ಬಿಗ್​ ಬಾಸ್​ ಸ್ಪರ್ಧಿಗೆ ಒಬ್ಬರು ಒಂದು ದಿನಕ್ಕೆ ಎಷ್ಟು ವೋಟ್​ ಮಾಡಬಹುದು?

ಬಿಗ್ ಬಾಸ್​ ಮನೆ ಸೇರಿದ ನಂತರದಲ್ಲಿ ಸ್ಪರ್ಧಿಗಳ ಕೈಯಲ್ಲಿ ಏನೂ ಇರುವುದಿಲ್ಲ. ಅವರು ಯಾವಾಗ ಹೊರ ಬರಬೇಕು? ಯಾರನ್ನು ಗೆಲ್ಲಿಸಬೇಕು ಎಂಬುದು ಇರೋದು ವೀಕ್ಷಕರ ಕೈಯಲ್ಲಿ.

ಬಿಗ್​ ಬಾಸ್​ ಸ್ಪರ್ಧಿಗೆ ಒಬ್ಬರು ಒಂದು ದಿನಕ್ಕೆ ಎಷ್ಟು ವೋಟ್​ ಮಾಡಬಹುದು?
ಕಿಚ್ಚ ಸುದೀಪ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 05, 2021 | 3:22 PM

ಬಿಗ್​ ಬಾಸ್​ ಮನೆ ಸೇರಿದ ನಂತರದಲ್ಲಿ ಜನರ ಗಮನ ಸೆಳೆಯಲು ಸ್ಪರ್ಧಿಗಳು ನಾನಾ ಕಸರತ್ತು ಮಾಡುತ್ತಾರೆ. ಮನೆಯಲ್ಲಿ ಎಷ್ಟೇ ಪ್ರಯತ್ನ ನಡೆಸಿದರೂ ಅಂತಿಮವಾಗಿ ವೀಕ್ಷಕರು ಯಾರಿಗೆ ವೋಟ್​ ಮಾಡುತ್ತಾರೋ ಅವರು ಗೆದ್ದಂತೆ. ಹಾಗಾದರೆ ಓರ್ವ ವ್ಯಕ್ತಿ ಒಂದು ದಿನಕ್ಕೆ ಎಷ್ಟು ವೋಟ್​ ಮಾಡಬಹುದು ಎನ್ನುವ ಪ್ರಶ್ನೆಯೇ? ಅದಕ್ಕೆ ಇಲ್ಲಿದೆ ಉತ್ತರ.

ಬಿಗ್ ಬಾಸ್​ ಮನೆ ಸೇರಿದ ನಂತರದಲ್ಲಿ ಸ್ಪರ್ಧಿಗಳ ಕೈಯಲ್ಲಿ ಏನೂ ಇರುವುದಿಲ್ಲ. ಅವರು ಯಾವಾಗ ಹೊರ ಬರಬೇಕು? ಯಾರನ್ನು ಗೆಲ್ಲಿಸಬೇಕು ಎಂಬುದು ಇರೋದು ವೀಕ್ಷಕರ ಕೈಯಲ್ಲಿ. ಬಿಗ್​ ಬಾಸ್​ನಲ್ಲಿ ಪ್ರತಿ ವಾರ ಎಲಿಮಿನೇಷನ್​ ಮಾಡಲಾಗುತ್ತದೆ. ಎಲಿಮಿನೇಷನ್​ ಮಾಡೋಕೆ ನಾಮಿನೇಷನ್​ ಮಾಡಲಾಗುತ್ತದೆ. ಯಾರ್ಯಾರು ನಾಮಿನೇಟ್​ ಆಗಿರುತ್ತಾರೋ ಅವರಿಗೆ ವೀಕ್ಷಕರು ವೋಟ್​ ಮಾಡಬೇಕು. ಹೆಚ್ಚು ವೋಟ್​ ಪಡೆದ ಸ್ಪರ್ಧಿಗಳು ಸೇವ್​ ಆಗುತ್ತಾರೆ. ಕಡಿಮೆ ಮತ ಪಡೆದವರು ಔಟ್​ ಆಗುತ್ತಾರೆ.

ಕನ್ನಡ ಬಿಗ್​ ಬಾಸ್​ ಮನೆಯಲ್ಲಿ ಸದ್ಯ ಐದು ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಇದೇ ಶನಿವಾರ ಹಾಗೂ ಭಾನುವಾರ ಫಿನಾಲೆ ನಡೆಯಲಿದೆ. ಯಾರಿಗೆ ಅತಿ ಹೆಚ್ಚು ಮತ ಬೀಳುತ್ತದೆಯೋ ಅವರು ಗೆದ್ದಂತೆ. ಸ್ಪರ್ಧಿಗಳಿಗೆ ವೋಟ್​ ಮಾಡೋಕೆ ವೂಟ್​ ಆ್ಯಪ್​ನಲ್ಲಿ ಅವಕಾಶ ಮಾಡಿಕೊಡಲಾಗಿದೆ. ಅಲ್ಲಿಗೆ ತೆರಳಿ ತಮ್ಮಿಷ್ಟದ ವ್ಯಕ್ತಿಗೆ ವೀಕ್ಷಕರು ವೋಟ್ ಮಾಡಬಹುದು.

ಹಾಗಾದರೆ, ವ್ಯಕ್ತಿ ಒಬ್ಬರು ಒಂದು ದಿನಕ್ಕೆ ಎಷ್ಟು ವೋಟ್​ ಮಾಡಬಹುದು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ. ಒಂದು ಖಾತೆಯಿಂದ ಓರ್ವ ವ್ಯಕ್ತಿ ಒಂದು ದಿನಕ್ಕೆ 99 ವೋಟ್​ ಚಲಾಯಿಸಬಹುದು. ಹಾಗಂತ ಒಂದೇ ವ್ಯಕ್ತಿಗೆ 99 ಮತಗಳನ್ನು ಹಾಕಬೇಕು ಎನ್ನುವ ನಿಯಮವಿಲ್ಲ. ನಿಮ್ಮಿಷ್ಟದ ಯಾವುದೇ ಸ್ಪರ್ಧಿಗೆ ನೀವು ಮತ ಹಾಕಬಹುದು. ಆದರೆ, 99ಕ್ಕಿಂತ ಹೆಚ್ಚಿನ ಮತ ಹಾಕಲು ಸಾಧ್ಯವಿಲ್ಲ.

ಮಂಜು ಪಾವಗಡ, ಅರವಿಂದ್ ಕೆ.ಪಿ., ಪ್ರಶಾಂತ್​ ಸಂಬರಗಿ, ದಿವ್ಯಾ ಉರುಡುಗ ಹಾಗೂ ವೈಷ್ಣವಿ ಫಿನಾಲೆ ತಲುಪಿದ್ದಾರೆ. ಇವರಲ್ಲಿ ಅತಿ ಹೆಚ್ಚು ವೋಟ್​ ಪಡೆದವರು ಗೆಲ್ಲುತ್ತಾರೆ.

ಇದನ್ನೂ ಓದಿ: Divya Suresh: ಬಿಗ್​ ಬಾಸ್​ ಸ್ಪರ್ಧಿಗಳಿಗೆ ಮುಖ ತೋರಿಸದೇ ಮನೆಯಿಂದ ಹೊರ ನಡೆದ ದಿವ್ಯಾ ಸುರೇಶ್​

ತೀವ್ರ ಸಂಕಷ್ಟದ ನಡುವೆಯೂ ಬಿಗ್​ ಬಾಸ್​ ಓಟಿಟಿಗೆ ಬರ್ತಾರಾ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ?