ಬಿಗ್ ಬಾಸ್ ಮನೆಯಲ್ಲಿ ಯಾರೂ ಊಹಿಸಿರದ ಘಟನೆ; ವೀಕ್ಷಕರಿಗೆ ಇದು ನಿಜಕ್ಕೂ ಅಚ್ಚರಿ
ಬಿಗ್ ಬಾಸ್ ಆರಂಭವಾದಾಗ ಮಂಜು ಪಾವಗಡ ಹಾಗೂ ಪ್ರಶಾಂತ್ ಸಂಬರಗಿ ಕ್ಲೋಸ್ ಆಗಿದ್ದರು. ದಿವ್ಯಾ ಸುರೇಶ್ ಜತೆಗಿನ ಪ್ರೀತಿ ನಾಟಕದಲ್ಲಿ ಪ್ರಶಾಂತ್ ಅವರು ಮಂಜುಗೆ ಮಾವ ಹಾಗೂ ದಿವ್ಯಾ ಸುರೇಶ್ಗೆ ಅಣ್ಣನಾಗಿದ್ದರು.
ಕನ್ನಡ ಬಿಗ್ ಬಾಸ್ ಸೀಸನ್ 8ರ ಫಿನಾಲೆಗೆ ಕೆಲವೇ ದಿನಗಳು ಬಾಕಿ ಇವೆ. ಅದಕ್ಕೂ ಮೊದಲು ವೀಕ್ಷಕರಿಗೆ ಸಾಕಷ್ಟು ಅಚ್ಚರಿಗಳು ಸಿಗುತ್ತಿವೆ. ಆಗಸ್ಟ್ 4ರ ಎಪಿಸೋಡ್ನಲ್ಲಿ ದಿವ್ಯಾ ಸುರೇಶ್ ಎಲಿಮಿನೇಟ್ ಆದರು. ಕೊನೆಯ ಬಾರಿಗೆ ಸ್ಪರ್ಧಿಗಳಿಗೆ ಬಾಯ್ ಹೇಳಲೂ ಅವರಿಂದ ಸಾಧ್ಯವಾಗಿಲ್ಲ. ಈಗ ಆಗಸ್ಟ್ 5ರ ಎಪಿಸೋಡ್ನಲ್ಲಿ ವೀಕ್ಷಕರಿಗೆ ಸರ್ಪ್ರೈಸ್ ಸಿಗುತ್ತಿದೆ. ಕಲರ್ಸ್ ಕನ್ನಡ ವಾಹಿನಿ ಪ್ರೋಮೋ ಒಂದನ್ನು ಹಂಚಿಕೊಂಡಿದ್ದು, ಇದು ಅಭಿಮಾನಿಗಳಿಗೆ ಅಚ್ಚರಿ ತಂದಿದೆ.
ಬಿಗ್ ಬಾಸ್ ಆರಂಭವಾದಾಗ ಮಂಜು ಪಾವಗಡ ಹಾಗೂ ಪ್ರಶಾಂತ್ ಸಂಬರಗಿ ಕ್ಲೋಸ್ ಆಗಿದ್ದರು. ದಿವ್ಯಾ ಸುರೇಶ್ ಜತೆಗಿನ ಪ್ರೀತಿ ನಾಟಕದಲ್ಲಿ ಪ್ರಶಾಂತ್ ಅವರು ಮಂಜುಗೆ ಮಾವ ಹಾಗೂ ದಿವ್ಯಾ ಸುರೇಶ್ಗೆ ಅಣ್ಣನಾಗಿದ್ದರು. ಆದರೆ, ಚಕ್ರವರ್ತಿ ಚಂದ್ರಚೂಡ್ ಬಂದ ನಂತರದಲ್ಲಿ ಪ್ರಶಾಂತ್ ಬದಲಾದರು. ಬಿಗ್ ಬಾಸ್ ಹೊರಗೆ ಇದನ್ನು ಬೇರೆ ರೀತಿ ಅರ್ಥೈಸುತ್ತಿದ್ದಾರೆ ಎಂಬುದನ್ನು ಪ್ರಶಾಂತ್ ಕಿವಿಯಲ್ಲಿ ತುಂಬಿದ್ದರು ಚಕ್ರವರ್ತಿ. ಇದಾದ ನಂತರದಲ್ಲಿ ಮಂಜು ಬಗ್ಗೆ ದ್ವೇಷದ ಭಾವನೆಯನ್ನು ಪ್ರಶಾಂತ್ ಬೆಳೆಸಿಕೊಂಡರು. ಮಂಜು ಹೇಳಿದ್ದನ್ನು ವಿರೋಧಿಸುತ್ತಲೇ ಬಂದರು.
ಆದರೆ, ಕೊನೆಯ ವಾರದಲ್ಲಿ ಪ್ರಶಾಂತ್ ಬದಲಾಗಿದ್ದಾರೆ. ಅವರ ನಡೆ ಮನೆಯವರಿಗೆ ಅಚ್ಚರಿ ಮೂಡಿಸಿದೆ. ಆಗಸ್ಟ್ 4ರ ಏಪಿಸೋಡ್ನಲ್ಲಿ ಪ್ರಶಾಂತ್ ಬಗ್ಗೆ ಮಂಜು ಮಾತನಾಡಿದ್ದರು. ‘ಪ್ರಶಾಂತ್ ಜತೆ ಆರಂಭದಲ್ಲಿ ಕಳೆದ ದಿನಗಳು ತುಂಬಾನೇ ಖುಷಿ ಕೊಟ್ಟಿದೆ’ ಎಂದು ಮಂಜು ಹೇಳಿಕೊಂಡಿದ್ದರು.
ಆಗಸ್ಟ್ 5ರಂದು ಪ್ರೋಮೋ ಒಂದನ್ನು ಬಿಡಲಾಗಿದೆ. ಈ ಪ್ರೋಮೋದಲ್ಲಿ ‘ಮಂಜುಗೆ ಮಸಾಜ್ ಮಾಡ್ಕೊಡ್ತೀನಿ, ಕಾಫಿ ಮಾಡಿ ಕೊಡ್ತೀನಿ. ಮಂಜು ನನ್ನ ಬೆಸ್ಟ್ ಫ್ರೆಂಡ್’ ಎಂದೆಲ್ಲ ಪ್ರಶಾಂತ್ ಹೇಳಿಕೊಂಡಿದ್ದಾರೆ. ಇದನ್ನು ನೋಡಿದ ಮನೆ ಮಂದಿ ಹಾಗೂ ವೀಕ್ಷಕರು ನಿಜಕ್ಕೂ ಅಚ್ಚರಿ ಹೊರ ಹಾಕಿದ್ದಾರೆ. ಇಬ್ಬರ ನಡುವೆ ಇಷ್ಟೊಂದು ಒಳ್ಳೆ ಗೆಳೆತನ ಬೆಳೆದಿರುವ ಬಗ್ಗೆ ಅನೇಕರು ಸಂತಸ ಕೂಡ ಹೊರ ಹಾಕಿದ್ದಾರೆ.
View this post on Instagram
ಇದನ್ನೂ ಓದಿ: Divya Suresh: ಬಿಗ್ ಬಾಸ್ ಸ್ಪರ್ಧಿಗಳಿಗೆ ಮುಖ ತೋರಿಸದೇ ಮನೆಯಿಂದ ಹೊರ ನಡೆದ ದಿವ್ಯಾ ಸುರೇಶ್
ದೊಡ್ಮನೆಯಿಂದ ಹೊರ ಹೋಗುವುದಕ್ಕೂ ಮೊದಲು ದಿವ್ಯಾ ಸುರೇಶ್ ಆಸೆ ಈಡೇರಿಸಿದ ಬಿಗ್ ಬಾಸ್