ಮಂಜು ಜತೆ ಕುಳಿತುಕೊಳ್ಳೋಕೆ ಯೋಚನೆ ಮಾಡುತ್ತಿದ್ದೇನೆ; ಕಣ್ಣೀರು ಹಾಕಿದ ದಿವ್ಯಾ ಸುರೇಶ್​

ಬಿಗ್​ ಬಾಸ್​ ಮನೆಯಲ್ಲಿ ಬೇರೆ ಬೇರೆ ಟಾಸ್ಕ್​ ನೀಡಲಾಗುತ್ತಿದೆ. ಪ್ರತಿ ಟಾಸ್ಕ್​ ಬರುವುದಕ್ಕೂ ಮೊದಲು ಹಾಡೊಂದು ಬರುತ್ತದೆ. ಈ ಹಾಡು ಬಂದಾಗ ಕ್ಯಾಪ್ಟನ್​ಗಳು ಕನ್​ಫೆಷನ್​ ರೂಮ್​ಗೆ ಹೋಗಬೇಕು.

ಮಂಜು ಜತೆ ಕುಳಿತುಕೊಳ್ಳೋಕೆ ಯೋಚನೆ ಮಾಡುತ್ತಿದ್ದೇನೆ; ಕಣ್ಣೀರು ಹಾಕಿದ ದಿವ್ಯಾ ಸುರೇಶ್​
ದಿವ್ಯಾ ಸುರೇಶ್​
Follow us
TV9 Web
| Updated By: Vinay Bhat

Updated on: Jul 15, 2021 | 8:42 AM

‘ಕನ್ನಡ ಬಿಗ್​ ಬಾಸ್​ ಸೀಸನ್ 8’ ಎರಡನೇ ಇನ್ನಿಂಗ್ಸ್​ನಲ್ಲಿ ದಿವ್ಯಾ ಸುರೇಶ್​ ಹಾಗೂ ಮಂಜು ಪಾವಗಡ ಮೊದಲಿನಂತಿಲ್ಲ. ಇಬ್ಬರೂ ಎಷ್ಟಕ್ಕೆಬೇಕೋ ಅಷ್ಟಕ್ಕೆ ಮಾತ್ರ ಮಾತನಾಡಿಕೊಳ್ಳುತ್ತಿದ್ದಾರೆ. ಶುಭಾ ಪೂಂಜಾಗೆ ಮಂಜು ಪಾವಗಡ ಕ್ಲೋಸ್​ ಆಗಿದ್ದಾರೆ. ಈ ಕಾರಣಕ್ಕೆ ಶಮಂತ್​ ಬ್ರೋ ಗೌಡ ಜತೆ ದಿವ್ಯಾ ಫ್ರೆಂಡ್​ಶಿಪ್​ ಬೆಳೆಸಿಕೊಂಡಿದ್ದಾರೆ. ಈ ವಿಚಾರ ಮಂಜುಗೆ ಹೊಟ್ಟೆ ಉರಿ ತರಿಸುತ್ತಿದೆ. ಇದನ್ನು ಅವರು ಒಪನ್​ ಆಗಿ ತೋರಿಸುತ್ತಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಬೇರೆಬೇರೆ ಟಾಸ್ಕ್​ ನೀಡಲಾಗುತ್ತಿದೆ. ಪ್ರತಿ ಟಾಸ್ಕ್​ ಬರುವುದಕ್ಕೂ ಮೊದಲು ಮ್ಯೂಸಿಕ್​ ಒಂದು ಬರುತ್ತದೆ. ಈ ಹಾಡು ಬಂದಾಗ ಎರಡು ತಂಡದ ಕ್ಯಾಪ್ಟನ್​ಗಳು ಕನ್​ಫೆಷನ್​ ರೂಮ್​ಗೆ ಹೋಗಬೇಕು. ಬಿಗ್​ ಬಾಸ್​ ಮ್ಯೂಸಿಕ್​ ಹಾಕಿದರು. ದಿವ್ಯಾ ಇದಕ್ಕೆ ಡಾನ್ಸ್​ ಮಾಡುತ್ತಾ ಬಂದರು. ಆಗ ದಿವ್ಯಾಗೆ ಮಂಜು ಬೈದರು.

ಇದಕ್ಕೆ ದಿವ್ಯಾ ಬೇಸರ ಮಾಡಿಕೊಂಡರು. ಪ್ರಿಯಾಂಕಾ ತಿಮ್ಮೇಶ್​ ಬಳಿ ತೆರಳಿದ ದಿವ್ಯಾ ಈ ಬಗ್ಗೆ ಅಳಲು ತೋಡಿಕೊಂಡರು. ‘ಮಂಜು ಅಷ್ಟು ಸಣ್ಣ ವಿಚಾರಕ್ಕೆ ಯಾಕೆ ಕೂಗಾಡಬೇಕಿತ್ತು? ಅವನಿಗೆ ಮೊದಲಿನ ರೀತಿ ಇರಕಾಗಲ್ಲ ಅಂದ್ರೆ ನಂಗು ಇರಕಾಗಲ್ಲ. ಸುದೀಪ್​ ಅವರು ಚೆನ್ನಾಗಿ ಆಡ್ತಿದೀಯಾ ಅಂತ ನಂಗೆ ಹೇಳಿದ್ರು. ಅದನ್ನು ಕಾಪಾಡಿಕೊಳ್ಳಬೇಕು. ನನ್ನ ಮೇಲೆ ರೇಗಾಡುವ ಅವಶ್ಯಕತೆ ಇದೆಯಾ? ಶುಭಾ ಜತೆ ಮಂಜು ಕ್ಲೋಸ್​ ಆಗಿದಾನೆ. ಮಂಜು ಬೀನ್​ ಬ್ಯಾಗ್​ ಮೇಲೆ ಕೂತಾಗ ಅವನ ಜತೆ ಕೂರೋಕು ಯೋಚನೆ ಮಾಡ್ತೀನಿ’ ಎಂದು ದಿವ್ಯಾ ಬೇಸರ ಹೊರ ಹಾಕಿದರು.

ಟಾಸ್ಕ್​ ಪೂರ್ಣಗೊಂಡ ನಂತರದಲ್ಲಿ ಮಂಜು ಈ ಬಗ್ಗೆ ಪ್ರಶ್ನೆ ಮಾಡಿದರು. ನನ್ನಿಂದ ಏನಾದರೂ ಬೇಸರವಾಗಿದೆಯೇ ಎಂದು ಕೇಳಿದರು. ‘ಎಲ್ಲರ ಎದುರು ಆ ರೀತಿ ಕೂಗಾಡಬೇಡ, ಬಯ್ಯಬೇಡ’ ಎಂದು ಕೋರಿಕೊಂಡರು.

ಆರಂಭದಲ್ಲಿ ಶಮಂತ್ ಅವರನ್ನು ಕಂಡರೆ ದಿವ್ಯಾ ಸುರೇಶ್ ಮಾರು ದೂರ ಹೋಗಿ ನಿಲ್ಲುತ್ತಿದ್ದರು. ಈಗ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ನಲ್ಲಿ ಶಮಂತ್ ಜತೆ ಒಳ್ಳೆಯ ಗೆಳೆತನ ಹೊಂದಿದ್ದಾರೆ ದಿವ್ಯಾ. ಈ ವಾರ ‘ನಿಂಗ್ ಐತೆ’ ತಂಡದಲ್ಲಿ ಶಮಂತ್ ಹಾಗೂ ದಿವ್ಯಾ ಸುರೇಶ್ ಇಬ್ಬರೂ ಇದ್ದಾರೆ. ಈ ತಂಡಕ್ಕೆ ಬಿಗ್ ಬಾಸ್ ಚಾಲೆಂಜ್ ಒಂದನ್ನು ನೀಡಿದ್ದರು. ಈ ಟಾಸ್ಕ್​ನ ಅನುಸಾರ ನಿಂಗ್ ಐತೆ ತಂಡದ ಇಬ್ಬರು 10 ಜತೆ ಬಟ್ಟೆಯಲ್ಲಿ ಮಿಂಚಬೇಕು. ಈ ಟಾಸ್ಕ್​ಗೆ ದಿವ್ಯಾ ಹಾಗೂ ಶಮಂತ್ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಮ್ಯಾಚಿಂಗ್ ಡ್ರೆಸ್, ಸಮ್ಮರ್ ಕಪಲ್ ಲುಕ್ ಸೇರಿ ನಾನಾ ವಿಧವಾದ ಲುಕ್​​ನಲ್ಲಿ ಇವರು ಮಿಂಚಿದ್ದಾರೆ. ಮಂಜು ಉರಿದಕೊಳ್ಳೋಕೆ ಇದು ಕಾರಣ.

ಇದನ್ನೂ ಓದಿ: ದಿವ್ಯಾ ಉರುಡುಗ ಮಾಡಿದ ತಪ್ಪಿಗೆ ಮನೆ ಮಂದಿಗೆ ಶಿಕ್ಷೆ ನೀಡಿದ ಬಿಗ್​ ಬಾಸ್​

ಬಿಗ್ ಬಾಸ್ ಮನೆಯಲ್ಲಿ ಅವಘಡ; ದಿವ್ಯಾ ಉರುಡುಗ ಹೊಡೆದ ಫೋರ್ಸ್​ಗೆ ಗಾಜು ನುಚ್ಚುನೂರು, ಕೈಯಲ್ಲಿ ರಕ್ತ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್