ದಿವ್ಯಾ ಸುರೇಶ್​ ಮೇಲೆ ನನಗೆ ನಂಬಿಕೆ ಇಲ್ಲ; ಎಲ್ಲರ ಎದುರು ನೇರವಾಗಿ ಹೇಳಿದ ಮಂಜು ಪಾವಗಡ

ಬಿಗ್​ ಬಾಸ್​ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್​ಗೆ ನಾನಾ ನೀನಾ ಹೆಸರಿನ ಟಾಸ್ಕ್​ ನೀಡಲಾಗಿದೆ. ಈ ಟಾಸ್ಕ್​ ಅಡಿಯಲ್ಲಿ ಸಾಕಷ್ಟು ಟಾಸ್ಕ್​ಗಳನ್ನು ನೀಡಲಾಗುತ್ತಿದೆ. ಅದೇ ರೀತಿ ಬಿಗ್​ ಬಾಸ್​ ಮನೆಯಲ್ಲಿ ಟಾಸ್ಕ್​ ಒಂದನ್ನು ನೀಡಲಾಗಿತ್ತು.

ದಿವ್ಯಾ ಸುರೇಶ್​ ಮೇಲೆ ನನಗೆ ನಂಬಿಕೆ ಇಲ್ಲ; ಎಲ್ಲರ ಎದುರು ನೇರವಾಗಿ ಹೇಳಿದ ಮಂಜು ಪಾವಗಡ
ಮಂಜು ಪಾವಗಡ - ದಿವ್ಯಾ ಸುರೇಶ್​

ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್ ದಿನಕಳೆದಂತೆ ದೂರವಾಗುತ್ತಿದ್ದಾರೆ. ದಿವ್ಯಾ ಸುರೇಶ್​ ಅವರಿಂದ ಮಂಜು ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಈಗ ದಿವ್ಯಾ ವಿರುದ್ಧ ನೇರವಾಗಿ ಅಸಮಾಧಾನ ಹೊರ ಹಾಕಿದ್ದಾರೆ ಮಂಜು. ದಿವ್ಯಾ ಬಗ್ಗೆ ನಂಗೆ ನಂಬಿಕೆಯೇ ಇಲ್ಲ ಎಂದಿದ್ದಾರೆ ಮಂಜು.

ಬಿಗ್​ ಬಾಸ್​ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್​ಗೆ ನಾನಾ ನೀನಾ ಹೆಸರಿನ ಟಾಸ್ಕ್​ ನೀಡಲಾಗಿದೆ. ಈ ಟಾಸ್ಕ್​ ಅಡಿಯಲ್ಲಿ ಸಾಕಷ್ಟು ಟಾಸ್ಕ್​ಗಳನ್ನು ನೀಡಲಾಗುತ್ತಿದೆ. ಅದೇ ರೀತಿ ಬಿಗ್​ ಬಾಸ್​ ಮನೆಯಲ್ಲಿ ಟಾಸ್ಕ್​ ಒಂದನ್ನು ನೀಡಲಾಗಿತ್ತು. 8 ಸ್ಪರ್ಧಿಗಳ ಪೈಕಿ ಐದು ಸ್ಪರ್ಧಿಗಳು ಮಾತ್ರ ಆಡಿಸಬೇಕು ಎಂದು ಬಿಗ್​ ಬಾಸ್​ ನಿಯಮ ತಂದರು. ಆದರೆ, ಮನೆಯ ಎಲ್ಲಾ ಸ್ಪರ್ಧಿಗಳು ನಾವು ಆಡುತ್ತೇವೆ ಎಂದರು. ಇದು ದಿವ್ಯಾ ಸುರೇಶ್​ಗೆ ದೊಡ್ಡ ತಲೆನೋವಾಗಿದೆ.

ನಂತರ ಇದಕ್ಕೆ ಪರಿಹಾರ ನೀಡೋಕೆ ಮನೆಯವರಿಗೆ ಕೇಳಲಾಯಿತು. ಕೆಲವರು ಹೆಡ್​ ಆ್ಯಂಡ್​ ಟೇಲ್ ಆಡಿಸೋಣ ಎನ್ನುವ ಆಯ್ಕೆಯನ್ನು ನೀಡಿದರು. ಆದರೆ, ಮನೆಯ ಕೆಲ ಸದಸ್ಯರು ಇದಕ್ಕೆ ಒಪ್ಪಿಲ್ಲ. ಈ ವೇಳೆ, ಪ್ರಶಾಂತ್​, ‘ನಾನು ಕ್ಯಾಪ್ಟನ್​ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿದ್ದೇನೆ. ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಅದು ನ್ಯಾಯ ಸಮ್ಮತವಾಗಿರುತ್ತದೆ. ಇದನ್ನು ನಾನು ಒಪ್ಪಿಕೊಳ್ಳುತ್ತೇನೆ’ ಎಂದರು.

ಇದಕ್ಕೆ ಮಂಜು ಸಿಟ್ಟಾದರು. ‘ಅವರು ನ್ಯಾಯಯುತವಾಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಗೆ ಹೇಳ್ತೀರಾ? ದಿವ್ಯಾ ತೆಗೆದುಕೊಳ್ಳೋ ನಿರ್ಧಾರವನ್ನು ನಾನು ಹೇಗೆ ನಂಬಲಿ’ ಎಂದು ಮಂಜು ಪ್ರಶ್ನೆ ಮಾಡಿದರು. ಇದು ದಿವ್ಯಾಗೆ ಬೇಸರ ತರಿಸಿದೆ.

ಈ ವಾರ ಮಂಜು ನಾಮಿನೇಷನ್​ ಲಿಸ್ಟ್​ನಲ್ಲಿದ್ದರು. ಕ್ಯಾಪ್ಟನ್​ ದಿವ್ಯಾಗೆ ಒಬ್ಬರನ್ನು ಸೇವ್​ ಮಾಡುವ ಅವಕಾಶ ಸಿಕ್ಕಿತ್ತು. ಆಗ ಅವರು ಮಂಜು ಅವರನ್ನು ನಾಮಿನೇಟ್​ನಿಂದ ಬಚಾವ್​ ಮಾಡಿದ್ದರು. ಆದಾಗ್ಯೂ ಮಂಜು ಈ ರೀತಿ ಹೇಳಿರೋದು ಸಹಜವಾಗಿಯೇ ದಿವ್ಯಾಗೆ ಬೇಸರ ತರಿಸಿದೆ.

ಇದನ್ನೂ ಓದಿ: Bigg Boss Kannada: ಮಂಜು ಪಾವಗಡ ಜಾತಕದಲ್ಲಿದ್ದ ವಿಚಾರ ಬಿಗ್​ ಬಾಸ್​ ಮನೆಯಲ್ಲಿ ನಿಜವಾಯ್ತು

ಮಂಜು ಜತೆ ಕುಳಿತುಕೊಳ್ಳೋಕೆ ಯೋಚನೆ ಮಾಡುತ್ತಿದ್ದೇನೆ; ಕಣ್ಣೀರು ಹಾಕಿದ ದಿವ್ಯಾ ಸುರೇಶ್​

 

Click on your DTH Provider to Add TV9 Kannada