ಬಿಗ್​ ಬಾಸ್​ ಮನೆಯಲ್ಲಿ ಮಂಜು ಕೋರಿಕೆ ದಿವ್ಯಾಗೆ ಶಾಪವಾಯ್ತು; ನೊಂದುಕೊಂಡ ಉರುಡುಗ

ಬಿಗ್​ ಬಾಸ್​ ಕೊನೆಯ ವಾರದಲ್ಲಿ ವಿಶೇಷ ಸವಲತ್ತುಗಳನ್ನು ನೀಡಲಾಗುತ್ತಿದೆ. ಇದರನ್ವಯ ಸ್ಪರ್ಧಿಗಳಿಗೋಸ್ಕರ ವಿಶೇಷ ಫೋಟೋ ವಾಲ್​ ಸಿದ್ಧಪಡಿಸಲಾಗಿದೆ.

ಬಿಗ್​ ಬಾಸ್​ ಮನೆಯಲ್ಲಿ ಮಂಜು ಕೋರಿಕೆ ದಿವ್ಯಾಗೆ ಶಾಪವಾಯ್ತು; ನೊಂದುಕೊಂಡ ಉರುಡುಗ
ಬಿಗ್​ ಬಾಸ್​ ಮನೆಯಲ್ಲಿ ಮಂಜು ಕೋರಿಕೆ ದಿವ್ಯಾಗೆ ಶಾಪವಾಯ್ತು; ನೊಂದುಕೊಂಡ ಉರುಡುಗ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 06, 2021 | 2:33 PM

‘ಕನ್ನಡ ಬಿಗ್​ ಬಾಸ್​ ಸೀಸನ್​ 8’ ಫಿನಾಲೆ ಹಂತ ತಲುಪಿದೆ. ಶನಿವಾರ ಹಾಗೂ ಭಾನುವಾರ ಫಿನಾಲೆ ನಡೆಯಲಿದೆ. ಭಾನುವಾರ ರಾತ್ರಿ ಯಾರು ವಿಜೇತರು ಎನ್ನುವುದು ಘೋಷಣೆ ಆಗಲಿದೆ. ಇದಕ್ಕೂ ಮೊದಲು ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ ಕೋರಿಕೆ ಒಂದನ್ನು ಇಟ್ಟಿದ್ದರು. ಇದು ದಿವ್ಯಾ ಉರುಡುಗಗೆ ಶಾಪವಾಗಿದೆ. ಅಷ್ಟೇ ಅಲ್ಲ, ಈ ವಿಚಾರಕ್ಕೆ ಅವರು ತುಂಬಾನೇ ನೊಂದುಕೊಂಡಿದ್ದಾರೆ.

ಬಿಗ್​ ಬಾಸ್​ ಕೊನೆಯ ವಾರದಲ್ಲಿ ವಿಶೇಷ ಸವಲತ್ತುಗಳನ್ನು ನೀಡಲಾಗುತ್ತಿದೆ. ಇದರನ್ವಯ ಸ್ಪರ್ಧಿಗಳಿಗೋಸ್ಕರ ವಿಶೇಷ ಫೋಟೋ ವಾಲ್​ ಸಿದ್ಧಪಡಿಸಲಾಗಿದೆ. ಅಂದರೆ, ಫಿನಾಲೆಯಲ್ಲಿರುವ ಪ್ರತಿ ಸ್ಪರ್ಧಿಗಳ ಪ್ರಯಾಣದ ಫೋಟೋ ಝಲಕ್​ ಈ ವಾಲ್​ನಲ್ಲಿರುತ್ತದೆ. ಮೊದಲ ದಿನ ಅರವಿಂದ್ ಫೋಟೋ ವಾಲ್​, ಎರಡನೇ ದಿನ ವೈಷ್ಣವಿ ಹಾಗೂ ಮೂರನೇ ದಿನ ಮಂಜು ಪಾವಗಡ ಅವರ ಫೋಟೋ ವಾಲ್​ಅನ್ನು ಬಿಗ್​ ಬಾಸ್​ ಅನಾವರಣ ಮಾಡಿದ್ದರು.

ಆಗಸ್ಟ್​ 5ರ ಎಪಿಸೋಡ್​ನಲ್ಲಿ ದಿವ್ಯಾ ಉರುಡುಗ ಅವರ ಫೋಟೋ ವಾಲ್​ ಬರಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಈ ಕಾರಣಕ್ಕೆ ದಿವ್ಯಾ ಸ್ನಾನ ಮಾಡಿ ಅದ್ಭುತವಾಗಿ ರೆಡಿ ಆಗಿದ್ದರು. ಈ ಬಗ್ಗೆ ಮಂಜು ಪ್ರಶ್ನೆ ಮಾಡಿದ್ದಾರೆ. ‘ಏನಮ್ಮ ಇವತ್ತು ಅದ್ಭುತವಾಗಿ ರೆಡಿ ಆಗಿದ್ದೀಯಾ. ಏನು ಕಾರಣ? ಯಾವಾಗಲೂ ಇಷ್ಟೊಂದು ರೆಡಿ ಆಗಿದ್ದು ಕಂಡಿರಲಿಲ್ಲ. ಈಗ ಫೋಟೋ ವಾಲ್ ಪ್ರಶಾಂತ್​ ಅವರದ್ದಾಗಿರಬೇಕು. ದೇವರೇ ನಾನೇನು ಹೇಳಲ್ಲ, ನಿಂಗೇ ಎಲ್ಲವೂ ಗೊತ್ತು’ ಎಂದು ಕೋರಿದರು.

ಬಿಗ್​ ಬಾಸ್​ ಬಜರ್​ ಮಾಡಿದರು. ಹೊರಗೆ ನೋಡಿದರೆ ಪ್ರಶಾಂತ್​ ಅವರ ಫೋಟೋ ವಾಲ್​ ಇತ್ತು.  ಮಂಜು ಕೋರಿಕೆ ಇಡೇರಿತ್ತು. ಇದನ್ನು ನೋಡಿ ದಿವ್ಯಾ ತುಂಬಾನೇ ಬೇಸರ ಮಾಡಿಕೊಂಡರು. ‘ಬಿಗ್​ ಬಾಸ್​’ ಎಂದು ಕಿರುಚಿದರು. ಈ ಎಪಿಸೋಡ್​ ಅಭಿಮಾನಿಗಳಿಗೆ ಸಖತ್​ ಖುಷಿ ನೀಡಿದ್ದಂತೂ ಸತ್ಯ.

ಇದನ್ನೂ ಓದಿ: 

ಪ್ರಶಾಂತ್​ ಕಾರಿನ ಮೇಲೆ ದೈತ್ಯ ಕಲ್ಲನ್ನು ಹಾಕಿದ್ದ ದುಷ್ಕರ್ಮಿಗಳು; ಕೊಲೆ ಪ್ರಯತ್ನದ ಬಗ್ಗೆ ಬಿಗ್​ ಬಾಸ್​ನಲ್ಲಿ ಹೇಳಿಕೊಂಡ ಸಂಬರಗಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ