‘ನೀವು ಗೆದ್ದು ಬನ್ನಿ’; ಫಿನಾಲೆ ತಲುಪಿದ ಮಂಜುಗೆ ಶಿವರಾಜ್​ಕುಮಾರ್ ವಿಶೇಷ ಹಾರೈಕೆ

‘ಕನ್ನಡ ಬಿಗ್​ ಬಾಸ್​ ಸೀಸನ್​ 8’ ಕೊನೆಯ ಹಂತ ತಲುಪಿದೆ. ಮನೆಯಲ್ಲಿ 5 ಸ್ಪರ್ಧಿಗಳಿದ್ದು ಶನಿವಾರ ಹಾಗೂ ಭಾನುವಾರ ಫಿನಾಲೆ ನಡೆಯುತ್ತಿದೆ. ಈ ಮಧ್ಯೆ ಮನೆಯ ಸದಸ್ಯರಿಗೆ ವಿಶೇಷ ಆಯ್ಕೆ ನೀಡಲಾಗಿತ್ತು.

‘ನೀವು ಗೆದ್ದು ಬನ್ನಿ’; ಫಿನಾಲೆ ತಲುಪಿದ ಮಂಜುಗೆ ಶಿವರಾಜ್​ಕುಮಾರ್ ವಿಶೇಷ ಹಾರೈಕೆ
‘ಒಂದೇ ಒಂದು ಆಸೆ ಇದೆ. ಶಿವಣ್ಣ ಅಂದ್ರೆ ಇಷ್ಟ. ಅವರ ಕಡೆಯಿಂದ ಆಶೀರ್ವಾದ ಬೇಕು. ಇದು ನನ್ನ ಆಸೆ. ಪ್ಲೀಸ್​, ದಯವಿಟ್ಟು ಇದನ್ನು ನೆರವೇರಿಸಿ’ ಎಂದು ಮಂಜು ಬಿಗ್​ ಬಾಸ್​ ಮನೆಯಲ್ಲಿ ಕೇಳಿಕೊಂಡಿದ್ದರು. ಈ ಆಸೆಯನ್ನು ಬಿಗ್​ ಬಾಸ್​ ನೆರವೇರಿಸಿದ್ದರು.
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 06, 2021 | 3:52 PM

ಮಂಜು ಪಾವಗಡ ಬಿಗ್​ ಬಾಸ್​ ಮನೆಯಲ್ಲಿ ತಮ್ಮ ಭಿನ್ನ ವ್ಯಕ್ತಿತ್ವದ ಮೂಲಕ ಗುರುತಿಸಿಕೊಂಡಿದ್ದಾರೆ. ಅವರ ಹಾವಭಾವ ಎಲ್ಲರಿಗೂ ಇಷ್ಟವಾಗುತ್ತದೆ. ಅವರ ಪಂಚಿಂಗ್​ ಡೈಲಾಗ್​ಗಳನ್ನು ಇಷ್ಟಪಡದವರಿಲ್ಲ. ಈಗ ಫಿನಾಲೆಗೆ ಎರಡು ದಿನ ಬಾಕಿ ಇದೆ. ಅದಕ್ಕೂ ಮೊದಲು ಮಂಜುಗೆ ವಿಶೇಷ ಹಾರೈಕೆ ಒಂದು ಸಿಕ್ಕಿದೆ. ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​ ಅವರು ಮಂಜುಗೆ ವಿಶೇಷವಾಗಿ ವಿಷ್​ ಮಾಡಿದ್ದಾರೆ.

‘ಕನ್ನಡ ಬಿಗ್​ ಬಾಸ್​ ಸೀಸನ್​ 8’ ಕೊನೆಯ ಹಂತ ತಲುಪಿದೆ. ಮನೆಯಲ್ಲಿ 5 ಸ್ಪರ್ಧಿಗಳಿದ್ದು ಶನಿವಾರ ಹಾಗೂ ಭಾನುವಾರ ಫಿನಾಲೆ ನಡೆಯುತ್ತಿದೆ. ಈ ಮಧ್ಯೆ ಮನೆಯ ಸದಸ್ಯರಿಗೆ ವಿಶೇಷ ಆಯ್ಕೆ ನೀಡಲಾಗಿತ್ತು. ಬಿಗ್​ ಬಾಸ್​ ಮನೆಯ ಗಾರ್ಡನ್​ ಏರಿಯಾದಲ್ಲಿ ಕಿವಿ ಆಕೃತಿ ಒಂದನ್ನು ಇರಿಸಲಾಗಿತ್ತು. ಆ ಕಿವಿ ಬಳಿ ಹೋಗಿ ಸ್ಪರ್ಧಿಗಳು ತಮ್ಮಿಚ್ಛೆಯನ್ನು ಕೋರಬೇಕು. ಈಡೇರುವ ಆಸೆ ಆಗಿದ್ದರೆ ಬಿಗ್​ ಬಾಸ್​ ಅದನ್ನು ಪೂರ್ಣಗೊಳಿಸುತ್ತಾರೆ. ಮನೆಯ ಎಲ್ಲಾ ಸ್ಪರ್ಧಿಗಳು ತಮ್ಮಿಷ್ಟದ್ದನ್ನು ಕೋರಿದ್ದರು. ಈ ವೇಳೆ ಮಂಜು ಪಾವಗಡ ಶಿವರಾಜ್​ಕುಮಾರ್​ ಅವರ ಶುಭ ಹಾರೈಕೆ​ ಬೇಕು ಎಂದು ಕೋರಿದ್ದರು.

‘ಒಂದೇ ಒಂದು ಆಸೆ ಇದೆ. ಶಿವಣ್ಣ ಅಂದ್ರೆ ಇಷ್ಟ. ಅವರ ಕಡೆಯಿಂದ ಆಶೀರ್ವಾದ ಬೇಕು. ಇದು ನನ್ನ ಆಸೆ. ಪ್ಲೀಸ್​, ದಯವಿಟ್ಟು ಇದನ್ನು ನೆರವೇರಿಸಿ’ ಎಂದು ಮಂಜು ಕವಿಯ ಆಕೃತಿ ಬಳಿ ಕೋರಿದ್ದರು. ಇದು ಈಡೇರಿದೆ. ‘ಹಾಯ್​ ಮಂಜು ಬಿಗ್​ ಬಾಸ್​ ಫಿನಾಲೆಗೆ ಬಂದಿದ್ದೀರಿ. ಇದನ್ನು ಕೇಳಿ ತುಂಬಾನೇ ಖುಷಿ ಆಯ್ತು. ಗೆದ್ದು ಬನ್ನಿ. ಎಲ್ಲರಿಗೂ ಒಳ್ಳೆಯದಾಗಲಿ. ಮಂಜು ನಿಮಗೆ ಮತ್ತೊಮ್ಮೆ ಆಲ್​ ದಿ ಬೆಸ್ಟ್​​. ಲವ್​​ ಯು’ ಎಂದು ವಿಷ್​ ಮಾಡಿದ್ದಾರೆ.

‘ಫ್ಯಾನ್ ಆಸೆ ಈಡೇರಿಸಿದ ಶಿವಣ್ಣ’ ಎನ್ನುವ ಕ್ಯಾಪ್ಶನ್​ ಅಡಿಯಲ್ಲಿ ಕಲರ್ಸ್​ ಕನ್ನಡ ವಾಹಿನಿ ಈ ಪ್ರೋಮೋ ಹಂಚಿಕೊಂಡಿದೆ. ಈ ಪ್ರೋಮೋ ನೋಡಿದ ಅನೇಕರು ಖುಷಿಪಟ್ಟಿದ್ದಾರೆ. ಅಲ್ಲದೆ, ಮಂಜು ಗೆಲ್ಲಲಿ ಎಂದು ವಿಶೇಷವಾಗಿ ವಿಷ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: ಪ್ರಶಾಂತ್​ ಕಾರಿನ ಮೇಲೆ ದೈತ್ಯ ಕಲ್ಲನ್ನು ಹಾಕಿದ್ದ ದುಷ್ಕರ್ಮಿಗಳು; ಕೊಲೆ ಪ್ರಯತ್ನದ ಬಗ್ಗೆ ಬಿಗ್​ ಬಾಸ್​ನಲ್ಲಿ ಹೇಳಿಕೊಂಡ ಸಂಬರಗಿ

ಬಿಗ್​ ಬಾಸ್​ ಮನೆಯಲ್ಲಿ ಮಂಜು ಕೋರಿಕೆ ದಿವ್ಯಾಗೆ ಶಾಪವಾಯ್ತು; ನೊಂದುಕೊಂಡ ಉರುಡುಗ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ