AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಲಂಪಿಕ್ಸ್​ನಲ್ಲಿ ಗೋಲ್ಡ್ ಸಿಗದಿದ್ದರೇನಂತೆ, ವಿರಾಟ್ ಕೊಹ್ಲಿ ‘ಗೋಲ್ಡನ್ ಡಕ್’ ಸಂಪಾದಿಸಿದ್ದಾರೆ: ನೆಟ್ಟಿಗರಿಂದ ಟ್ರೋಲ್ ಆದ ಚೀಕು ಭೈಯ್ಯ!

ಕೊಹ್ಲಿ ಕ್ರೀಸಿಗೆ ಆಗಮಿಸುವುದನ್ನು ಕಂಡು ರೋಮಾಂಚಿತರರಾಗಿದ್ದ ಆಂಗ್ಲ ಪ್ರೇಕ್ಷಕರು ಜಿಮ್ಮಿಯ ಕೌಶಲ್ಯವನ್ನು ಅಷ್ಟೇ ಸಂತೋಷದಿಂದ ಸಂಭ್ರಮಿಸಿದರು. ಅವರ ಫುಲ್ಲರ್ ಲೆಂಗ್ತ್ ಎಸೆತವನ್ನು ಪುಶ್ ಮಾಡಲು ಕೊಹ್ಲಿ ಪ್ರಯತ್ನಿಸಿದಾಗ ಚೆಂಡು ಅವರ ಬ್ಯಾಟಿನ ಅಂಚು ಸವರಿ ವಿಕೆಟ್-ಕೀಪರ್ ಜೊಸ್ ಬಟ್ಲರ್ ಅವರ ಕೈ ಸೇರಿತು.

ಒಲಂಪಿಕ್ಸ್​ನಲ್ಲಿ ಗೋಲ್ಡ್ ಸಿಗದಿದ್ದರೇನಂತೆ, ವಿರಾಟ್ ಕೊಹ್ಲಿ ‘ಗೋಲ್ಡನ್ ಡಕ್’ ಸಂಪಾದಿಸಿದ್ದಾರೆ: ನೆಟ್ಟಿಗರಿಂದ ಟ್ರೋಲ್ ಆದ ಚೀಕು ಭೈಯ್ಯ!
ವಿರಾಟ್​ ಕೊಹ್ಲಿ
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Aug 06, 2021 | 1:54 AM

Share

ಗುರುವಾರದಂದು ನಾಟಿಂಗ್​ಹ್ಯಾಮ್ ಟ್ರೆಂಟ್ ಬ್ರಿಜ್​ನಲ್ಲಿ ವಿಶ್ವದ ಇಬ್ಬರು ಶ್ರೇಷ್ಠ ಆಟಗಾರರ ನಡುವೆ ಒಂದು ಉತ್ಕೃಷ್ಟ ಕಾದಾಟಕ್ಕೆ ವೇದಿಕೆ ಸಿದ್ಧವಾಗಿತ್ತು. ಚೇತೇಶ್ವರ್ ಪೂಜಾರಾ ಅವರು ಜೇಮ್ಸ್ ಆಂಡರ್ಸನ್ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ಗೆ ಮರಳಿದ ನಂತರ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಪ್ರೇಕ್ಷಕರಿಂದ ದೀರ್ಘಕರತಾಡನ. ಕ್ರಿಕೆಟ್ ಪ್ರೇಮಿಗಳಲ್ಲಿ ಅಂಡರ್ಸನ್-ಕೊಹ್ಲಿ ನಡುವೆ ಪಾರಮ್ಯ ಪ್ರದರ್ಶನಕ್ಕೆ ನಡೆಯುವ ಹೋರಾಟವನ್ನು ವೀಕ್ಷಿಸುವ ತವಕ. ಆದರೆ ಈ ಹೋರಾಟ ಕೇವಲ ಒಂದು ಎಸೆತಕ್ಕೆ ಮಾತ್ರ ಸೀಮಿಗೊಂಡಾಗ ಅವರಲ್ಲಿ ತೀವ್ರ ನಿರಾಶೆ. ಬ್ಯಾಟ್ ಮತ್ತು ಬಾಲ್ ನಡುವೆ ಬಾಯಿ ಚಪ್ಪರಿಸಿಸುವ ಸೆಣಸಾಟ ನಡೆಯಲಿದೆ ಎನ್ನುವ ನಿರೀಕ್ಷೆ ಕ್ಷಣಾರ್ಧದಲ್ಲಿ ಮಣ್ಣುಗೂಡಿತು. ಈ ಬಾರಿಯ ಪಣವನ್ನು ಟೆಸ್ಟ್ ಕ್ರಿಕೆಟ್ನಲ್ಲಿ 600 ಕ್ಕೂ ಹೆಚ್ಚು ವಿಕೆಟ್ ಕಬಳಿಸಿರುವ ಜಿಮ್ಮಿ ಬಹಳ ಸುಲಭವಾಗಿ ಗೆದ್ದುಬಿಟ್ಟರು.

ಕೊಹ್ಲಿ ಕ್ರೀಸಿಗೆ ಆಗಮಿಸುವುದನ್ನು ಕಂಡು ರೋಮಾಂಚಿತರಾಗಿದ್ದ ಆಂಗ್ಲ ಪ್ರೇಕ್ಷಕರು ಜಿಮ್ಮಿಯ ಕೌಶಲ್ಯವನ್ನು ಅಷ್ಟೇ ಸಂತೋಷದಿಂದ ಸಂಭ್ರಮಿಸಿದರು. ಅವರ ಫುಲ್ಲರ್ ಲೆಂಗ್ತ್ ಎಸೆತವನ್ನು ಪುಶ್ ಮಾಡಲು ಕೊಹ್ಲಿ ಪ್ರಯತ್ನಿಸಿದಾಗ ಚೆಂಡು ಅವರ ಬ್ಯಾಟಿನ ಅಂಚು ಸವರಿ ವಿಕೆಟ್-ಕೀಪರ್ ಜೊಸ್ ಬಟ್ಲರ್ ಅವರ ಕೈ ಸೇರಿತು. ಭಾರತದ ಕ್ಯಾಪ್ಟನ್ ಜಿಮ್ಮಿಗೆ ಈಗ 9 ಬಾರಿ ಔಟಾಗಿದ್ದಾರೆ. ಇಂಗ್ಲೆಂಡ್ ವಿರುದ್ದ ಇದು ಕೊಹ್ಲಿಯ ಮೂರನೇ ಗೋಲ್ಡನ್ ಡಕ್.

ಕೊಹ್ಲಿಯ ಗೋಲ್ಡನ್ ಡಕ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದೆ. ಟ್ವಿಟರ್ ನಲ್ಲಿ ಸದಾ ಸಕ್ರಿಯರಾಗಿರುವವರು, ಭಾರತಕ್ಕೆ ಟೊಕಿಯೋ ಒಲಂಪಿಕ್ಸ್ನಲ್ಲಿ ಗೋಲ್ಡ್ ಪದಕ ಸಿಗದಿದ್ದರೇನಂತೆ, ಕೊಹ್ಲಿ ಅದನ್ನು ಪಡೆದಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಒಬ್ಬ ಮಹಿಳೆ ನನಗೆ ಗೋಲ್ಡನ್ ಅಂದರೇನು ಅಂತ ಗೊತ್ತಿರಲಿಲ್ಲ, ತಿಳಿಸಿ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ವಿರಾಟ್ ಕೊಹ್ಲಿ ಎಂದಿದ್ದಾರೆ.

ಎರಡನೇ ದಿನದಾಟದ ಎರಡನೇ ಸೆಶನ್ನಲ್ಲಿ ಭಾರತೀಯ ಬ್ಯಾಟಿಂಗ್ನ ಬೆನ್ನೆಲುಬು ಮುರಿಯುವ ಮೂಲಕ ಅತಿಥೇಯರು ಪಂದ್ಯದಲ್ಲಿ ವಾಪಸ್ಸು ಬಂದಿದ್ದಾರೆ. ಭಾರತದ ಹೋರಾಟ 57 ರನ್ ಗಳಿಸಿ ಆಡುತ್ತಿರುವ ಕೆ ಎಲ್ ರಾಹುಲ್ ಮತ್ತು ತಂಡ ಸಂಕಷ್ಟದಲ್ಲಿರುವಾಗ ಅತ್ಯುತ್ತಮ ಆಟದ ಪ್ರದರ್ಶನ ನೀಡುವ ವಿಕೆಟ್-ಕೀಪರ್/ಬ್ಯಾಟ್ಸ್ಮನ್ ರಿಷಭ್ ಪಂತ್ ಅವರ ಪ್ರದರ್ಶನವನ್ನು ಅವಲಂಬಿಸಿದೆ.

ಇದನ್ನೂ ಓದಿ: India vs England: ಬುಮ್ರಾಗೆ ಮೊದಲ ಓವರ್​ನಲ್ಲೇ ವಿಕೆಟ್! ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ ರೋರಿ ಬರ್ನ್ಸ್.. ವಿಡಿಯೋ ನೋಡಿ