ತೀವ್ರ ಸಂಕಷ್ಟದ ನಡುವೆಯೂ ಬಿಗ್​ ಬಾಸ್​ ಓಟಿಟಿಗೆ ಬರ್ತಾರಾ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ?

ಬಿಗ್​ ಬಾಸ್​ ಓಟಿಟಿ ಎಂಬುದು ಹೊಸ ಕಾನ್ಸೆಪ್ಟ್​. ಇದನ್ನು ಕರಣ್​ ಜೋಹರ್​ ನಿರೂಪಣೆ ಮಾಡಲಿದ್ದಾರೆ. ಆ.8ರಿಂದ ಈ ಕಾರ್ಯಕ್ರಮ ವೂಟ್​ನಲ್ಲಿ ಪ್ರಸಾರ ಆಗಲಿದೆ.

ತೀವ್ರ ಸಂಕಷ್ಟದ ನಡುವೆಯೂ ಬಿಗ್​ ಬಾಸ್​ ಓಟಿಟಿಗೆ ಬರ್ತಾರಾ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ?
ರಾಜ್​ ಕುಂದ್ರಾ, ಶಿಲ್ಪಾ ಶೆಟ್ಟಿ, ಶಮಿತಾ ಶೆಟ್ಟಿ
Follow us
TV9 Web
| Updated By: ಮದನ್​ ಕುಮಾರ್​

Updated on: Aug 05, 2021 | 7:32 AM

ಅಶ್ಲೀಲ ಸಿನಿಮಾ ದಂಧೆ ಆರೋಪದಲ್ಲಿ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಅರೆಸ್ಟ್​ ಆದ ಬಳಿಕ ಅವರ ಇಡೀ ಕುಟುಂಬವೇ ಸಂಕಷ್ಟ ಎದುರಿಸುತ್ತಿದೆ. ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಅವರನ್ನೂ ಟ್ರೋಲ್​ ಮಾಡಲಾಗುತ್ತಿದೆ. ಇದು ಅವರ ಮೇಲೆ ಭಾರಿ ಪರಿಣಾಮ ಬೀರಿದೆ. ಇದರ ನಡುವೆ ಶಮಿತಾ ಶೆಟ್ಟಿ ಬಗ್ಗೆ ಒಂದು ಅಚ್ಚರಿಯ ಸುದ್ದಿ ಕೇಳಿಬರುತ್ತಿದೆ. ಕರಣ್​ ಜೋಹರ್​ ನಡೆಸಿಕೊಡುವ ಬಿಗ್​ ಬಾಸ್​ ಓಟಿಟಿ ಶೋನಲ್ಲಿ ಶಮಿತಾ ಶೆಟ್ಟಿ ಭಾಗವಹಿಸುತ್ತಾರೆ ಎಂದು ಹೇಳಲಾಗುತ್ತಿದೆ.

ಬಿಗ್​ ಬಾಸ್​ ಓಟಿಟಿ ಎಂಬುದು ಹೊಸ ಕಾನ್ಸೆಪ್ಟ್​. ಇದನ್ನು ಕರಣ್​ ಜೋಹರ್​ ನಿರೂಪಣೆ ಮಾಡಲಿದ್ದಾರೆ. ಆ.8ರಿಂದ ಈ ಕಾರ್ಯಕ್ರಮ ವೂಟ್​ನಲ್ಲಿ ಪ್ರಸಾರ ಆಗಲಿದೆ. ಇದರಲ್ಲಿ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಸ್ಪರ್ಧಿಯಾಗಿ ಪಾಲ್ಗೊಳ್ಳುತ್ತಾರೆ ಎಂಬ ಬಗ್ಗೆ ಗಾಸಿಪ್​ ಹರಿದಾಡುತ್ತಿದೆ. ಆದರೆ ಅದರ ಕುರಿತು ಶಮಿತಾ ಈವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

ಪ್ರೋಮೋ ಬಿಡುಗಡೆ ಮಾಡಿದ ವೂಟ್​

ಬಿಗ್​ ಬಾಸ್​ ರಿಯಾಲಿಟಿ ಶೋಗೆ ದೊಡ್ಡ ಪ್ರೇಕ್ಷಕವರ್ಗ ಇದೆ. ಮನೆಮಂದಿಯೆಲ್ಲ ಕುಳಿತು ಈ ಕಾರ್ಯಕ್ರಮವನ್ನು ನೋಡುತ್ತಾರೆ. ಮಕ್ಕಳು ಕೂಡ ಬಿಗ್​ ಬಾಸ್​ಗೆ ಫಿದಾ ಆಗಿದ್ದಾರೆ. ಆದರೆ ಇನ್ಮುಂದೆ ಬಿಗ್​ ಬಾಸ್​ ಎಂದರೆ ಸ್ವಲ್ಪ ಎಚ್ಚರಿಕೆಯಿಂದ ನೋಡಬೇಕಾದ ಸಂದರ್ಭ ಎದುರಾಗುತ್ತಿದೆ. ಈಗಾಗಲೇ ತಿಳಿದಿರುವಂತೆ ಕನ್ನಡ, ತೆಲುಗು, ಮಲಯಾಳಂ ಭಾಷೆಗಳ ಬಿಗ್​ ಬಾಸ್​ಗೆ ಹೋಲಿಸಿದರೆ ಹಿಂದಿ ಬಿಗ್​ ಬಾಸ್​ ಕೊಂಚ ಬೋಲ್ಡ್​ ಆಗಿರುತ್ತದೆ. ಈಗ ಅದನ್ನೂ ಮೀರಿ, ‘ಬಿಗ್​ ಬಾಸ್​ ಓಟಿಟಿ’ ಎಂಬ ಹೊಸ ಶೈಲಿಯನ್ನು ಪರಿಚಯಿಸಲಾಗುತ್ತಿದೆ. ಇಲ್ಲಿ ಸ್ಪರ್ಧಿಗಳು ಬೆತ್ತಲಾದರೂ ಅಚ್ಚರಿ ಏನಿಲ್ಲ. ಈ ಕಾರ್ಯಕ್ರಮದ ನಿಯಮಗಳೇ ಬೇರೆ. ಅದರ ಝಲಕ್​ ತೋರಿಸುವ ಸಲುವಾಗಿ ಒಂದು ಪ್ರೋಮೋ ಬಿಡುಗಡೆ ಮಾಡಲಾಗಿದೆ. ಅದನ್ನು ನೋಡಿದರೆ ಫ್ಯಾಮಿಲಿ ಆಡಿಯನ್ಸ್​ಗೆ ಶಾಕ್​ ಆಗುವುದು ಗ್ಯಾರಂಟಿ.

‘ಸಲ್ಮಾನ್​ ಖಾನ್​ ಅವರು ಟಿವಿಯಲ್ಲಿ ಸೂಟು​ ಬೂಟು ಧರಿಸಿ ನಿರೂಪಣೆ ಮಾಡುತ್ತಾರೆ. ನಾನು ವೂಟ್​ನಲ್ಲಿ ಬಿಗ್​ ಬಾಸ್​ ನಿರೂಪಣೆ ಮಾಡುತ್ತೇನೆ. ಇಲ್ಲಿ ಇಂಥ ಅರೆಬರೆ ಬಟ್ಟೆಯನ್ನು ಸ್ಪರ್ಧಿಗಳು ಧರಿಸಬೇಕು. ಕಿಸ್​​ ಮಾಡುವಂತಹ ಬೋಲ್ಡ್​ ಟಾಸ್ಕ್​ಗಳು ಇರುತ್ತವೆ. ಸ್ಪರ್ಧಿಗಳಿಗೆ ವೀಕ್ಷಕರೇ ಶಿಕ್ಷೆ ಕೊಡಬಹುದು’ ಎಂದು ಪ್ರೋಮೋದಲ್ಲಿ ಕರಣ್​ ಜೋಹರ್​ ಹೇಳಿದ್ದಾರೆ. ಇದು ಮಕ್ಕಳು ಜೊತೆ ಕುಳಿತು ನೋಡುವಂತಹ ಶೋ ಅಲ್ಲವೇ ಅಲ್ಲ ಎಂಬುದಕ್ಕೆ ಈ ಪ್ರೋಮೋ ಸಾಕ್ಷಿ ನೀಡುತ್ತಿದೆ.

ಇದನ್ನೂ ಓದಿ:

Viaan: ಅಪ್ಪನ ಅರೆಸ್ಟ್, ಅಮ್ಮನ ಕಣ್ಣೀರ ನಡುವೆ ಮೊದಲ ಪೋಸ್ಟ್ ಮಾಡಿದ ಶಿಲ್ಪಾ ಶೆಟ್ಟಿ ಮಗ

’ನಿನ್ನ ಜತೆ ಸದಾ ನಾನಿರುತ್ತೇನೆ‘; ಶಿಲ್ಪಾ ಶೆಟ್ಟಿಗೆ ಧೈರ್ಯ ತುಂಬಿದ ಸಹೋದರಿ ಶಮಿತಾ ಶೆಟ್ಟಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ