‘ಡ್ಯಾನ್ಸ್​​ ಕರ್ನಾಟಕ ಡ್ಯಾನ್ಸ್’ ರಿಯಾಲಿಟಿ ಶೋನಲ್ಲಿ ಆ್ಯಂಕರ್ ಅನುಶ್ರೀಗೆ ಸಿಕ್ಕರು ಈ ವಿಶೇಷ ವ್ಯಕ್ತಿ

ಅನುಶ್ರೀ ‘ಡ್ಯಾನ್ಸ್​​ ಕರ್ನಾಟಕ ಡ್ಯಾನ್ಸ್’ ​ ರಿಯಾಲಿಟಿ ಶೋ ನಡೆಸಿಕೊಡುತ್ತಿದ್ದಾರೆ. ಕರ್ನಾಟಕದ ಅನೇಕ ಪ್ರತಿಭೆಗಳಿಗೆ ಈ ಶೋ ವೇದಿಕೆ ಆಗಿದೆ. ಈ ಕಾರ್ಯಕ್ರಮಕ್ಕೆ ದೊಡ್ಡ ವೀಕ್ಷಕರ ಬಳಗ ಕೂಡ ಇದೆ.

‘ಡ್ಯಾನ್ಸ್​​ ಕರ್ನಾಟಕ ಡ್ಯಾನ್ಸ್’ ರಿಯಾಲಿಟಿ ಶೋನಲ್ಲಿ ಆ್ಯಂಕರ್ ಅನುಶ್ರೀಗೆ ಸಿಕ್ಕರು ಈ ವಿಶೇಷ ವ್ಯಕ್ತಿ
‘ಡ್ಯಾನ್ಸ್​​ ಕರ್ನಾಟಕ ಡ್ಯಾನ್ಸ್’ ರಿಯಾಲಿಟಿ ಶೋನಲ್ಲಿ ಆ್ಯಂಕರ್ ಅನುಶ್ರೀಗೆ ಸಿಕ್ಕರು ವಿಶೇಷ ವ್ಯಕ್ತಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Aug 05, 2021 | 7:09 PM

ಆ್ಯಂಕರ್ ಅನುಶ್ರೀ ಕಿರಿತೆರೆ ಜಗತ್ತಿನಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ಜನಪ್ರಿಯ ಶೋಗಳನ್ನು ಯಶಸ್ವಿಯಾಗಿ ನಿರೂಪಣೆ ಮಾಡಿದ ಖ್ಯಾತಿ ಅವರಿಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್​ ಆಗಿರುವ ಅವರು ‘ಕ್ರೇಜಿ ಸ್ಟಾರ್’​ ರವಿಚಂದ್ರನ್​ ಜತೆ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಅವರ ಅಭಿಮಾನಿಗಳಿಗೆ ಸಾಕಷ್ಟು ಖುಷಿ ನೀಡಿದೆ.

ಸದ್ಯ, ಅನುಶ್ರೀ ‘ಡ್ಯಾನ್ಸ್​​ ಕರ್ನಾಟಕ ಡ್ಯಾನ್ಸ್’ ​ ರಿಯಾಲಿಟಿ ಶೋ ನಡೆಸಿಕೊಡುತ್ತಿದ್ದಾರೆ. ಕರ್ನಾಟಕದ ಅನೇಕ ಪ್ರತಿಭೆಗಳಿಗೆ ಈ ಶೋ ವೇದಿಕೆ ಆಗಿದೆ. ಈ ಕಾರ್ಯಕ್ರಮಕ್ಕೆ ದೊಡ್ಡ ವೀಕ್ಷಕರ ಬಳಗ ಕೂಡ ಇದೆ. ಈ ರಿಯಾಲಿಟಿ ಶೋಗೆ ರವಿಚಂದ್ರನ್​ ಅವರು ವಿಶೇಷ ಅತಿಥಿ ಆಗಿ ಆಗಮಿಸಿದ್ದರು. ಅವರ ಜತೆಗೆ ಅನುಶ್ರೀ ಫೋಟೋ ಕ್ಲಿಕ್​ ಮಾಡಿಕೊಂಡಿದ್ದಾರೆ. ಅಲ್ಲದೆ, ಇದನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

‘ಯಾವ ವಿಶ್ವ ವಿದ್ಯಾಲಯವೂ ಹೇಳಿಕೊಡದ ಜೀವನ ಪಾಠ. ‘ಡ್ಯಾನ್ಸ್​​ ಕರ್ನಾಟಕ ಡ್ಯಾನ್ಸ್’ ಕಾರ್ಯಕ್ರಮಕ್ಕೆ ಆಗಮಿಸಿದ ರವಿಚಂದ್ರನ್​ ಅವರು ಹೇಳಿಕೊಟ್ಟರು. ನಿಮ್ಮ ಸನಿಹ ನಿಂತು ಮಾತಾಡುವಷ್ಟು ಬಾಂಧವ್ಯ ದೊರಕಿದೆ ಅನ್ನೋದೇ ನನ್ನ ಹೆಮ್ಮೆ. ಇದು ನಮ್ಮ ಕಾರ್ಯಕ್ರಮದ ಬೆಸ್ಟ್ ವಾರ’ ಎಂದು ಅನುಶ್ರೀ ಬರೆದುಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ರವಿಚಂದ್ರನ್​ ಅವರು ಸಾಕಷ್ಟು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ‘ರವಿ ಬೋಪಣ್ಣ’ ಚಿತ್ರಕ್ಕೆ ರವಿಚಂದ್ರನ್​  ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಆ ಬಳಿಕ ‘ಗಾಡ್​’, ‘60’ ಮತ್ತು ‘ಬ್ಯಾಡ್​ ಬಾಯ್ಸ್​’ ಎಂಬ ಸಿನಿಮಾಗಳನ್ನು ನಿರ್ದೇಶಿಸಲಿದ್ದಾರೆ. ‘ದೃಶ್ಯ 2’ ಸಿನಿಮಾ ಕೆಲಸಗಳು ಕೂಡ ಆರಂಭಗೊಂಡಿವೆ. ಇನ್ನು, ಅನುಶ್ರೀ ರಿಯಾಲಿಟಿ ಶೋ ನಿರೂಪಣೆಯಲ್ಲಿ ಬ್ಯುಸಿಯಾಗಿದ್ದಾರೆ. ವೈಯಕ್ತಿಕವಾಗಿ ಯೂಟ್ಯೂಬ್​ ಚಾನೆಲ್​ ಮಾಡಿಕೊಂಡಿರುವ ಅವರು ಸಾಕಷ್ಟು ಸೆಲೆಬ್ರಿಟಿಗಳನ್ನು ಸಂದರ್ಶನ ಮಾಡಿದ್ದಾರೆ. ಕೊವಿಡ್​ ಕಾರಣದಿಂದ ಹೊಸ ಸಂದರ್ಶನ ಮಾಡಿಲ್ಲ.

ಇದನ್ನೂ ಓದಿ: ರವಿಚಂದ್ರನ್​ 60ನೇ ಹುಟ್ಟುಹಬ್ಬ; ಕನಸುಗಾರನ ಜನ್ಮದಿನಕ್ಕೆ 3 ಹೊಸ ಕನಸುಗಳ ಅನಾವರಣ

ರವಿಚಂದ್ರನ್​ ‘ದೃಶ್ಯ 2’ ಶೂಟಿಂಗ್​ ಶುರು; ಚಿತ್ರತಂಡಕ್ಕೆ ಹೊಸ ಎಂಟ್ರಿ ಅನಂತ್​ ನಾಗ್​​

Published On - 6:43 pm, Thu, 5 August 21