ಬಿಗ್ ಬಾಸ್ ಫಿನಾಲೆಯಲ್ಲಿ ಅರವಿಂದ್​ ಕೆಪಿ ಗೆಲುವಿಗೂ, ಸೋಲಿಗೂ ಕಾರಣವಾಗಬಹುದು ಈ ಅಂಶಗಳು

ಬಿಗ್ ಬಾಸ್ ಫಿನಾಲೆಯಲ್ಲಿ ಅರವಿಂದ್​ ಕೆಪಿ ಗೆಲುವಿಗೂ, ಸೋಲಿಗೂ ಕಾರಣವಾಗಬಹುದು ಈ ಅಂಶಗಳು
ಅರವಿಂದ್ ಕೆಪಿ

ವೃತ್ತಿಪರ ಬೈಕರ್​ ಅರವಿಂದ್ ಕೆ.ಪಿ. ತಮಗೆ ಸಂಬಂಧ ಇರದ ಕ್ಷೇತ್ರದೊಳಗೆ ಕಾಲಿಟ್ಟು ಕರ್ನಾಟಕ ಜನತೆಯ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

Rajesh Duggumane

|

Aug 06, 2021 | 3:51 PM

ಬಿಗ್ ಬಾಸ್​ ವೇದಿಕೆಗೆ ಮನರಂಜನಾ ಕ್ಷೇತ್ರದಿಂದ ಬಂದವರು ಮಾತ್ರ ಕ್ಲಿಕ್​ ಆಗುತ್ತಾರೆ, ಉಳಿದ ಕ್ಷೇತ್ರದಿಂದ ಬಂದರೆ ಹೇಳ ಹೆಸರಿಲ್ಲದಂತೆ ಹೋಗುತ್ತಾರೆ ಎನ್ನುವ ನಂಬಿಕೆ ಒಂದಿತ್ತು. ಆದರೆ, ಇದನ್ನು ವೃತ್ತಿಪರ ಬೈಕರ್​ ಅರವಿಂದ್ ಕೆ.ಪಿ. ಸುಳ್ಳು ಮಾಡಿದ್ದಾರೆ. ತಮಗೆ ಸಂಬಂಧ ಇರದ ಕ್ಷೇತ್ರದೊಳಗೆ ಕಾಲಿಟ್ಟು ಕರ್ನಾಟಕ ಜನತೆಯ ಗಮನ ಸೆಳೆಯುವಲ್ಲಿ ಅರವಿಂದ್ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲ, ಅವರು ಗೆಲ್ಲುವ ಸ್ಪರ್ಧಿ ಎಂದೇ ಬಿಂಬಿಸಲಾಗುತ್ತಿದೆ. ಹಾಗಾದರೆ, ಅರವಿಂದ್ ಪ್ಲಸ್​ ಪಾಯಿಂಟ್​ ಏನು? ಅವರ ಮೈನಸ್​ ಪಾಯಿಂಟ್​ ಏನು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಅರವಿಂದ್​ ಪ್ಲಸ್​ ಪಾಯಿಂಟ್​ಗಳು

ಕಾನ್ಫಿಡೆನ್ಸ್​

ಅರವಿಂದ್​ ಮೂಲತಃ ಉಡುಪಿಯವರು. ಅವರು ಬೇರೆಬೇರೆ ರಾಷ್ಟ್ರಗಳಲ್ಲಿ ಬೈಕ್​ ಓಡಿಸಿದ್ದಾರೆ. ಅನೇಕ ಕಠಿಣ ಪರಿಸ್ಥಿತಿಗಳನ್ನು ಅವರು ಎದುರಿಸಿ ಬಂದಿದ್ದಾರೆ. ಹೀಗಾಗಿ, ಅವರ ಕಾನ್ಫಿಡೆನ್ಸ್​ ಮಟ್ಟ ತುಂಬಾನೇ ಹೆಚ್ಚಿದೆ. ಅವರು ಏನನ್ನೇ ಹೇಳುವುದಿದ್ದರೂ ಆತ್ಮವಿಶ್ವಾಸದಿಂದ ಹೇಳುತ್ತಾರೆ. ಜನರಿಗೆ ಅವರು ಇಷ್ಟವಾಗುವುದಕ್ಕೆ ಇದು ಪ್ರಮುಖ ಕಾರಣ.

ಟಾಸ್ಕ್​ ಆಡುವ ರೀತಿ

ಬಿಗ್​ ಬಾಸ್​ ಮನೆಯಲ್ಲಿ ಟಾಸ್ಕ್​ಗಳು ತುಂಬಾನೇ ಪ್ರಾಮುಖ್ಯತೆ ವಹಿಸುತ್ತವೆ. ಇದರ ಆಧಾರದ ಮೇಲೆ ಎಲ್ಲರನ್ನೂ ಅಳೆಯಲಾಗುತ್ತದೆ. ಅರವಿಂದ್​ ಅದ್ಭುತವಾಗಿ ಟಾಸ್ಕ್​ ಆಡಿದ್ದಾರೆ. ಈ ಕಾರಣಕ್ಕೆ ಅವರು ಎಲ್ಲರಿಗೂ ಇಷ್ಟವಾಗುತ್ತಾರೆ.

ಗಮನ ಸೆಳೆಯುವ ವ್ಯಕ್ತಿತ್ವ

ಬಿಗ್​ ಬಾಸ್​ ಮನೆಯಲ್ಲಿ ಹೆಚ್ಚು ದಿನ ನಕಲಿ ಗುಣಗಳನ್ನು ತೋರಿಸಿಕೊಂಡು ಇರೋಕೆ ಸಾಧ್ಯವಿಲ್ಲ. ಇದು ವೀಕ್ಷಕರಿಗೆ ಗೊತ್ತಾಗಿ ಬಿಡುತ್ತದೆ. ಅರವಿಂದ್ ಬಿಗ್​ ಬಾಸ್​ ಮನೆಯಲ್ಲಿ ತಮ್ಮ ನೈಜ ವ್ಯಕ್ತಿತ್ವನ್ನು ಬಿಚ್ಚಿಟ್ಟರು. ತಪ್ಪಿದ್ದಾಗ ತಪ್ಪು ಎಂದರು, ಸರಿ ಇದ್ದಾಗ ಸರಿ ಎಂದರು. ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡು ಮುನ್ನಡೆದರು. ಎಲ್ಲರ ಜತೆ ಹೊಂದಿಕೊಂಡರು. ಈ ಕಾರಣಕ್ಕೆ ಅರವಿಂದ್ ವೀಕ್ಷಕರಿಗೆ ಇಷ್ಟವಾಗುತ್ತಾ ಹೋದರು.

ಪ್ರೀತಿ-ಪ್ರೇಮ ವಿಚಾರ

ಬಿಗ್​ ಬಾಸ್​ ಮನೆಯಲ್ಲಿ ಅರವಿಂದ್ ಹಾಗೂ ದಿವ್ಯಾ ಉರುಡುಗ ಪರಸ್ಪರ ಪ್ರೀತಿಸುತ್ತಿದ್ದಾರೆ ಎನ್ನಲಾಗಿದೆ. ಇದನ್ನು ಅನೇಕ ಬಾರಿ ಅವರೇ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಕೂಡ. ಇವರ ಜೋಡಿ ನೋಡಿ ಅನೇಕರು ಮೆಚ್ಚಿಕೊಂಡಿದ್ದಾರೆ. ಹೀಗಾಗಿ, ಇದು ಕೂಡ ಅವರ ಬಿಗ್​ ಬಾಸ್​ ಜರ್ನಿಗೆ ಸಾಕಷ್ಟು ಮೈಲೇಜ್​ ನೀಡಿದೆ.

ಮೈನಸ್​ ಪಾಯಿಂಟ್​​

ಮನರಂಜನೆ ನೀಡುವುದಿಲ್ಲ:

ಅರವಿಂದ್ ಬಿಗ್​ ಬಾಸ್​ ಮನೆಯಲ್ಲ ಮನರಂಜನೆ ನೀಡುವುದಿಲ್ಲ ಎನ್ನುವ ಮಾತು ಮೊದಲಿನಿಂದಲೂ ಇದೆ. ಅವರು ಟಾಸ್ಕ್​ನಲ್ಲಿ ಚುರುಕಾಗಿರುತ್ತಾರೆ ನಿಜ, ಆದರೆ ಅವರಿಗೆ ಎಲ್ಲರನ್ನೂ ನಗಿಸೋಕೆ ಬರುವುದಿಲ್ಲ. ಮನರಂಜನೆ ನೀಡುವುದಿಲ್ಲ. ಇದನ್ನು ಸಾಕಷ್ಟು ಬಾರಿ ಮನೆ ಮಂದಿ ಕೂಡ ಒಪ್ಪಿಕೊಂಡಿದ್ದಾರೆ.

ದಿವ್ಯಾ ಜತೆಗಿನ ಪ್ರೀತಿ:

ದಿವ್ಯಾ ಉರುಡುಗ ಜತೆಗಿನ ಪ್ರೀತಿ ಅರವಿಂದ್​ಗೆ ಮುಳುವಾಗುವ ಸಾಧ್ಯತೆಯೂ ಇದೆ. ಅರವಿಂದ್ ಹಾಗೂ ದಿವ್ಯಾ ಅಭಿಮಾನಿ ವರ್ಗ ದೊಡ್ಡದಿದೆ. ಇದರಿಂದ ವೋಟ್​ಗಳು ಹಂಚಿಹೋಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಒಂದಷ್ಟು ಮತಗಳು ಅರವಿಂದ್​ಗೆ ಬಿದ್ದರೆ, ಇನ್ನೂ ಕೆಲ ವೋಟ್​ಗಳು ದಿವ್ಯಾಗೆ ಬೀಳಬಹುದು.

ಕಾಂಪಿಟೇಷನ್​:

ಅರವಿಂದ್​ಗೆ ವೈಷ್ಣವಿ ಗೌಡ ಹಾಗೂ ಮಂಜು ಟಫ್​ ಕಾಂಪಿಟೇಟರ್​. ಬಿಗ್​ ಬಾಸ್​ ಮನೆಯಿಂದ ಹೊರ ಹೋದ ಶುಭಾ ಪೂಂಜಾ ಹಾಗೂ ದಿವ್ಯಾ ಸುರೇಶ್​ ಅವರು ಮಂಜುಗೆ ವೋಟ್​ ಮಾಡುವಂತೆ ಕೇಳುತ್ತಿದ್ದಾರೆ. ರಘು ಗೌಡ ಅವರು ವೈಷ್ಣವಿಗೆ ಹಾಗೂ ಶಮಂತ್​ ಅವರು ಪ್ರಶಾಂತ್​ಗೆ ವೋಟ್​ ಮಾಡುವಂತೆ ಅಭಿಮಾನಿಗಳ ಬಳಿ ಕೋರುತ್ತಿದ್ದಾರೆ. ಅರವಿಂದ್​ ಅವರು ದಿವ್ಯಾಗೆ ಮಾತ್ರ ಸೀಮಿತವಾಗಿದ್ದರಿಂದ ಅವರಿಗೆ ಬೆಂಬಲ ಸ್ವಲ್ಪ ಕಡಿಮೆ ಆಗಿದೆ ಎನ್ನಬಹುದು.

ಇದನ್ನೂ ಓದಿ:  ಬಿಗ್​ ಬಾಸ್​ ಅರವಿಂದ್​ಗಿದೆ ಸಿನಿಮಾ ಹಿನ್ನೆಲೆ; ಅವರು ನಟಿಸಿರೋ ಚಿತ್ರಗಳಾವವು ಗೊತ್ತಾ?

Follow us on

Related Stories

Most Read Stories

Click on your DTH Provider to Add TV9 Kannada