IND vs ENG: ಮೊದಲ ಟೆಸ್ಟ್ನಲ್ಲಿ ಶೂನ್ಯ ಸುತ್ತಿದ ಕೊಹ್ಲಿ; ಅತ್ಯಂತ ಕೆಟ್ಟ ದಾಖಲೆಯೊಂದು ವಿರಾಟ್ ಪಾಲಾಯ್ತು
IND vs ENG 1st Test Day 2: ಜೇಮ್ಸ್ ಆಂಡರ್ಸನ್ ವಿರಾಟ್ ಕೊಹ್ಲಿಯ ವಿಕೆಟ್ ಪಡೆದರು. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಒಂಬತ್ತನೇ ಬಾರಿಗೆ ಕೊಹ್ಲಿ ಶೂನ್ಯಕ್ಕೆ ಔಟಾಗಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಅತ್ಯಂತ ಕಳಪೆ ಆರಂಭ ಮಾಡಿದ್ದಾರೆ. ನಾಟಿಂಗ್ ಹ್ಯಾಮ್ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ನಲ್ಲಿ ಟೀಂ ಇಂಡಿಯಾದ ನಾಯಕ ಮೊದಲ ಚೆಂಡಿನಲ್ಲೇ ಖಾತೆ ತೆರೆಯದೇ ಔಟಾದರು. ಇಂಗ್ಲೆಂಡ್ನ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಕೊಹ್ಲಿ ವಿಕೆಟ್ ಪಡೆದರು. ಇದರೊಂದಿಗೆ ವಿರಾಟ್ ಕೊಹ್ಲಿ ಹೆಸರಿನಲ್ಲಿ ಕಳಪೆ ದಾಖಲೆಯೊಂದು ದಾಖಲಾಗಿದೆ. ಅವರು ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಭಾರತೀಯ ನಾಯಕ ಎನಿಸಿಕೊಂಡಿದ್ದಾರೆ. ಜೊತೆಗೆ ಕೊಹ್ಲಿ ಈ ಸಾಧನೆಯಲ್ಲಿ ಮಹೇಂದ್ರ ಸಿಂಗ್ ಧೋನಿ ಅವರನ್ನು ಹಿಂದಿಕ್ಕಿದ್ದಾರೆ.
ಜೇಮ್ಸ್ ಆಂಡರ್ಸನ್ ವಿರಾಟ್ ಕೊಹ್ಲಿಯ ವಿಕೆಟ್ ಪಡೆದರು. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಒಂಬತ್ತನೇ ಬಾರಿಗೆ ಕೊಹ್ಲಿ ಶೂನ್ಯಕ್ಕೆ ಔಟಾಗಿದ್ದಾರೆ. ಧೋನಿ ಖಾತೆಯನ್ನು ತೆರೆಯದೆ ಟೆಸ್ಟ್ ವೃತ್ತಿಜೀವನದಲ್ಲಿ ಎಂಟು ಬಾರಿ ನಾಯಕನಾಗಿ ಔಟಾಗಿದ್ದರು. ಅದೇ ಸಮಯದಲ್ಲಿ, ಮನ್ಸೂರ್ ಅಲಿ ಖಾನ್ ಪಟೌಡಿ ಅವರ ವೃತ್ತಿಜೀವನದಲ್ಲಿ ನಾಯಕನಾಗಿದ್ದಾಗ ಏಳು ಬಾರಿ ಶೂನ್ಯಕ್ಕೆ ಔಟಾಗಿದ್ದರು.
ವಿರಾಟ್ ಕೊಹ್ಲಿ ಶೂನ್ಯಕ್ಕೆ ಇಂಗ್ಲೆಂಡ್‌ನಲ್ಲಿ ಎರಡನೇ ಬಾರಿಗೆ ಔಟಾಗಿದ್ದಾರೆ. 2018 ರ ಪ್ರವಾಸದಲ್ಲಿ ಅವರು ಮೊದಲ ಚೆಂಡಿನಲ್ಲೇ ಔಟಾಗಿದ್ದರು. ಕುತೂಹಲಕಾರಿಯಾಗಿ, ಅದು ಸರಣಿಯ ಕೊನೆಯ ಪಂದ್ಯವಾಗಿತ್ತು. ಈಗ ಅವರು ಮೊದಲ ಪಂದ್ಯದಲ್ಲಿ ಈಗಾಗಲೇ ಔಟ್ ಆಗಿದ್ದಾರೆ. ಆದರೆ ಇದರೊಂದಿಗೆ ಅವರು ಇಂಗ್ಲೆಂಡಿನಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.
ಕೊಹ್ಲಿ 9ನೇ ಬಾರಿಗೆ ಆಂಡರ್‌ಸನ್‌ಗೆ ಬಲಿಯಾದರು ಮತ್ತೊಂದೆಡೆ, ಜೇಮ್ಸ್ ಆಂಡರ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಂಬತ್ತನೇ ಬಾರಿಗೆ ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದರು. ಆಂಡರ್‌ಸನ್‌ಗೆ ಹೆಚ್ಚು ಬಲಿಯಾಗುವ ವಿಷಯದಲ್ಲಿ ಕೊಹ್ಲಿ ಜಂಟಿಯಾಗಿ ಮೂರನೇ ಸ್ಥಾನದಲ್ಲಿದ್ದಾರೆ. ಕೊಹ್ಲಿಯನ್ನು ಹೊರತುಪಡಿಸಿ, ಗೌತಮ್ ಗಂಭೀರ್ ಕೂಡ 9 ಬಾರಿ ಆಂಡರ್‌ಸನ್‌ಗೆ ಬಲಿಯಾಗಿದ್ದರು. ಅದೇ ಸಮಯದಲ್ಲಿ, ಇಂಗ್ಲಿಷ್ ಬೌಲರ್ ಸಚಿನ್ ತೆಂಡೂಲ್ಕರ್ ಅವರನ್ನು ಅತಿ ಹೆಚ್ಚು ಬಾರಿ (12) ಔಟ್ ಮಾಡಿದ್ದರು. ಇದರ ನಂತರ ಆಂಡರ್ಸನ್ ಬಾಲ್ನಲ್ಲಿ 10 ಬಾರಿ ಧೋನಿ ಔಟಾಗಿದ್ದಾರೆ.