ಸಾಮಾಜಿಕ ಸಂದೇಶ ಹೊತ್ತು ಬರುತ್ತಿದ್ದಾರೆ ತನ್ವಿ ರಾವ್; ರಾಧೆ ಶ್ಯಾಮ ಧಾರಾವಾಹಿಯಲ್ಲಿ ಭಿನ್ನ ಪ್ರಯತ್ನ
ಉದಯದಲ್ಲಿ ಪ್ರಸಾರವಾದ ‘ಆಕೃತಿ’ ಧಾರಾವಾಹಿಯಲ್ಲಿ ತನ್ವಿ ರಾವ್ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ಅವರು ಮೊದಲ ಧಾರಾವಾಹಿ ಆಗಿತ್ತು. ಈಗ ಅವರಿಗೆ ಹೊಸ ಧಾರಾವಾಹಿಯಲ್ಲಿ ನಟಿಸೋಕೆ ಆಫರ್ ಸಿಕ್ಕಿದೆ.
ತನ್ವಿ ರಾವ್ ಉದಯದಲ್ಲಿ ಪ್ರಸಾರವಾಗುತ್ತಿದ್ದ ‘ಆಕೃತಿ’ ಧಾರಾವಾಹಿ ಮೂಲಕ ಗುರುತಿಸಿಕೊಂಡಿದ್ದರು. ಈಗ ಅವರು ಹೊಸ ಧಾರಾವಾಹಿ ಮೂಲಕ ವೀಕ್ಷಕರ ಎದುರು ಬರೋಕೆ ರೆಡಿ ಆಗಿದ್ದಾರೆ. ಈ ಧಾರಾವಾಹಿಗೆ ‘ರಾಧೆ ಶ್ಯಾಮ’ ಎಂದು ಹೆಸರಿಡಲಾಗಿದೆ. ಈ ಧಾರಾವಾಹಿಯಲ್ಲಿ ಅವರು ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ ಅನ್ನೋದು ವಿಶೇಷ.
ಉದಯದಲ್ಲಿ ಪ್ರಸಾರವಾದ ‘ಆಕೃತಿ’ ಧಾರಾವಾಹಿಯಲ್ಲಿ ತನ್ವಿ ರಾವ್ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ಅವರು ಮೊದಲ ಧಾರಾವಾಹಿ ಆಗಿತ್ತು. ಈಗ ಅವರಿಗೆ ಹೊಸ ಧಾರಾವಾಹಿಯಲ್ಲಿ ನಟಿಸೋಕೆ ಆಫರ್ ಸಿಕ್ಕಿದೆ. ಈ ಧಾರಾವಾಹಿಯಲ್ಲಿ ರಾಧೆ ಪಾತ್ರದಲ್ಲಿ ತನ್ವಿ ರಾವ್ ಕಾಣಿಸಿಕೊಳ್ಳುತ್ತಿದ್ದಾರೆ. ಶಿವ ಪೂಜೆನ ಅಗ್ರಹಾರ ಈ ಧಾರಾವಾಹಿಯ ನಿರ್ದೇಶನ ಜವಾಬ್ದಾರಿ ಹೊತ್ತಿದ್ದಾರೆ.
‘ರಾಧಾ ರಮಣ’ ಧಾರಾವಾಹಿ ಕಿರುತೆರೆಯಲ್ಲಿ ಒಳ್ಳೆಯ ಹೆಸರು ಮಾಡಿತ್ತು. ಈ ಧಾರಾವಾಹಿಯನ್ನು ಶಿವ ನಿರ್ದೇಶನ ಮಾಡಿದ್ದರು. ಈಗ ಅವರು ‘ರಾಧೆ ಶ್ಯಾಮ’ ಹೆಸರಿನ ಧಾರಾವಾಹಿ ನಿರ್ದೇಶನ ಮಾಡೋಕೆ ಮುಂದಾಗಿದ್ದಾರೆ. ಹೀಗಾಗಿ, ವೀಕ್ಷಕರಲ್ಲಿ ಈ ಧಾರಾವಾಹಿ ಬಗ್ಗೆ ಹೆಚ್ಚಿನ ನಿರೀಕ್ಷೆ ಇದೆ.
‘ರಾಧೆ ಶ್ಯಾಮ’ ಬಗ್ಗೆ ಮಾತನಾಡಿರುವ ತನ್ವಿ ರಾವ್, ‘ರಾಧೆ ಓರ್ವ ಶಿಕ್ಷಣ ಪಡೆದ ಹುಡುಗಿ. ಪರಿಸ್ಥಿತಿ ಯಾವುದೇ ಇರಲಿ ಅವಳು ನ್ಯಾಯಕ್ಕಾಗಿ ಹೋರಾಡುತ್ತಾಳೆ. ಭ್ರಷ್ಟಾಚಾರ ಕಂಡರೆ ಅವಳಿಗೆ ಆಗುವುದಿಲ್ಲ. ರಾಧೆ ಮದುವೆಯಾದಾಗ ಅವಳ ಜೀವನವು ಒಂದು ಹಠಾತ್ ತಿರುವು ಪಡೆದುಕೊಳ್ಳುತ್ತದೆ. ಈ ಧಾರಾವಾಹಿಯಲ್ಲಿ ಒಂದು ಅದ್ಭುತ ಸಂದೇಶವಿದೆ. ಒಬ್ಬರಿಗೊಬ್ಬರು ಸಹಾಯ ಮಾಡಿದರೆ ಸಮಾಜದ ಕಲ್ಯಾಣ ಸಾಧ್ಯ ಎನ್ನುವುದು ವೀಕ್ಷಕರಿಗೆ ಮನವರಿಕೆ ಆಗಲಿದೆ’ ಎನ್ನುತ್ತಾರೆ.
ಈ ಬಗ್ಗೆ ಮಾತನಾಡಿರುವ ಶಿವ ‘ಸಾಮಾನ್ಯವಾಗಿ ಕುಟುಂಬದ ಡ್ರಾಮಾ ಸುತ್ತ ಧಾರಾವಾಹಿಗಳು ಸಾಗುತ್ತವೆ. ರಾಧೆ ಶ್ಯಾಮ ಧಾರಾವಾಹಿಯಲ್ಲಿ ನಾವು ಸಾಮಾಜಿಕ ಸಮಸ್ಯೆ ಬಗ್ಗೆ ಹೇಳುತ್ತಿದ್ದೇವೆ. ಭ್ರಷ್ಟಾಚಾರದ ವಿರುದ್ಧ ಒಂದು ಸಂದೇಶವಿದೆ’ ಎಂದಿದ್ದಾರೆ. ಈ ಧಾರಾವಾಹಿಯಲ್ಲಿ ರವಿ ಭಟ್, ಅಶ್ವಿನಿ ಗೌಡ ಮತ್ತು ಸುಚಿತ್ರ ಕೂಡ ನಟಿಸಿದ್ದಾರೆ.
ಇದನ್ನೂ ಓದಿ: ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ರಿಯಾಲಿಟಿ ಶೋನಲ್ಲಿ ಆ್ಯಂಕರ್ ಅನುಶ್ರೀಗೆ ಸಿಕ್ಕರು ಈ ವಿಶೇಷ ವ್ಯಕ್ತಿ