AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಂದು ನನ್ನ ಜೀವನ ಮುಗಿಯಿತು ಅಂದುಕೊಂಡಿದ್ದೆ’; ಭೀಕರ ಅಪಘಾತ ನೆನಪಿಸಿಕೊಂಡ ಮಂಜು ಪಾವಗಡ

Bigg Boss Kannada 8 Finale: ತಮ್ಮಿಷ್ಟದ ದೇವರು ಯಾರು ಮತ್ತು ಏಕೆ ಎಂದು ಹೇಳುವ ಅವಕಾಶವನ್ನು ಬಿಗ್​ ಬಾಸ್​ ಕಲ್ಪಿಸಿಕೊಟ್ಟಿದ್ದರು. ಈ ವೇಳೆ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಾದ ಪವಾಡಗಳನ್ನು ನೆನಪಿಸಿಕೊಂಡಿದ್ದಾರೆ.

‘ಅಂದು ನನ್ನ ಜೀವನ ಮುಗಿಯಿತು ಅಂದುಕೊಂಡಿದ್ದೆ’; ಭೀಕರ ಅಪಘಾತ ನೆನಪಿಸಿಕೊಂಡ ಮಂಜು ಪಾವಗಡ
ಮಂಜು ಪಾವಗಡ
TV9 Web
| Edited By: |

Updated on: Aug 06, 2021 | 9:33 AM

Share

‘ಕನ್ನಡ ಬಿಗ್​ ಬಾಸ್​ ಸೀಸನ್​ 8’ ಕೊನೆಯ ಹಂತಕ್ಕೆ ಬಂದು ನಿಂತಿದೆ. ಮನೆಯಲ್ಲಿ ಐದು ಸ್ಪರ್ಧಿಗಳಿದ್ದು, ಎಲ್ಲರೂ ಫಿನಾಲೆಯಲ್ಲಿ ಗೆಲ್ಲಬೇಕು ಎನ್ನುವ ಛಲದಲ್ಲಿದ್ದಾರೆ. ಅದಕ್ಕೂ ಮೊದಲು ತಮ್ಮಿಷ್ಟದ ದೇವರು ಯಾರು ಮತ್ತು ಏಕೆ ಎಂದು ಹೇಳುವ ಅವಕಾಶವನ್ನು ಬಿಗ್​ ಬಾಸ್​ ಕಲ್ಪಿಸಿಕೊಟ್ಟಿದ್ದರು. ಈ ವೇಳೆ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಾದ ಪವಾಡಗಳನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೆ, ತಾವು ಆರಾಧಿಸುವ ದೇವರನ್ನು ನೆನೆದಿದ್ದಾರೆ.

‘ನಾನು ತುಂಬಾ ಇಷ್ಟಪಡೋ ದೇವರು ಅಂದರೆ ಅದು ಧರ್ಮಸ್ಥಳದ ಮಂಜುನಾಥೇಶ್ವರ. ನಾನು ಚಿಕ್ಕವನಿದ್ದಾಗ ನನ್ನ ತಂದೆ ಗುಡಿಸಲಲ್ಲಿ ನನಗೆ ಹೆಸರಿಡಬೇಕು ಎಂದು ಕಡ್ಲೆ ಸಕ್ಕರೆ ಎಲ್ಲವನ್ನೂ ರೆಡಿ ಮಾಡಿಟ್ಟುಕೊಂಡಿದ್ದರು. ಆದರೆ, ಅದು ಕಳ್ಳತನವಾಗಿತ್ತು. ಆಗ ನನಗೆ ಅನಾರೋಗ್ಯ ಕಾಡಿತ್ತು. ಕೋಮಾ ಸ್ಟೇಜ್​ನಲ್ಲಿದ್ದೆ. ಆಗ ನನ್ನ ತಂದೆ ಧರ್ಮಸ್ಥಳಕ್ಕೆ ಹೋಗಿದ್ರು. ಅಲ್ಲಿ ತೀರ್ಥ ಕುಡಿಸಿದಮೇಲೆ ಸರಿ ಆದೆ. ಹೀಗಾಗಿ ಮೊದಲನೆಯದಾಗಿ ಮತ್ತು ಕೊನೆಯದಾಗಿ ನೆನಪಾಗೋದು ಧರ್ಮಸ್ಥಳವೇ’ ಎಂದರು ಮಂಜು ಪಾವಗಡ.

‘ಆರ್ಟಿಸ್ಟ್​ ಆಗಬೇಕು ಅಂದುಕೊಂಡಾಗ ಧರ್ಮಸ್ಥಳಕ್ಕೆ ಹೋಗಿ ಬೇಡಿಕೊಂಡೆ. ನಂತರ ಎರಡು ಮೂರು ವರ್ಷ ಸ್ಟ್ರಗಲ್​ ಮಾಡಿದೆ. ಇದಾದ ಮೇಲೆ 3 ವರ್ಷ ಬಿಟ್ಟು ಮತ್ತೆ ಮಂಜುನಾಥನ ಬಳಿ ಹೋದೆ. ನಾಲ್ಕೈದು ಜನ ಗುರುತಿಸೋ ತರ ಮಾಡು ಎಂದು ಕೋರಿಕೊಂಡೆ. ಜನ ನನ್ನ ಇಷ್ಟಪಡಬೇಕು ಎಂದು ಕೇಳಿದೆ. ಇವತ್ತು ಲಕ್ಷಾಂತರ ಜನರು ಗುರುತಿಸಿದ್ದಾರೆ’ ಎಂದು ಸಂತಸ ಹೊರ ಹಾಕಿದರು ಅವರು.

‘ನನಗೆ ಆ್ಯಕ್ಸಿಡೆಂಟ್​ ಆಗಿ ಕಾಲಿಗೆ ಪೆಟ್ಟು ಬಿದ್ದಿತ್ತು. ನಮ್ಮೂರಲ್ಲಿ ಫ್ಲೋರೈಡ್​ ನೀರು ಜಾಸ್ತಿ. ಅದರಲ್ಲಿ ಕ್ಯಾಲ್ಸಿಯಮ್​ ಇರುವುದಿಲ್ಲ. ಹೀಗಾಗಿ ಮೂಳೆ ಗಟ್ಟಿ ಇರಲ್ಲ​. ಕಾಲು ಮುರಿದು ಕೊಂಡಿದೀಯಾ, ಮತ್ತೆ ಸರಿ ಆಗುವುದು ಕಷ್ಟ ಇದೆ ಎಂದಿದ್ರು. ಇನ್ಮೇಲೆ ನಾನು ಕಲಾವಿದನಾಗಲ್ಲ ಎಂದುಕೊಂಡೆ. ನಂತರ ಮಂಜುನಾಥ ಸ್ವಾಮಿ ಬೇಡಿಕೊಂಡೆ. 9 ತಿಂಗಳು ಕಷ್ಟಪಟ್ಟೆ. ಎಲ್ಲವೂ ಸರಿ ಆಯ್ತು’ ಎಂದು ಜೀವನದಲ್ಲಾದ ಪವಾಡ ನೆನೆದಿದ್ದಾರೆ ಅವರು.

ಇದನ್ನೂ ಓದಿ: ಬಿಗ್​ ಬಾಸ್​ನಿಂದ ಎಲಿಮಿನೇಟ್​ ಆದ ಮೇಲೂ ದಿವ್ಯಾಗೆ ಮಂಜು ಮೇಲಿನ ಭಾವನೆ ಬದಲಾಗಿಲ್ಲ; ಇಲ್ಲಿದೆ ವಿಡಿಯೋ ಸಾಕ್ಷಿ

‘ಅರವಿಂದ್ ಬೈಕ್​ ಮಿಸ್​ ಹೊಡೆಯುತ್ತಿದೆ, ಫಿನಾಲೆ ಗೆಲ್ಲೋದು ಮಂಜು ಪಾವಗಡ’