Virat Kohli: ಕಪಿಲ್ ಶರ್ಮ ಶೋ ನೋಡಿ 3 ಲಕ್ಷ ಕಳೆದುಕೊಂಡಿದ್ದ ವಿರಾಟ್ ಕೊಹ್ಲಿ!

Virat Kohli: ಕಪಿಲ್ ಶರ್ಮ ಶೋ ನೋಡಿ 3 ಲಕ್ಷ ಕಳೆದುಕೊಂಡಿದ್ದ ವಿರಾಟ್ ಕೊಹ್ಲಿ!
ಕಪಿಲ್ ಶರ್ಮಾ ಶೋನಲ್ಲಿ ವಿರಾಟ್ ಕೊಹ್ಲಿ (ಕೃಪೆ: ಕಲರ್ಸ್ ವಾಹಿನಿ)

Kapil Sharma Show: ಜನಪ್ರಿಯ ಹಿಂದಿ ರಿಯಾಲಿಟಿ ಶೋ- ಕಪಿಲ್ ಶರ್ಮಾ ಶೋ ನೋಡಿ ವಿರಾಟ್ ಕೊಹ್ಲಿ 3 ಲಕ್ಷ ರೂಗಳನ್ನು ಕಳೆದುಕೊಂಡಿದ್ದರಂತೆ. ಆ ಕುರಿತ ಅಚ್ಚರಿಯ ಮಾಹಿತಿಯನ್ನು ಕಿಂಗ್ ಕೊಹ್ಲಿ ಅದೇ ಶೋನಲ್ಲಿ ತೆರೆದಿಟ್ಟಿದ್ದಾರೆ.

TV9kannada Web Team

| Edited By: shivaprasad.hs

Aug 06, 2021 | 4:01 PM

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ಹೇಗೆ ಅಬ್ಬರಿಸುತ್ತಾರೋ ಹಾಗೆಯೇ ಮೈದಾನದ ಹೊರಗೆ ತಮ್ಮ ಹಾಸ್ಯ ಚಟಾಕಿಗಳಿಂದ ಗಮನ ಸೆಳೆಯುತ್ತಾರೆ. ಇತ್ತೀಚೆಗೆ ಅವರು ಕಪಿಲ್ ಶರ್ಮಾ ಶೋನಲ್ಲಿ ಭಾಗವಹಿಸಿದಾಗ ಹಂಚಿಕೊಂಡ ಮಾಹಿತಿ ವೈರಲ್ ಆಗಿದೆ. ಅದೇನೆಂದರೆ, ವಿರಾಟ್ ಕೊಹ್ಲಿ ಒಮ್ಮೆ, ಕಪಿಲ್ ಶರ್ಮಾ ಅವರ ಶೋ ನೋಡಿ ಮೂರು ಲಕ್ಷ ಕಳೆದುಕೊಂಡಿದ್ದರಂತೆ. ಅದು ಹೇಗೆ? ಇಷ್ಟೆಲ್ಲಾ ಆಗುವಾಗ ಅದು ವಿರಾಟ್ ಕೊಹ್ಲಿಗೆ ತಿಳಿಯಲ್ಲಿವೇ? ಕೊಹ್ಲಿ ಅವರ ಮಾತುಗಳಲ್ಲೇ ಇದಕ್ಕೆ ಉತ್ತರವನ್ನು ನೋಡಿ.

‘‘ಭಾರತ ತಂಡದ ಆಟಗಾರರು ಸಮಯ ಸಿಕ್ಕಾಗಲೆಲ್ಲಾ ಜೊತೆಯಾಗಿ ಕುಳಿತು ಕಪಿಲ್ ಶರ್ಮಾ ಶೋಗಳನ್ನು ನೋಡುತ್ತಾರಂತೆ. ಒಮ್ಮೆ ವಿರಾಟ್ ಕೊಹ್ಲಿಯವರು ಶ್ರೀಲಂಕಾಕ್ಕೆ ಪ್ರವಾಸ ತೆರಳುವಾಗ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಲ್ಪ ಸಮಯ ಕಾಯಬೇಕಾಯಿತಂತೆ. ಆಗ ಸಮಯ ಕಳೆಯುವುದಕ್ಕಾಗಿ ಕಪಿಲ್ ಶರ್ಮಾ ಶೋ ನೋಡೋಣ ಎಂದು ಅವರು ತೀರ್ಮಾನಿಸಿ ಮೊಬಥೈಲ್ ಆನ್ ಮಾಡಿದರಂತೆ. ವಿಮಾನ ನಿಲ್ದಾಣದ ವೈಫೈ ಬಳಸಿ ಕಾರ್ಯಕ್ರಮ ವೀಕ್ಷಿಸುತ್ತಿದ್ದೇನೆ ಎಂದು ಭಾವಿಸಿದ್ದ ಕೊಹ್ಲಿಗೆ ಸ್ವಲ್ಪ ಸಮಯದಲ್ಲಿ ಅವರ ಸಹೋದರನ ಕರೆ ಬಂದಿತಂತೆ. ‘‘ನೀನೇನು ಮಾಡುತ್ತಿದ್ದಿ? ನನ್ನ ಮೊಬೈಲ್ ಡಾಟಾ ಎಲ್ಲಾ ಖಾಲಿಯಾಗಿ, ಡಾಟಾ ಖರ್ಚೆಂದು ಮೂರು ಲಕ್ಷರೂ ಬಿಲ್ ಬಂದಿದೆ’’ ಎಂದು ಅವರ ಸಹೋದರ ಎಚ್ಚರಿಸಿದಾಗಲೇ ಕೊಹ್ಲಿಗೆ ಅರಿವಾದದ್ದು, ಅವರು ಬಳಸಿದ್ದು ವೈಫೈ ಅಲ್ಲ, ತಮ್ಮ ಮೊಬೈಲ್​ದೇ ಡಾಟಾ ಎಂದು. ಅಷ್ಟೆಲ್ಲಾ ನಷ್ಟವಾದರೂ ಕೊಹ್ಲಿಗೆ ಅದರಿಂದ ಏನೂ ಬೇಸರವಾಗಲಿಲ್ಲವಂತೆ.  ಕಾರಣ, ಕಪಿಲ್ ಶರ್ಮಾ ಶೋ ಅಷ್ಟು ಚೆನ್ನಾಗಿರುತ್ತದೆ ಎಂಬುದು ಕೊಹ್ಲಿಯ ಅನಿಸಿಕೆ. ಇದನ್ನು ಆ ಶೋನಲ್ಲಿ ಅತಿಥಿಯಾಗಿ ಭಾಗವಹಿಸಿದ್ದಾಗ ಸ್ವತಃ ಕೊಹ್ಲಿ ಹೇಳಿಕೊಂಡಿದ್ದಾರೆ.

ವಿಡಿಯೊಗಾಗಿ ಈ ಲಿಂಕ್​ನಲ್ಲಿದೆ: ಕಪಿಲ್ ಶರ್ಮಾ ಶೋನಲ್ಲಿ ವಿರಾಟ್ ಕೊಹ್ಲಿ

ಭಾರತದ ಅತ್ಯಂತ ಜನಪ್ರಿಯ ಶೋಗಳಲ್ಲಿ ಒಂದು ಎಂದು ಕರೆಯಲ್ಪಡುವ ಕಪಿಲ್ ಶರ್ಮಾ ಶೋ, ಆಗಸ್ಟ್ 21ರಿಂದ ಮತ್ತೆ ಆರಂಭವಾಗಲಿದೆ. ಹಳೆಯ ಸೀಸನ್​ಗಳ ಅತ್ಯುತ್ತಮ ಸಂದರ್ಭಗಳನ್ನು ವಾಹಿನಿ ಮತ್ತೆ ಹಂಚಿಕೊಳ್ಳುತ್ತಿದೆ. ಈ ಸೀಸನ್​ನ ಮೊದಲಿಗೆ ಅಕ್ಷಯ್ ಕುಮಾರ್ ತಮ್ಮ ‘ಬೆಲ್​ಬಾಟಂ’ ಚಿತ್ರದ ತಂಡದೊಂದಿಗೆ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿರಾಟ್ ಕೊಹ್ಲಿ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ.

ಇದನ್ನೂ ಓದಿ:

ಒಲಂಪಿಕ್ಸ್​ನಲ್ಲಿ ಗೋಲ್ಡ್ ಸಿಗದಿದ್ದರೇನಂತೆ, ವಿರಾಟ್ ಕೊಹ್ಲಿ ‘ಗೋಲ್ಡನ್ ಡಕ್’ ಸಂಪಾದಿಸಿದ್ದಾರೆ: ನೆಟ್ಟಿಗರಿಂದ ಟ್ರೋಲ್ ಆದ ಚೀಕು ಭೈಯ್ಯ!

ಬಿಗ್ ಬಾಸ್ ಫಿನಾಲೆಯಲ್ಲಿ ಅರವಿಂದ್​ ಕೆಪಿ ಗೆಲುವಿಗೂ, ಸೋಲಿಗೂ ಕಾರಣವಾಗಬಹುದು ಈ ಅಂಶಗಳುVirat Kohli 

(Virat Kohli recalls his craze about Kapil Sharma Show and because of that he lost 3Lakh)

Follow us on

Related Stories

Most Read Stories

Click on your DTH Provider to Add TV9 Kannada