AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Finale: ಬಿಗ್​ ಬಾಸ್​ ಫಿನಾಲೆ ತಲುಪಿದ ಐದು ಸ್ಪರ್ಧಿಗಳು ಇವರೇ; ಇಲ್ಲಿದೆ ಫೋಟೋ ಸಾಕ್ಷ್ಯ

Bigg Boss Kannada 8 Finale: ಫಿನಾಲೆ ವೀಕ್​ ಆದ್ದರಿಂದ ಎಲಿಮಿನೇಷನ್​ಗೆ ಎಲ್ಲರೂ ನಾಮಿನೇಟ್​​ ಆಗಿದ್ದಾರೆ. ಅಂದಹಾಗೆ, ಈ ವಾರದ ಮಧ್ಯದಲ್ಲಿ (ಬುಧವಾರ) ಒಬ್ಬರು ಎಲಿಮಿನೇಟ್​ ಆಗುತ್ತಿದ್ದಾರೆ.

Bigg Boss Finale: ಬಿಗ್​ ಬಾಸ್​ ಫಿನಾಲೆ ತಲುಪಿದ ಐದು ಸ್ಪರ್ಧಿಗಳು ಇವರೇ; ಇಲ್ಲಿದೆ ಫೋಟೋ ಸಾಕ್ಷ್ಯ
ಕಲರ್ಸ್​ ಕನ್ನಡ ವಾಹಿನಿ ಬ್ಯುಸಿನೆಸ್​ ಹೆಡ್​ ಪರಮೇಶ್ವರ್​ ಗುಂಡ್ಕಲ್ ಹಂಚಿಕೊಂಡ ಫೋಟೋ
TV9 Web
| Edited By: |

Updated on: Aug 04, 2021 | 4:51 PM

Share

ಈ ವಾರಾಂತ್ಯದಲ್ಲಿ ಕನ್ನಡ ಬಿಗ್​ ಬಾಸ್​ ಸೀಸನ್​ 8 ಫಿನಾಲೆ ನಡೆಯುತ್ತಿದೆ. ಮನೆಯಲ್ಲಿ ಸದ್ಯ ಆರು ಸ್ಪರ್ಧಿಗಳಿದ್ದಾರೆ. ಒಬ್ಬರು ಎಲಿಮಿನೇಟ್​ ಆಗಿ, ಐವರು ಫಿನಾಲೆ ತಲುಪಲಿದ್ದಾರೆ. ಆ ಐದು ಸ್ಪರ್ಧಿಗಳು ಯಾರು ಎನ್ನುವ ಕುತೂಹಲ ವೀಕ್ಷಕರನ್ನು ಕಾಡುತ್ತಿದೆ. ಹಾಗಾದರೆ, ಇಂದು ಹೊರ ಹೋಗುವ ಸ್ಪರ್ಧಿ ಯಾರು? ಫಿನಾಲೆಯಲ್ಲಿ ಉಳಿದುಕೊಳ್ಳೋ ಸ್ಪರ್ಧಿಗಳು ಯಾರ್ಯಾರು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ, ಅರವಿಂದ್ ಕೆ.ಪಿ., ಪ್ರಶಾಂತ್​ ಸಂಬರಗಿ, ದಿವ್ಯಾ ಉರುಡುಗ, ದಿವ್ಯಾ ಸುರೇಶ್​ ಹಾಗೂ ವೈಷ್ಣವಿ ಇದ್ದಾರೆ. ಫಿನಾಲೆ ವೀಕ್​ ಆದ್ದರಿಂದ ಎಲಿಮಿನೇಷನ್​ಗೆ ಎಲ್ಲರೂ ನಾಮಿನೇಟ್​​ ಆಗಿದ್ದಾರೆ. ಅಂದಹಾಗೆ, ಈ ವಾರದ ಮಧ್ಯದಲ್ಲಿ (ಬುಧವಾರ) ಒಬ್ಬರು ಎಲಿಮಿನೇಟ್​ ಆಗುತ್ತಿದ್ದಾರೆ. ಈ ಬಗ್ಗೆ ಕಲರ್ಸ್​ ಕನ್ನಡ ವಾಹಿನಿ ಪ್ರೋಮೋ ಕೂಡ ಹಂಚಿಕೊಂಡಿತ್ತು.

ಕಳೆದ ವಾರದ ಆರಂಭದಲ್ಲಿ ಬಿಗ್​ ಬಾಸ್​ ಮನೆಯಲ್ಲಿ 9 ಸದಸ್ಯರು ಇದ್ದರು. ಈ ಪೈಕಿ ಚಕ್ರವರ್ತಿ ಚಂದ್ರಚೂಡ್​ ವಾರದ ಮಧ್ಯದಲ್ಲಿ ಎಲಿಮಿನೇಟ್​ ಆದರು. ಕಳೆದ ವಾರಾಂತ್ಯದಲ್ಲಿ ಶುಭಾ ಪೂಂಜಾ ಹಾಗೂ ಶಮಂತ್​ ಬ್ರೋ ಗೌಡ ಎಲಿಮಿನೇಟ್​ ಆಗಿದ್ದಾರೆ. ಇಂದು ಯಾರು ಹೊರ ಹೋಗುತ್ತಾರೆ ಎನ್ನುವ ಕುತೂಹಲ ವೀಕ್ಷಕರದ್ದು.

ಕಲರ್ಸ್​ ಕನ್ನಡ ವಾಹಿನಿ ಬ್ಯುಸಿನೆಸ್​ ಹೆಡ್​ ಪರಮೇಶ್ವರ್​ ಗುಂಡ್ಕಲ್​ ಸೋಶಿಯಲ್​ ಮೀಡಿಯಾದಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗೆ ಶನಿವಾರ ಮತ್ತು ಭಾನುವಾರ ಫಿನಾಲೆ ಎನ್ನುವ ಕ್ಯಾಪ್ಶನ್​ ನೀಡಿದ್ದಾರೆ ಅವರು. ಈ ಫೋಟೋದಲ್ಲಿ ನಾಲ್ಕು ಫ್ರೇಮ್​ ಇದೆ. ಒಂದರಲ್ಲಿ ಬಿಗ್​ ಬಾಸ್​ ಮನೆಯಲ್ಲಿರುವ ದೇವರ ಫೋಟೋ ಇದೆ. ಉಳಿದ ಮೂರು ಫ್ರೇಮ್​ಗಳಲ್ಲಿ ದಿವ್ಯಾ ಉರುಡುಗ-ಅರವಿಂದ್​, ಮಂಜು-ವೈಷ್ಣವಿ ಹಾಗೂ ಪ್ರಶಾಂತ್​ ಸಂಬರಗಿ ಇದ್ದಾರೆ. ದಿವ್ಯಾ ಸುರೇಶ್​ ಫೋಟೋದಿಂದ ಮಿಸ್​ ಆಗಿದ್ದಾರೆ.

ಈ ಮೂಲಕ ದಿವ್ಯಾ ಸುರೇಶ್​ ಇಂದು ಬಿಗ್​ ಬಾಸ್​ ಮನೆಯಿಂದ ಹೊರಹೋಗುವುದು ಖಚಿತವಾಗಿದೆ. ಹೀಗಾಗಿ, ಮಂಜು ಪಾವಗಡ, ಅರವಿಂದ್ ಕೆ.ಪಿ., ಪ್ರಶಾಂತ್​ ಸಂಬರಗಿ, ದಿವ್ಯಾ ಉರುಡುಗ ಹಾಗೂ ವೈಷ್ಣವಿ ಫಿನಾಲೆ ತಲುಪಿರುವುದು ಬಹುತೇಕ ಖಚಿತವಾಗಿದೆ.

ಇದನ್ನೂ ಓದಿ: ಬಿಗ್​ ಬಾಸ್​ ಫಿನಾಲೆಗೂ ಮೊದಲು ಮಿಡ್​ವೀಕ್​ ಎಲಿಮಿನೇಷನ್​; ಇಂದು ಹೊರ ಹೋಗುವ ಸ್ಪರ್ಧಿ ಇವರೇನಾ?

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್