Hariprriya: ಕಿರುತೆರೆಗೆ ಕಾಲಿಡಲಿದ್ದಾರೆ ನಟಿ ಹರಿಪ್ರಿಯಾ; ಏನಿದು ಸಮಾಚಾರ?
ನಟಿ ಹರಿಪ್ರಿಯಾ ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾರೆ. ಅವರ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಕೊವಿಡ್ ಎರಡನೇ ಅಲೆ ಕಾರಣದಿಂದ ಕೆಲ ಸಿನಿಮಾ ಕೆಲಸಗಳು ವಿಳಂಬವಾಗಿವೆ.
ಕಿರುತೆರೆ ಕೂಡ ಈಗ ಹಿರಿತೆರೆಯಷ್ಟೇ ಬೆಳೆದು ನಿಂತಿದೆ. ಸ್ಟಾರ್ ಕಲಾವಿದರು ಕಿರುತೆರೆ ನಿರೂಪಣೆ ಮಾಡಿದ ಸಾಕಷ್ಟು ಉದಾಹರಣೆ ಇದೆ. ಈಗ ಇದಕ್ಕೆ ಹೊಸ ಸೇರ್ಪಡೆ ನಟಿ ಹರಿಪ್ರಿಯಾ ಹಾಗೂ ನಟ ಪ್ರಜ್ವಲ್ ದೇವರಾಜ್. ಇಬ್ಬರೂ ಈಗ ಕಿರುತೆರೆಗೆ ಕಾಲಿಡುತ್ತಿದ್ದಾರೆ. ಹಾಗಾದರೆ, ಹರಿಪ್ರಿಯಾ ಹಾಗೂ ಪ್ರಜ್ವಲ್ ಯಾವುದಾದರೂ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರಾ? ಇಲ್ಲ. ಇಬ್ಬರೂ ರಿಯಾಲಿಟಿ ಶೋ ಒಂದರ ಜಡ್ಜ್ ಆಗುತ್ತಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ಸಾಕಷ್ಟು ಖುಷಿಯಾಗಿದ್ದಾರೆ.
ನಟಿ ಹರಿಪ್ರಿಯಾ ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾರೆ. ಅವರ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಕೊವಿಡ್ ಎರಡನೇ ಅಲೆ ಕಾರಣದಿಂದ ಕೆಲ ಸಿನಿಮಾ ಕೆಲಸಗಳು ವಿಳಂಬವಾಗಿವೆ. ಈಗ ಆ ಕೆಲಸಗಳನ್ನು ಹರಿಪ್ರಿಯಾ ಪೂರ್ಣಗೊಳಿಸುತ್ತಿದ್ದಾರೆ. ಈ ಮಧ್ಯೆ ಅವರು ರಿಯಾಲಿಟಿ ಶೋಗೆ ಜಡ್ಜ್ ಆಗುವುದಕ್ಕೂ ಒಪ್ಪಿದ್ದಾರೆ.
‘ಡ್ಯಾನ್ಸ್ ಡ್ಯಾನ್ಸ್’ ಹೆಸರಿನ ಹೊಸ ರಿಯಾಲಿಟಿ ಶೋ ಬರುತ್ತಿದೆ. ಈ ಶೋಗೆ ಹರಿಪ್ರಿಯಾ ಹಾಗೂ ಪ್ರಜ್ವಲ್ ಜಡ್ಜ್ ಆಗಲಿದ್ದಾರೆ. ಡ್ಯಾನ್ಸ್ ಕೊರಿಯೋಗ್ರಫಿ ಹಾಗೂ ನಿರ್ದೇಶನದ ಮೂಲಕ ಹೆಸರು ಮಾಡಿರುವ ಎ. ಹರ್ಷ ಕೂಡ ಈ ಶೋನ ಜಡ್ಜ್ ಸ್ಥಾನ ಅಲಂಕರಿಸಿದ್ದಾರೆ. ‘ಕನ್ನಡ ಬಿಗ್ ಬಾಸ್ ಸೀಸನ್ 7’ ವಿನ್ನರ್ ಶೈನ್ ಶೆಟ್ಟಿ ಈ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ.
ಅಂದಹಾಗೆ, ಹರಿಪ್ರಿಯಾ ಅವರಿಗೆ ಈ ಮೊದಲು ಕೂಡ ರಿಯಾಲಿಟಿ ಶೋಗಳಿಂದ ಸಾಕಷ್ಟು ಆಫರ್ಗಳು ಬಂದಿದ್ದವು. ಆದರೆ, ಇದನ್ನು ಅವರು ತಿರಸ್ಕರಿಸಿದ್ದರು. ಈಗ ಅವರಿಗೆ ‘ಡ್ಯಾನ್ಸ್ ಡ್ಯಾನ್ಸ್’ ಶೋ ಕಾನ್ಸೆಪ್ಟ್ ಇಷ್ಟವಾಗಿದೆ. ಈ ಕಾರಣಕ್ಕೆ ಈ ರಿಯಾಲಿಟಿ ಶೋನ ಭಾಗವಾಗೋದಕ್ಕೆ ಅವರು ಒಪ್ಪಿಕೊಂಡಿದ್ದಾರೆ.
ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಅಮೃತಮತಿ’ ಚಿತ್ರದಲ್ಲಿ ಹರಿಪ್ರಿಯಾ ನಟಿಸಿದ್ದಾರೆ. ಈ ಸಿನಿಮಾ ‘ಹಾಲಿವುಡ್ ಅಂತರಾಷ್ಟ್ರೀಯ ಗೋಲ್ಡನ್ ಏಜ್ ಚಿತ್ರೋತ್ಸವ’ದಲ್ಲಿ ಪ್ರದರ್ಶನ ಕಂಡಿತ್ತು. ಹರಿಪ್ರಿಯಾಗೆ ಶ್ರೇಷ್ಠನಟಿ ಪ್ರಶಸ್ತಿ ಸಿಕ್ಕಿತ್ತು. ‘ಅಮೃತಮತಿ’ ಚಿತ್ರ ಈ ಮೊದಲು ‘ಅಟ್ಲಾಂಟ ಅಂತರಾಷ್ಟ್ರೀಯ ಚಿತ್ರೋತ್ಸವ’ದಲ್ಲಿ ಶ್ರೇಷ್ಠ ವಿದೇಶಿ ಭಾಷೆಯ ಚಿತ್ರವೆಂಬ ಪ್ರಶಸ್ತಿ ಗಳಿಸಿತ್ತು. ಲಾಸ್ ಏಂಜಲೀಸ್ ಸನ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಶ್ರೇಷ್ಠ ಚಿತ್ರ ಮತ್ತು ಬರಗೂರರಿಗೆ ಶ್ರೇಷ್ಠ ಚಿತ್ರಕತೆ ಪ್ರಶಸ್ತಿ ಲಭಿಸಿತ್ತು.
ಇದನ್ನೂ ಓದಿ: Hariprriya: ‘ಅಮೃತಮತಿ’ ಚಿತ್ರದ ಪಾತ್ರಕ್ಕಾಗಿ ನಟಿ ಹರಿಪ್ರಿಯಾಗೆ ‘ಹಾಲಿವುಡ್’ ಪ್ರಶಸ್ತಿ
Published On - 3:10 pm, Wed, 4 August 21