳಿಕೊಂಡಿದ್ದಾರೆ.

ತಮ್ಮಿಷ್ಟದ ದೇವರು ಯಾರು ಮತ್ತು ಏಕೆ ಎಂದು ಹೇಳುವ ಅವಕಾಶವನ್ನು ಬಿಗ್​ ಬಾಸ್​ ಕಲ್ಪಿಸಿಕೊಟ್ಟಿದ್ದರು. ಈ ವೇಳೆ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಾದ ಪವಾಡಗಳನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೆ, ತಾವು ಆರಾಧಿಸುವ ದೇವರನ್ನು ನೆನೆದಿದ್ದಾರೆ. ಪ್ರಶಾಂತ್​ ಅವರ ಕುಲದೇವರು ಎಲ್ಲಮ್ಮ. ಆ ದೇವಿಯಿಂದ ಆದ ಪವಾಡಗಳು ಹಲವು ಅನ್ನೋದು ಅವರ ಅಭಿಪ್ರಾಯ.

‘10ನೇ ತರಗತಿವರೆಗೂ ನಾನು ನಾಸ್ತಿಕನಾಗಿದ್ದೆ. ಆದರೆ, ನನ್ನ ತಾಯಿ ಹೇಳುವ ಘಟನೆ ನನ್ನನ್ನು ಬದಲಾಯಿಸಿತು. ಸಾಕಷ್ಟು ದುರ್ಘಟನೆಗಳು ನನ್ನ ಜೀವನದಲ್ಲಿ ನಡೆದವು. ನಮ್ಮ ಮನೆ ದೇವರು ಎಲ್ಲಮ್ಮ. ಆ ಶಕ್ತಿ ನನ್ನನ್ನು ಕಾಪಾಡುತ್ತಿದೆ ಎಂದಾಗ ದೇವರನ್ನು ನಂಬಲು ಪ್ರಾರಂಭಿಸಿದೆ. ಪ್ರತಿ ಶುಕ್ರವಾರ ನಾನು ಬನಶಂಕರಿ ದೇವಿಗೆ ನಿಂಬೆ ಹಣ್ಣು ತುಪ್ಪ ಕೊಟ್ಟು ಬರ್ತೀನಿ. ಇದರಿಂದ ಸಾಕಷ್ಟು ಅಡೆತಡೆ ದಾಟಿಕೊಂಡು ಬಂದಿದ್ದೇನೆ’ ಎಂದಿದ್ದಾರೆ ಪ್ರಶಾಂತ್​.

‘ನನ್ನ ಹೋರಾಟದ ಜೀವನದಲ್ಲಿ ಅನೇಕ ಬಾರಿ ಕೊಲೆ ಬೆದರಿಕೆ ಬಂದಿತ್ತು. ನನ್ನ ಕಾರಿನ ಮೇಲೆ ದೊಡ್ಡದಾದ ಕಲ್ಲನ್ನು ಹಾಕಿದ್ದರು. ನಾನು ಪೊಲೀಸ್​ ದೂರು ನೀಡಿದೆ. ಪೊಲೀಸರು ಭದ್ರತೆ ತೆಗೆದುಕೊಳ್ಳಿ ಎಂದರು. ಆಗ ನನ್ನ ತಾಯಿ ‘ದೇವಿ ಕಾಪಾಡ್ತಾಳೆ’ ಅಂದರು. ನಾನು ಭಾನುವಾರವೂ ದೇವಸ್ಥಾನಕ್ಕೆ ಹೋಗೋಕೆ ಶುರು ಮಾಡಿದೆ. ಅದು ಭಯ ಎಂದಲ್ಲ. ಆದ್ರೆ, ಹೇಗೆ ಕಷ್ಟ ದಾಟಬೇಕು ಎಂಬುದನ್ನು ತಿಳಿದುಕೊಳ್ಳೋ ಮಾರ್ಗ’ ಎಂದು ಪವಾಡ ನೆನಪಿಸಿಕೊಂಡರು.

‘ಬಿಗ್​ ಬಾಸ್​ ಮನೆಯಲ್ಲಿ ನಾನು ಎರಡು ಬಾರಿ ಬಾಗಿಲು ಮುಟ್ಟಿ ಬಂದಿದ್ದೆ. ಪ್ರತಿ ಬಾರಿ ನಾಮಿನೇಷನ್​ ಬಂದಾಗ ದೇವಿಗೆ ಕೈ ಮುಗಿದಿದ್ದೆ. ನಾನು ಮಾಡಿದ್ದನ್ನು ಜನರಿಗೆ ತಲುಪಿಸೋ ಕೆಲಸ ನಿನ್ನದೇ ಎಂದು ದೇವಿ ಮೇಲೆ ಭಾರ ಹಾಕಿದ್ದೆ’ ಎಂದು ಭಾವುಕರಾದರು ಪ್ರಶಾಂತ್​.

ಇದನ್ನೂ ಓದಿ: ‘ಅರವಿಂದ್ ಪೊಸೆಸಿವ್​​ನೆಸ್​ ಒಂದು ದಿನ ನಿಮಗೆ ಉಸಿರುಗಟ್ಟಿಸುತ್ತದೆ’; ದಿವ್ಯಾಗೆ ಇದು ಎಚ್ಚರಿಕೆಯ ಗಂಟೆ

ಗಾಯಕ ನವೀನ್​ ಸಜ್ಜು ಪ್ರಕಾರ ’ಕನ್ನಡ ಬಿಗ್​ ಬಾಸ್ ಸೀಸನ್​ 8’​ ಗೆಲ್ಲೋರು ಇವರೇ

Follow us on

Related Stories

Most Read Stories

Click on your DTH Provider to Add TV9 Kannada