India vs England: ವಿಕೆಟ್ ಹಿಂಬದಿಯಲ್ಲಿ ಪಂತ್ ಪಕ್ಕಾ ರಿವ್ಯೂ: ಫಿದಾ ಆದ ಕೊಹ್ಲಿ ಮಾಡಿದ್ದೇನು ನೋಡಿ
Rishabh Pant: ಅದು 21ನೇ ಓವರ್ನ ಮೊಹಮ್ಮದ್ ಸಿರಾಜ್ ಬೌಲಿಂಗ್. 5ನೇ ಎಸೆತದಲ್ಲಿ ಚೆಂಡು ಜ್ಯಾಕ್ ಕ್ರಾವ್ಲೆ ಬ್ಯಾಟ್ಗೆ ತಾಗಿದಂತೆ ಕಂಡು ವಿಕೆಟ್ ಕೀಪರ್ ರಿಷಭ್ ಪಂತ್ ಕೈ ಸೇರಿತು. ಪಂತ್ ಔಟ್ ಎಂದು ಮನವಿ ಮಾಡಿದರು. ಆದರೆ,
ನ್ಯಾಟಿಂಗ್ಹ್ಯಾಮ್ನಲ್ಲಿ ಭಾರತ ಹಾಗೂ ಇಂಗ್ಲೆಂಡ್ (India vs England 1st Test) ನಡುವೆ ಮೊದಲ ಟೆಸ್ಟ್ ಪಂದ್ಯ ಆರಂಭವಾಗಿದ್ದು, ಕೊಹ್ಲಿ (Virat Kohli) ಪಡೆ ಬೊಂಬಾಟ್ ಪ್ರದರ್ಶನ ತೋರುತ್ತಿದೆ. ಮೊದಲ ದಿನವೇ ಟೀಮ್ ಇಂಡಿಯಾ ಆಂಗ್ಲರನ್ನು ಆಲೌಟ್ ಮಾಡಿ ಯಶಸ್ಸು ಸಾಧಿಸಿದೆ. ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ಮಾರಕ ದಾಳಿಗೆ ಪೆವಿಲಿಯನ್ ಕಡೆ ಸಾಗಿದ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳು ಕೇವಲ 183 ರನ್ಗೆ ಸರ್ವಪತನ ಕಂಡಿತು. ಭಾರತ (Team India) ತನ್ನ ಮೊದಲ ಇನ್ನಿಂಗ್ಸ್ನಲ್ಲಿ ಮೊದಲ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿದೆ.
ಮೊದಲ ದಿನವೇ ಈ ಪಂದ್ಯ ಸಾಕಷ್ಟು ಕುತೂಹಲಕ್ಕೆ ಕಾರಣವಾಯಿತು. ಇಂಗ್ಲೆಂಡ್ ಪಿಚ್ನಲ್ಲೇ ಆಂಗ್ಲರು ಮೊದಲ ಇನ್ನಿಂಗ್ಸ್ನಲ್ಲಿ ಹೀನಾಯ ಪ್ರದರ್ಶನ ತೋರಿದರು. ಇದರ ನಡುವೆ ಭಾರತ ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಂಡು ಜಾಣತನ ಪ್ರದರ್ಶಿಸಿತು. ಇದಕ್ಕೆ ಉದಾಹರಣೆ ಇಂಗ್ಲೆಂಡ್ ಬ್ಯಾಟ್ಸ್ಮನ್ ಜ್ಯಾಕ್ ಕ್ರಾವ್ಲೆ ಅವರನ್ನು ಪೆವಿಲಿಯನ್ಗೆ ಅಟ್ಟಿದ್ದು.
ಅದು 21ನೇ ಓವರ್ನ ಮೊಹಮ್ಮದ್ ಸಿರಾಜ್ ಬೌಲಿಂಗ್. 5ನೇ ಎಸೆತದಲ್ಲಿ ಚೆಂಡು ಜ್ಯಾಕ್ ಕ್ರಾವ್ಲೆ ಬ್ಯಾಟ್ಗೆ ತಾಗಿದಂತೆ ಕಂಡು ವಿಕೆಟ್ ಕೀಪರ್ ರಿಷಭ್ ಪಂತ್ ಕೈ ಸೇರಿತು. ಪಂತ್ ಔಟ್ ಎಂದು ಮನವಿ ಮಾಡಿದರು. ಆದರೆ, ಅಂಪೈರ್ ಯಾವುದೇ ತೀರ್ಮಾನ ನೀಡಲಿಲ್ಲ. ಈ ಸಂದರ್ಭ ನಾಯಕ ವಿರಾಟ್ ಕೊಹ್ಲಿ ಬಳಿ ಓಡಿ ಬಂದ ಪಂತ್ ರಿವ್ಯೂ ತೆಗೆದುಕೊಳ್ಳೋಣ, ಖಂಡಿತಾ ಬ್ಯಾಟ್ಗೆ ಟಚ್ ಆಗಿದೆ ಎಂದು ಹೇಳಿದರು.
ಹೆಚ್ಚಿನ ರಿವ್ಯೂನಲ್ಲಿ ಎಡವಿದ್ದ ಪಂತ್ ಮಾತನ್ನು ಕೊಹ್ಲಿ ಈ ಬಾರಿ ಕಡೆಗಣಿಸಲಿಲ್ಲ. ಭಾರತ ಥರ್ಡ್ ಅಂಪೈರ್ ಮೊರೆ ಹೋಯಿತು. ಆಲ್ಟ್ರಾ ಎಡ್ಜ್ನಲ್ಲಿ ವೀಕ್ಷಿಸಿದಾಗ ಚೆಂಡು ಬ್ಯಾಟ್ ಟಚ್ ಆಗಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ಹೀಗಾಗಿ ಜ್ಯಾಕ್ ಕ್ರಾವ್ಲೆ ಔಟ್ ಆಗಿ ಪೆವಿಲಿಯನ್ ಸೇರಕೊಂಡರು. ಪಂತ್ ಅವರ ಸೂಕ್ಷ್ಮತೆ ಕಂಡು ಅಚ್ಚರಿಕೊಂಡ ಕೊಹ್ಲಿ ಅವರ ಬಳಿ ನಗುತ್ತಾ ಬಂದು ಕಾಲಿಗೆ ನಮಸ್ಕರಿಸಿ ಶೇಕ್ ಹ್ಯಾಂಡ್ ನೀಡಿದರು.
These two ?? #ENGvIND pic.twitter.com/y6fQFRaM7x
— Chloe-Amanda Bailey (@ChloeAmandaB) August 4, 2021
ಇಂಗ್ಲೆಂಡ್ ಪರ ನಾಯಕ ಜೋ ರೂಟ್ 64, ಜಾನಿ ಬೈರ್ಸ್ಟೋ 29 ಹಾಗೂ ಸ್ಯಾಮ್ ಕುರ್ರನ್ ಅಜೇಯ 27 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಇಂಗ್ಲೆಂಡ್ 65.4 ಓವರ್ನಲ್ಲಿ 183 ರನ್ಗೆ ಆಲೌಟ್ ಆಯಿತು. ಭಾರತ ಪರ ಜಸ್ಪ್ರೀತ್ ಬುಮ್ರಾ 4 ವಿಕೆಟ್ ಕಿತ್ತರೆ, ಮೊಹಮ್ಮದ್ ಶಮಿ 3, ಶಾರ್ದೂಲ್ ಥಾಕೂರ್ 2 ಮತ್ತು ಮೊಹಮ್ಮದ್ ಸಿರಾಜ್ 1 ವಿಕೆಟ್ ಪಡೆದರು.
A bit of camaraderie between skipper and wicket-keeper ?
What are they talking about? ?? Wrong answers only ??
Tune into #SonyLIV now ? https://t.co/E4Ntw2hJX5 ??#ENGvsINDonSonyLIV #ENGvIND #ViratKohli #RishabhPant pic.twitter.com/3927TTLhcA
— SonyLIV (@SonyLIV) August 4, 2021
ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ಮೊದಲ ದಿನದಾಟದ ಅಂತ್ಯಕ್ಕೆ ವಿಕೆಟ್ ಕಳೆದುಕೊಳ್ಳದೆ 21 ರನ್ ಗಳಿಸಿದೆ. ರೋಹಿತ್ ಶರ್ಮಾ ಹಾಗೂ ಕೆ. ಎಲ್ ರಾಹುಲ್ ತಲಾ 9 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
Tokyo Olympics: ಇದು ಐತಿಹಾಸಿಕ ಕ್ಷಣ ಪ್ರತಿಯೊಬ್ಬ ಭಾರತೀಯನ ನೆನಪಲ್ಲಿ ಉಳಿಯುವಂತಹ ದಿನ: ಪ್ರಧಾನಿ ಮೋದಿ
(india vs england 1st test virat kohli bows down to rishabh pant after successful review call to dismiss crawley viral video)