ಬಿಗ್​ ಬಾಸ್​ನಿಂದ ಎಲಿಮಿನೇಟ್​ ಆದ ಮೇಲೂ ದಿವ್ಯಾಗೆ ಮಂಜು ಮೇಲಿನ ಭಾವನೆ ಬದಲಾಗಿಲ್ಲ; ಇಲ್ಲಿದೆ ವಿಡಿಯೋ ಸಾಕ್ಷಿ

ಬಿಗ್​ ಬಾಸ್​ನಿಂದ ಎಲಿಮಿನೇಟ್​ ಆದ ಮೇಲೂ ದಿವ್ಯಾಗೆ ಮಂಜು ಮೇಲಿನ ಭಾವನೆ ಬದಲಾಗಿಲ್ಲ; ಇಲ್ಲಿದೆ ವಿಡಿಯೋ ಸಾಕ್ಷಿ
ದಿವ್ಯಾ ಸುರೇಶ್ ಮತ್ತು ಮಂಜು ಪಾವಗಡ

ದಿವ್ಯಾ ಸುರೇಶ್​ ಎಲಿಮಿನೇಟ್​ ಆಗಿ ಬಿಗ್​ ಬಾಸ್​ ಮನೆಯಿಂದ ಹೊರಬಂದ ಮೇಲೂ ಮಂಜು ಪಾವಗಡ ಬಗ್ಗೆ ಅವರು ಆತ್ಮೀಯ ಭಾವವನ್ನೇ ಇಟ್ಟುಕೊಂಡಿದ್ದಾರೆ. ಮಂಜು ಬಿಗ್​ ಬಾಸ್​ ಗೆಲ್ಲಲಿ ಎಂಬ ಆಶಯದಿಂದ ಸೋಶಿಯಲ್​ ಮೀಡಿಯಾದಲ್ಲಿ ದಿವ್ಯಾ ಪ್ರಚಾರ ಮಾಡುತ್ತಿದ್ದಾರೆ.

TV9kannada Web Team

| Edited By: Madan Kumar

Aug 05, 2021 | 4:47 PM


ಕೆಲವೇ ದಿನಗಳಲ್ಲಿ ಬಿಗ್​ ಬಾಸ್ (Bigg Boss)​ ಫಿನಾಲೆ ಬರಲಿದೆ. ಕನ್ನಡ ಬಿಗ್​ ಬಾಸ್​ ಸೀಸನ್​ 8ರ ಟ್ರೋಫಿ ಯಾರಿಗೆ ಸಿಗಲಿದೆ ಎಂಬ ಕೌತುಕ ಈಗ ನಿರ್ಮಾಣ ಆಗಿದೆ. ಮಂಜು ಪಾವಗಡ, ಅರವಿಂದ್​ ಕೆ.ಪಿ. ದಿವ್ಯಾ ಉರುಡುಗ, ಪ್ರಶಾಂತ್​ ಸಂಬರಗಿ ಮತ್ತು ವೈಷ್ಣವಿ ಗೌಡ ಅವರು ಫಿನಾಲೆಗೆ ತಲುಪಿದ್ದಾರೆ. ಬಿಗ್​ ಬಾಸ್​ ಮನೆಯಿಂದ ಕೊನೆಯದಾಗಿ ಎಲಿಮಿನೇಟ್​ ಆದ ದಿವ್ಯಾ ಸುರೇಶ್​ (Divya Suresh) ಅವರು ಮಂಜು ಪಾವಗಡ (Manju Pavagada) ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ದಯವಿಟ್ಟು ಮಂಜುಗೆ ವೋಟ್​ ಮಾಡಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

‘ನನ್ನ ಮಂಜು ಗ್ರ್ಯಾಂಡ್​ ಫಿನಾಲೆ ತಲುಪಿದ್ದಾರೆ. ಅವರು ನನ್ನ ಕ್ಲೋಸ್​ ಫ್ರೆಂಡ್​. ಮೊದಲಿನಿಂದಲೂ ಮಂಜು ಎಷ್ಟು ಮನರಂಜನೆ ನೀಡುತ್ತಿದ್ದರು ಎಂಬುದು ನಿಮಗೆಲ್ಲರಿಗೂ ಗೊತ್ತು. ಎಲ್ಲರನ್ನೂ ನಗಿಸಿದ್ದಾರೆ. ಟಾಸ್ಕ್​ಗಳನ್ನೂ ಚೆನ್ನಾಗಿ ಮಾಡಿದ್ದಾರೆ. ಅವರು ಬಿಗ್​ ಬಾಸ್​ ಗೆಲ್ಲಬೇಕು ಎಂದರೆ ನಿಮ್ಮೆಲ್ಲರ ವೋಟ್​ ತುಂಬಾ ಮುಖ್ಯವಾಗುತ್ತದೆ’ ಎಂದು ದಿವ್ಯಾ ಸುರೇಶ್​ ಹೇಳಿದ್ದಾರೆ.

ಬಿಗ್​ ಬಾಸ್​ ಮನೆಯೊಳಗೆ ಇದ್ದಾಗ ದಿವ್ಯಾ ಸುರೇಶ್​ ಮತ್ತು ಮಂಜು ನಡುವೆ ಬಹಳ ಆತ್ಮೀಯತೆ ಇತ್ತು. ಮೊದಲ ಇನ್ನಿಂಗ್ಸ್​ನಲ್ಲಿ ಇಬ್ಬರೂ ಸದಾ ಕಾಲ ಜೊತೆಯಾಗಿಯೇ ಇರುತ್ತಿದ್ದರು. ಆದರೆ ಎರಡನೇ ಇನ್ನಿಂಗ್ಸ್​ನಲ್ಲಿ ಯಾಕೋ ಇಬ್ಬರ ನಡುವೆ ಸಣ್ಣ ಅಂತರ ಸೃಷ್ಟಿ ಆಗಿತ್ತು. ಹಾಗಿದ್ದರೂ ಕೊನೇ ಸಮಯದಲ್ಲಿ ಮಂಜು ಬಗ್ಗೆ ಮನಸಾರೆ ಮೆಚ್ಚುಗೆಯ ಮಾತುಗಳನ್ನು ದಿವ್ಯಾ ಸುರೇಶ್​ ಹೇಳಿದ್ದರು. ಬಿಗ್​ ಬಾಸ್​ ಬಳಿ ಮನವಿ ಮಾಡಿಕೊಂಡು ವಿಶೇಷ ಕೇಕ್​ ತರಿಸಿ, ಮಂಜು ಜೊತೆ ಅವರು ಫ್ರೆಂಡ್​ಶಿಪ್​ ಡೇ ಸೆಲೆಬ್ರೇಟ್​ ಮಾಡಿದ್ದರು.

ದಿವ್ಯಾ ಸುರೇಶ್​ ಎಲಿಮಿನೇಟ್​ ಆಗಿ ಬಿಗ್​ ಬಾಸ್​ ಮನೆಯಿಂದ ಹೊರಬಂದ ಮೇಲೂ ಮಂಜು ಬಗ್ಗೆ ಅವರು ಎಂದಿನ ಆತ್ಮೀಯ ಭಾವವನ್ನೇ ಇಟ್ಟುಕೊಂಡಿದ್ದಾರೆ. ಮಂಜು ಬಿಗ್​ ಬಾಸ್​ ಗೆಲ್ಲಲಿ ಎಂಬ ಆಶಯದಿಂದ ಸೋಶಿಯಲ್​ ಮೀಡಿಯಾದಲ್ಲಿ ದಿವ್ಯಾ ಪ್ರಚಾರ ಮಾಡುತ್ತಿದ್ದಾರೆ. ‘ಪ್ಲೀಸ್​ ಎಲ್ಲರೂ ವೋಟ್​ ಮಾಡಿ. ನೀವು ಒಂದು ದಿನಕ್ಕೆ 99 ವೋಟ್​ ಹಾಕಬಹುದು. ಬಿಗ್​ ಬಾಸ್​ ಗೆಲ್ಲಲು ಅವರೇ ಹೆಚ್ಚು ಸಮರ್ಥ ವ್ಯಕ್ತಿ ಅಂತ ನನಗೆ ಅನಿಸುತ್ತದೆ’ ಎಂದು ದಿವ್ಯಾ ಹೇಳಿದ್ದಾರೆ. ‘ಮಂಜ ಐ ಮಿಸ್​ ಯೂ ಸೋ ಮಚ್​. ಗೆದ್ದು ಬಾ. ನೀನು ಗೆಲ್ಲುತ್ತೀಯ ಅಂತ ನನಗೆ ಕಾನ್ಫಿಡೆನ್ಸ್​ ಇದೆ’ ಆತ್ಮೀಯ ಗೆಳಯನಿಗೆ ದಿವ್ಯಾ ಹಾರೈಸಿದ್ದಾರೆ.

ಇದನ್ನೂ ಓದಿ:

ದೊಡ್ಮನೆಯಿಂದ ಹೊರ ಹೋಗುವುದಕ್ಕೂ ಮೊದಲು ದಿವ್ಯಾ ಸುರೇಶ್​ ಆಸೆ ಈಡೇರಿಸಿದ ಬಿಗ್​ ಬಾಸ್

‘ಅರವಿಂದ್ ಬೈಕ್​ ಮಿಸ್​ ಹೊಡೆಯುತ್ತಿದೆ, ಫಿನಾಲೆ ಗೆಲ್ಲೋದು ಮಂಜು ಪಾವಗಡ’

Follow us on

Most Read Stories

Click on your DTH Provider to Add TV9 Kannada