ಹಾಸ್ಯ ಮತ್ತು ನಾಯಕತ್ವ; ಈ ಸೀಸನ್ನಲ್ಲಿ ಮಂಜುಗೆ ಇದೆ ಗೆಲ್ಲುವ ಚಾನ್ಸ್
ಬಿಗ್ ಬಾಸ್ ಸೀಸನ್ 8 ವಿಜಯದ ಹಾರ ಮಂಜು ಕೊರಳಿಗೆ ಬಿದ್ದರೂ ಅಚ್ಚರಿ ಇಲ್ಲ. ಹಾಗಾದರೆ, ಬಿಗ್ ಬಾಸ್ನಲ್ಲಿ ಮಂಜು ಗೆಲ್ಲಲು ಹಾಗೂ ಸೋಲಲು ಕಾರಣವಾಗಬಹುದಾದ ಅಂಶಗಳ ಬಗ್ಗೆ ಇಲ್ಲಿದೆ ವಿವರ.
ಮಂಜು ಪಾವಗಡ ಇದ್ದಲ್ಲಿ ಹಾಸ್ಯಕ್ಕೆ ಯಾವುದೇ ಕೊರತೆ ಇರುವುದಿಲ್ಲ. ಇದನ್ನು ವೀಕ್ಷಕರು ಹಾಗೂ ಬಿಗ್ ಬಾಸ್ ಸ್ಪರ್ಧಿಗಳು ಒಪ್ಪಿಕೊಂಡಿದ್ದಾರೆ. ಸದಾ ನಗಿಸುತ್ತಲೇ ಇರುವ ಮಂಜುಗೆ ಇದು ದೊಡ್ಡ ಮಟ್ಟದಲ್ಲಿ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆ ಇದೆ. ಬಿಗ್ ಬಾಸ್ ಸೀಸನ್ 8 ವಿಜಯದ ಹಾರ ಮಂಜು ಕೊರಳಿಗೆ ಬಿದ್ದರೂ ಅಚ್ಚರಿ ಇಲ್ಲ. ಹಾಗಾದರೆ, ಬಿಗ್ ಬಾಸ್ನಲ್ಲಿ ಮಂಜು ಗೆಲ್ಲಲು ಹಾಗೂ ಸೋಲಲು ಕಾರಣವಾಗಬಹುದಾದ ಅಂಶಗಳ ಬಗ್ಗೆ ಇಲ್ಲಿದೆ ವಿವರ.
ಮನರಂಜನೆ:
ಬಿಗ್ ಬಾಸ್ ಶೋಅನ್ನು ವೀಕ್ಷಕರು ನೋಡುವುದೇ ಮನರಂಜನೆಗೆ. ಕೆಲ ಸ್ಪರ್ಧಿಗಳು ಮನೆಯೊಳಗೆ ತೆರಳಿ ತುಂಬಾನೇ ಗಂಭೀರವಾಗಿ ನಡೆದುಕೊಂಡಿದ್ದರು. ಇದು ವೀಕ್ಷಕರಿಗೆ ಇಷ್ಟವಾಗಿರಲಿಲ್ಲ. ಆದರೆ, ಮಂಜು ಸದಾ ಹಾಸ್ಯ ಮಾಡುತ್ತಾ, ಎಲ್ಲರಿಗೂ ಭರಪೂರ ಮನರಂಜನೆ ನೀಡುತ್ತಾ ಬಂದರು. ಜಾಗ ಯಾವುದೇ ಆಗಲಿ, ಎದುರಿಗಿರುವ ವ್ಯಕ್ತಿ ಹೇಗೆ ಇರಲಿ ಮಂಜು ಎಲ್ಲರನ್ನೂ ನಗಿಸುತ್ತಿರುತ್ತಾರೆ. ಈ ಕಾರಣಕ್ಕೆ ಅವರು ವೀಕ್ಷಕರಿಗೆ ಬೇಗ ಕನೆಕ್ಟ್ ಆಗುತ್ತಾರೆ.
ನಾಯಕತ್ವ:
ಮಂಜು ನಾಯಕತ್ವದಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ. ಯಾವುದೇ ತಂಡದ ನಾಯಕನಾಗಲಿ, ಅವರ ತಂಡದಲ್ಲಿ ಯಾವುದೇ ಸ್ಪರ್ಧಿಗಳಿರಲಿ ತಂಡ ಕೆಳಗೆ ಬೀಳದಂತೆ ನೋಡಿಕೊಂಡಿದ್ದಾರೆ ಮಂಜು. ಅವರ ನಾಯಕತ್ವ ಅನೇಕರಿಗೆ ಇಷ್ಟವಾಗಿದೆ. ಇದು ಅವರಿಗೆ ಪ್ಲಸ್ ಆಗಬಹುದು.
ಸ್ವತಂತ್ರ ಸ್ಪರ್ಧಿ:
ಬಿಗ್ ಬಾಸ್ ಮೊದಲ ಇನ್ನಿಂಗ್ಸ್ನಲ್ಲಿ ದಿವ್ಯಾ ಸುರೇಶ್ ಜತೆ ಮಂಜು ಹೆಚ್ಚು ಆಪ್ತವಾಗಿದ್ದರು. ಕೊನೆಯಲ್ಲಿ ಇದು ಅವರಿಗೆ ಮುಳುವಾಗಿತ್ತು. ಅವರು ಕೆಲ ಕಾಲ ಮನರಂಜನೆ ನೀಡುವುದನ್ನೇ ನಿಲ್ಲಿಸಿದ್ದರು. ಆದರೆ, ಸೆಕೆಂಡ್ ಇನ್ನಿಂಗ್ಸ್ನಲ್ಲಿ ಆರೀತಿ ಆಗಿಲ್ಲ. ಮಂಜು ಸಂಪೂರ್ಣವಾಗಿ ಬದಲಾಗಿದ್ದಾರೆ. ಎಲ್ಲ ಕಡೆಗಳಲ್ಲೂ ಸ್ವತಂತ್ರವಾಗಿ ಗುರುತಿಸಿಕೊಂಡಿದ್ದಾರೆ.
ಮೈನಸ್ ಪಾಯಿಂಟ್
ಟಫ್ ಕಾಂಪಿಟೇಷನ್:
ಬಿಗ್ ಬಾಸ್ ಫಿನಾಲೆಯಲ್ಲಿ ಮಂಜುಗೆ ಟಫ್ ಕಾಂಪಿಟೇಷನ್ ಇದೆ. ಅರವಿಂದ್ ಹಾಗೂ ವೈಷ್ಣವಿ ಗೌಡ ಗೆಲ್ಲುವ ಕ್ಯಾಂಡಿಡೇಟ್ ಆಗಿ ಗುರುತಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಮಂಜುಗೆ ಇವರಿಬ್ಬರಿಂದ ಟಫ್ ಕಾಂಪಿಟೇಷನ್ ಎದುರಾಗುವ ಸಾಧ್ಯತೆ ಹೆಚ್ಚು.
ಫಿನಾಲೆ ವೀಕ್ನಲ್ಲಿ ಕೊಂಚ ಮಂಕಾಗಿದ್ದ ಮಂಜು:
ಶುಭಾ ಪೂಂಜಾ ಅವರು ಮಂಜುಗೆ ಹೆಚ್ಚು ಆಪ್ತರಾಗಿದ್ದರು. ದಿವ್ಯಾ ಜತೆ ಕೂಡ ಹೆಚ್ಚು ಸಲುಗೆ ಇತ್ತು. ಕೆಲವೇ ದಿನಗಳ ಅಂತರದಲ್ಲಿ ಇಬ್ಬರೂ ಎಲಿಮಿನೇಟ್ ಆಗಿದ್ದರು. ಈ ವೇಳೆ ಮಂಜು ಒಮ್ಮೆ ಭಾವುಕರಾದರು. ಸ್ವಲ್ಪ ಸಮಯ ಡಲ್ ಕೂಡ ಆಗಿದ್ದರು. ಇದನ್ನು ವೀಕ್ಷಕರು ಗಮನಿಸಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಮಂಜು ಕೋರಿಕೆ ದಿವ್ಯಾಗೆ ಶಾಪವಾಯ್ತು; ನೊಂದುಕೊಂಡ ಉರುಡುಗ
‘ನೀವು ಗೆದ್ದು ಬನ್ನಿ’; ಫಿನಾಲೆ ತಲುಪಿದ ಮಂಜುಗೆ ಶಿವರಾಜ್ಕುಮಾರ್ ವಿಶೇಷ ಹಾರೈಕೆ