ವಿದೇಶದಲ್ಲಿ ಅಡುಗೆ ಮಾಡಿ 1.8 ಕೋಟಿ ರೂಪಾಯಿ ಗೆದ್ದ ಭಾರತೀಯ ಯುವಕ

TV9 Digital Desk

| Edited By: Rajesh Duggumane

Updated on: Jul 14, 2021 | 9:40 PM

ಈ ರಿಯಾಲಿಟಿ ಶೋನ ಫಿನಾಲೆಯಲ್ಲಿ ಆಸ್ಟ್ರೆಲಿಯಾದ ಪೆಟೆ ಹಾಗೂ ಬಾಂಗ್ಲಾದೇಶದ ಕಿಶ್ವರ್​ ಚೌಧರಿ ಕಡೆಯಿಂದ ಭಾರೀ ಕಾಂಪಿಟೇಷನ್​ ಇತ್ತು. ಅಂತಿಮವಾಗಿ ಜಸ್ಟಿನ್​ ವಿಜೇತರಾಗಿದ್ದಾರೆ.

ವಿದೇಶದಲ್ಲಿ ಅಡುಗೆ ಮಾಡಿ 1.8 ಕೋಟಿ ರೂಪಾಯಿ ಗೆದ್ದ ಭಾರತೀಯ ಯುವಕ
ವಿದೇಶದಲ್ಲಿ ಅಡುಗೆ ಮಾಡಿ 1.8 ಕೋಟಿ ರೂಪಾಯಿ ಗೆದ್ದ ಭಾರತೀಯ ಯುವಕ
Follow us

ರಿಯಾಲಿಟಿ ಶೋಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿವೆ. ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ರಿಯಾಲಿಟಿ ಶೋಗಳಿಗೆ ದೊಡ್ಡಮಟ್ಟದ ಬೇಡಿಕೆ ಇದೆ. ಈಗ ಭಾರತ ಮೂಲದ ಜಸ್ಟಿನ್​ ನಾರಾಯಣ್​ ಎನ್ನುವ 27 ವರ್ಷದ ಯುವಕ ‘ಮಾಸ್ಟರ್​ಚೆಫ್​ ಆಸ್ಟ್ರೇಲಿಯಾ ಸೀಸನ್​ 13’ರ ವಿಜೇತರಾಗಿದ್ದಾರೆ. ಈ ಮೂಲಕ 1.86 ಕೋಟಿ ರೂಪಾಯಿ (2.5 ಲಕ್ಷ ಡಾಲರ್​) ಪ್ರಶಸ್ತಿ ಹಣ ಗೆದ್ದಿದ್ದಾರೆ.

ಈ ರಿಯಾಲಿಟಿ ಶೋನ ಫಿನಾಲೆಯಲ್ಲಿ ಆಸ್ಟ್ರೆಲಿಯಾದ ಪೆಟೆ ಹಾಗೂ ಬಾಂಗ್ಲಾದೇಶದ ಕಿಶ್ವರ್​ ಚೌಧರಿ ಕಡೆಯಿಂದ ಭಾರೀ ಕಾಂಪಿಟೇಷನ್​ ಇತ್ತು. ಅಂತಿಮವಾಗಿ ಜಸ್ಟಿನ್​ ವಿಜೇತರಾಗಿದ್ದಾರೆ. ಮೊದಲ ರನ್ನರ್​ ಅಪ್​ ಆಗಿ ಪೆಟೆ ಆಯ್ಕೆಯಾದರೆ, ಎರಡನೇ ರನ್ನರ್​ ಅಪ್​ ಸ್ಥಾನಕ್ಕೆ ಕಿಶ್ವರ್​ ಖುಷಿಪಟ್ಟಿದ್ದಾರೆ.

ಮಾಸ್ಟರ್​ಚೆಫ್​ ಆಸ್ಟ್ರೇಲಿಯಾ ರಿಯಾಲಿಟಿಶೋನಲ್ಲಿ ಸಾಕಷ್ಟು ಏರಳಿತಗಳನ್ನು ಜಸ್ಟಿನ್​ ಕಂಡಿದ್ದರು. ಆದರೆ, ಇತ್ತೀಚೆಗೆ ಅವರ ಪರ್ಫಾರ್ಮೆನ್ಸ್​ ಉತ್ತಮವಾಗಿತ್ತು. ಅವರು ತಮ್ಮ ಅದ್ಭುತ ಅಡುಗೆ ಮೂಲಕ ಜಡ್ಜ್​ಗಳನ್ನು ಸೆಳೆದುಕೊಂಡಿದ್ದರು. ಅವರು ಮಾಡುತ್ತಿದ್ದ ಅಡುಗೆ ಜಡ್ಜ್​ಗಳಿಗೆ ಇಷ್ಟವಾಗಿತ್ತು. ಹೀಗಾಗಿ, ಅಂತಿಮವಾಗಿ ಅವರೇ ವಿಜೇತರಾದರು.

ಜಸ್ಟಿಸ್​ ನಾರಾಯಣ್​ ಪಶ್ಚಿಮ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಜಸ್ಟಿನ್​ ತಮ್ಮ 13ನೇ ವಯಸ್ಸಿಗೆ ಅಡುಗೆ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರು. ಭಾರತೀಯ ಶೈಲಿಯ ಅಡುಗೆ ಹಾಗೂ ಪಾಶ್ಚಿಮಾತ್ಯ ಅಡುಗೆ ಎರಡರಲ್ಲೂ ಜಸ್ಟಿನ್​ ಪಳಗಿದ್ದಾರೆ. ಇಂಡಿಯನ್​ ಚಿಕನ್​ ಟ್ಯಾಕೋಸ್​, ಇಂಡಿಯನ್​ ಚಿಕನ್​ ಕರ್ರಿ ಸೇರಿ ಸಾಕಷ್ಟು ವಿಧದ ಅಡುಗೆಯನ್ನು ಜಸ್ಟಿನ್​ ರಿಯಾಲಿಟಿ ಶೋನಲ್ಲಿ ಮಾಡಿದ್ದರು.

2017ರಲ್ಲಿ ಜಸ್ಟಿನ್​ ಭಾರತಕ್ಕೆ ಬಂದಿದ್ದರು. ಇಲ್ಲಿಯ ಸಂಸ್ಕೃತಿ, ಇತಿಹಾಸ, ಜನರು ಹಾಗೂ ಆಹಾರ ಸಂಸ್ಕೃತಿ ಅವರ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು. ಆಸ್ಟ್ರೇಲಿಯಾದಲ್ಲಿ ಫುಡ್​ ಟ್ರಕ್​ ಆರಂಭಿಸುವ ಆಲೋಚನೆಯನ್ನು ಜಸ್ಟಿನ್​ ಹೊಂದಿದ್ದಾರೆ. ಇದರಲ್ಲಿ ಭಾರತೀಯ ಶೈಲಿಯ ಅಡುಗೆಯೂ ಇರಲಿದೆ ಅನ್ನೋದು ವಿಶೇಷ.

ಇದನ್ನೂ ಓದಿ: ಹಿರಿಯ ನಟಿ ವಿರುದ್ಧ ಗಂಭೀರ ಆರೋಪ ಮಾಡಿದ ಬಿಗ್​ ಬಾಸ್​ ಸ್ಪರ್ಧಿ; ರಿಯಾಲಿಟಿ ಶೋದಿಂದ ಹೊರ ಬರುವ ನಿರ್ಧಾರ

ಕರಾವಳಿ ಸ್ಪೆಷಲ್ ಪತ್ರೊಡೆ; ಹೊಸ ತರಹದ ಅಡುಗೆಯನ್ನೊಮ್ಮೆ ಮಾಡಿ ಸವಿಯಿರಿ

ತಾಜಾ ಸುದ್ದಿ

Related Stories

Click on your DTH Provider to Add TV9 Kannada