AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Divya Suresh: ಬಿಗ್​ ಬಾಸ್​ ಸ್ಪರ್ಧಿಗಳಿಗೆ ಮುಖ ತೋರಿಸದೇ ಮನೆಯಿಂದ ಹೊರ ನಡೆದ ದಿವ್ಯಾ ಸುರೇಶ್​

ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ, ಅರವಿಂದ್ ಕೆ.ಪಿ., ಪ್ರಶಾಂತ್​ ಸಂಬರಗಿ, ದಿವ್ಯಾ ಉರುಡುಗ, ದಿವ್ಯಾ ಸುರೇಶ್​ ಹಾಗೂ ವೈಷ್ಣವಿ ಇದ್ದರು. ಫಿನಾಲೆ ವೀಕ್​ ಆದ್ದರಿಂದ ಎಲಿಮಿನೇಷನ್​ಗೆ ಎಲ್ಲರೂ ನಾಮಿನೇಟ್​​ ಆಗಿದ್ದರು.

Divya Suresh: ಬಿಗ್​ ಬಾಸ್​ ಸ್ಪರ್ಧಿಗಳಿಗೆ ಮುಖ ತೋರಿಸದೇ ಮನೆಯಿಂದ ಹೊರ ನಡೆದ ದಿವ್ಯಾ ಸುರೇಶ್​
ದಿವ್ಯಾ ಸುರೇಶ್​
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Aug 04, 2021 | 10:33 PM

Share

ಬಿಗ್​ ಬಾಸ್​ ಫಿನಾಲೆಗೆ ಇನ್ನು ಬೆರಳೆಣಿಕೆ ದಿನಗಳು ಮಾತ್ರ ಬಾಕಿ ಇವೆ. ಅದಕ್ಕೂ ಮೊದಲು ಬಿಗ್​ ಬಾಸ್​ ಮನೆಯಲ್ಲಿ ಎಲಿಮಿನೇಷನ್​ ನಡೆದಿದೆ. ಆರು ಸ್ಪರ್ಧಿಗಳ ಪೈಕಿ ದಿವ್ಯಾ ಸುರೇಶ್​ ಎಲಿಮಿನೇಟ್​ ಆಗಿದ್ದಾರೆ. ಈ ಮೂಲಕ ಮನೆಯ ಸದಸ್ಯರ ಸಂಖ್ಯೆ ಐದಕ್ಕೆ ಇಳಿಕೆ ಆಗಿದೆ. 

ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ, ಅರವಿಂದ್ ಕೆ.ಪಿ., ಪ್ರಶಾಂತ್​ ಸಂಬರಗಿ, ದಿವ್ಯಾ ಉರುಡುಗ, ದಿವ್ಯಾ ಸುರೇಶ್​ ಹಾಗೂ ವೈಷ್ಣವಿ ಇದ್ದರು. ಫಿನಾಲೆ ವೀಕ್​ ಆದ್ದರಿಂದ ಎಲಿಮಿನೇಷನ್​ಗೆ ಎಲ್ಲರೂ ನಾಮಿನೇಟ್​​ ಆಗಿದ್ದರು. ಅಂದಹಾಗೆ, ಈ ವಾರದ ಮಧ್ಯದಲ್ಲಿ (ಬುಧವಾರ) ದಿವ್ಯಾ ಸುರೇಶ್​ ಎಲಿಮಿನೇಟ್​ ಆಗಿದ್ದಾರೆ.

ಕಳೆದ ವಾರದ ಆರಂಭದಲ್ಲಿ ಬಿಗ್​ ಬಾಸ್​ ಮನೆಯಲ್ಲಿ 9 ಸದಸ್ಯರು ಇದ್ದರು. ಈ ಪೈಕಿ ಚಕ್ರವರ್ತಿ ಚಂದ್ರಚೂಡ್​ ವಾರದ ಮಧ್ಯದಲ್ಲಿ ಎಲಿಮಿನೇಟ್​ ಆದರು. ಕಳೆದ ವಾರಾಂತ್ಯದಲ್ಲಿ ಶುಭಾ ಪೂಂಜಾ ಹಾಗೂ ಶಮಂತ್​ ಬ್ರೋ ಗೌಡ ಎಲಿಮಿನೇಟ್​ ಆಗಿದ್ದಾರೆ.

ಫಿನಾಲೆಯಲ್ಲಿ ಉಳಿದುಕೊಳ್ಳೋದು ಐದು ಸ್ಪರ್ಧಿಗಳು. ಪ್ರತಿ ವರ್ಷವೂ ಇದೇ ಸಂಪ್ರದಾಯ ನಡೆದುಕೊಂಡು ಬಂದಿದೆ. ಈ ಬಾರಿ ಫಿನಾಲೆ ವೀಕ್​ ಬಂದರೂ ಆರು ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ ಕಾರಣಕ್ಕೆ ಒಬ್ಬರು ಫಿನಾಲೆ ವಾರ ಮನೆಯಿಂದ ಹೊರ ಹೋಗಲಿದ್ದಾರೆ ಎಂದು ಸುದೀಪ್​ ಹೇಳಿದ್ದರು. ಅಂತೆಯೇ ಬುಧವಾರದ ಎಪಿಸೋಡ್​​ನಲ್ಲಿ​ ಎಲಿಮಿನೇಷನ್​ ಪ್ರಕ್ರಿಯೆ ನಡೆದಿದೆ. ಮೊದಲು ಅರವಿಂದ್​ ಸೇವ್​ ಆದರೆ, ನಂತರ ವೈಷ್ಣವಿ, ಮಂಜು, ದಿವ್ಯಾ ಉರುಡುಗ ಸೇವ್​ ಆದರು.

ಮನೆಯ ಮುಖ್ಯದ್ವಾರದ ಸಮೀಪ ಎರಡು ರೂಮ್​ ಮಾಡಲಾಗಿತ್ತು. ಇದರೊಳಗೆ ಕೊನೆಯದಾಗಿ ಉಳಿದುಕೊಂಡಿದ್ದ ಪ್ರಶಾಂತ್ ಹಾಗೂ ದಿವ್ಯಾ ಸುರೇಶ್​ ಒಳ ನಡೆದರು. ಪ್ರಶಾಂತ್​ ಇದರಿಂದ ಹೊರ ಬಂದರೆ, ದಿವ್ಯಾ ಹಾಗೆಯೇ ಮನೆಯಿಂದ ಹೊರ ನಡೆದರು. ಉಳಿದ ಸ್ಪರ್ಧಿಗಳಿಗೆ ಕೊನೆಯದಾಗಿ ಒಂದು ಬಾಯ್​ ಹೇಳೋಕೂ ಅವರ ಬಳಿ ಸಾಧ್ಯವಾಗಿಲ್ಲ. ಈ ಮೂಲಕ ಮಂಜು ಪಾವಗಡ, ಅರವಿಂದ್ ಕೆ.ಪಿ., ಪ್ರಶಾಂತ್​ ಸಂಬರಗಿ, ದಿವ್ಯಾ ಉರುಡುಗ ಹಾಗೂ ವೈಷ್ಣವಿ ಫಿನಾಲೆ ತಲುಪಿದ್ದಾರೆ.

ದಿವ್ಯಾ ಸುರೇಶ್​ಗೆ ಮಂಜು ಹೆಚ್ಚು ಆಪ್ತರಾಗಿದ್ದರು. ಆದರೆ, ಸೆಕೆಂಡ್​ ಸೀಸನ್​ನಲ್ಲಿ ಮಂಜು ಜತೆ ಅಷ್ಟು ಆಪ್ತತೆ ಇರಲಿಲ್ಲ. ಇನ್ನು, ಇತ್ತೀಚೆಗೆ ಟಾಸ್ಕ್​ ಸಂದರ್ಭದಲ್ಲಿ ಸಾಕಷ್ಟು ಡಲ್​ ಆಗಿದ್ದರು ಅವರು. ಪ್ರಿಯಾಂಕಾ ತಿಮ್ಮೇಶ್​ ಹಾಗೂ ಶಮಂತ್​ ಬ್ರೋ ಗೌಡ ಜತೆ  ದಿವ್ಯಾ ಆಪ್ತವಾಗಿದ್ದರು. ಆದರೆ, ಅವರಿಬ್ಬರೂ ಮನೆಯಲ್ಲಿ ಇಲ್ಲ. ಇನ್ನು, ಮಂಜು ಜತೆ ದಿವ್ಯಾ ಆಪ್ತತೆ ಕಳೆದುಕೊಂಡ ನಂತರದಲ್ಲಿ ಅವರಿಗೆ ಬೀಳುವ ವೋಟ್​ ಕೂಡ ಕಡಿಮೆ ಆಗಿದೆ ಎನ್ನಲಾಗಿದೆ. ಈ ಎಲ್ಲಾ ಕಾರಣಕ್ಕೆ ದಿವ್ಯಾ ಎಲಿಮಿನೇಟ್​ ಆಗಿದ್ದಾರೆ.

ಇದನ್ನೂ ಓದಿ: Bigg Boss Finale: ಬಿಗ್​ ಬಾಸ್​ ಫಿನಾಲೆ ತಲುಪಿದ ಐದು ಸ್ಪರ್ಧಿಗಳು ಇವರೇ; ಇಲ್ಲಿದೆ ಫೋಟೋ ಸಾಕ್ಷ್ಯ

Published On - 9:46 pm, Wed, 4 August 21

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!