Vaishnavi Gowda: ಸೈಲೆಂಟ್​ ಆಗಿ ಬಿಗ್​ ಬಾಸ್​ ಗೆಲ್ತಾರಾ ವೈಷ್ಣವಿ? ಇಲ್ಲಿವೆ ಕಾರಣಗಳು ​

ಅವರು ಈಗ ಮೊದಲಿನ ವೈಷ್ಣವಿ ಆಗಿ ಉಳಿದಿಲ್ಲ. ಅವರಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಅತಿ ಹೆಚ್ಚು ವೋಟ್​ ಪಡೆದು ಮೊದಲು ಸೇವ್​ ಆಗುತ್ತಿರುವವರು ಅವರೇ. ಸೀಸನ್​ 8 ಗೆಲ್ಲುವ ಸ್ಪರ್ಧಿಗಳ ಪೈಕಿ ವೈಷ್ಣವಿ ಹೆಸರು ಮುಂಚೂಣಿಯಲ್ಲಿದೆ.

Vaishnavi Gowda: ಸೈಲೆಂಟ್​ ಆಗಿ ಬಿಗ್​ ಬಾಸ್​ ಗೆಲ್ತಾರಾ ವೈಷ್ಣವಿ? ಇಲ್ಲಿವೆ ಕಾರಣಗಳು ​
Follow us
ರಾಜೇಶ್ ದುಗ್ಗುಮನೆ
|

Updated on:Aug 06, 2021 | 6:03 PM

ಕನ್ನಡ ಬಿಗ್​ ಬಾಸ್ ಸೀಸನ್​ 8ರ​ ಆರಂಭದ ದಿನಗಳವು. ಬಿಗ್​ ಬಾಸ್​ ಮನೆಗೆ ವೈಷ್ಣವಿ ಗೌಡ ಅವರನ್ನು ಯಾಕೆ ಕರೆತರಲಾಗಿದೆ ಎಂದು ಅನೇಕರು ಪ್ರಶ್ನೆ ಮಾಡಿದ್ದರು. ಅವರು ನಡೆದುಕೊಳ್ಳುತ್ತಿದ್ದ ರೀತಿ ಅನೇಕರಿಗೆ ಅಚ್ಚರಿ ತರಿಸಿತ್ತು. ಅವರು ಸದಾ ಒಬ್ಬಂಟಿಯಾಗಿರುತ್ತಿದ್ದರು. ಆದರೆ ಅವರು ಈಗ ಮೊದಲಿನ ವೈಷ್ಣವಿ ಆಗಿ ಉಳಿದಿಲ್ಲ. ಅವರಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಅತಿ ಹೆಚ್ಚು ವೋಟ್​ ಪಡೆದು ಮೊದಲು ಸೇವ್​ ಆಗುತ್ತಿರುವವರು ಅವರೇ. ಸೀಸನ್​ 8 ಗೆಲ್ಲುವ ಸ್ಪರ್ಧಿಗಳ ಪೈಕಿ ವೈಷ್ಣವಿ ಹೆಸರು ಮುಂಚೂಣಿಯಲ್ಲಿದೆ.

ಪ್ಲಸ್​ ಪಾಯಿಂಟ್​

ಕಮ್​ಬ್ಯಾಕ್​:

ವೈಷ್ಣವಿ ಮೊದಲ ಇನ್ನಿಂಗ್ಸ್​ ಆರಂಭದಲ್ಲಿ ಟಾಸ್ಕ್​ನಲ್ಲಿ ಅಷ್ಟಾಗಿ ಭಾಗವಹಿಸುತ್ತಿರಲಿಲ್ಲ. ಯಾರ ಜತೆಗೂ ಅವರು ಅಷ್ಟಾಗಿ ಮಾತನಾಡುತ್ತಿರಲಿಲ್ಲ. ವೈಷ್ಣವಿ ಅವರು ಇನ್ನೂ ಎಕ್ಸ್​ಪ್ರೆಸಿವ್​ ಆಗಬಹುದಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದರು. ಇದನ್ನು ವೈಷ್ಣವಿ ಚಾಲೆಂಜ್​ ಆಗಿ ಸ್ವೀಕರಿಸಿದ್ದರು. ಅಲ್ಲದೆ, ಎಲ್ಲರ ಜತೆ ಬೆರೆಯೋಕೆ ಆರಂಭಿಸಿದರು. ಟಾಸ್ಕ್​ ಉತ್ತಮವಾಗಿ ನಿರ್ವಹಿಸಿದರು. ಈ ಮೂಲಕ ಎಲ್ಲರಿಂದ ಭೇಷ್​ ಎನಿಸಿಕೊಂಡರು. ಇದು ಅವರ ಉತ್ತಮ ಕಮ್​ಬ್ಯಾಕ್​.

ಇಷ್ಟವಾಗುವ ವ್ಯಕ್ತಿತ್ವ:

ವೈಷ್ಣವಿ ವ್ಯಕ್ತಿತ್ವ ಬಹುತೇಕರಿಗೆ ಇಷ್ಟವಾಗಿದೆ. ಅವರು ಮನೆಯಲ್ಲಿ ಸೈಲೆಂಟ್​ ಆಗಿರುತ್ತಾರೆ ನಿಜ. ಆದರೆ, ಎಲ್ಲಿ ಏನು ಮಾತನಾಡಬೇಕೋ ಅದನ್ನು ಮಾತನಾಡುತ್ತಾರೆ. ಅವರ ಸೌಮ್ಯ ಸ್ವಭಾವ ಎಲ್ಲರಿಗೂ ಇಷ್ಟವಾಗುತ್ತದೆ. ಇನ್ನು, ವೈಷ್ಣವಿ ನಗು ನೋಡಿ ಫಿದಾ ಆಗದವರೇ ಇಲ್ಲ.

ಎಲ್ಲ ಕಡೆ ಆ್ಯಕ್ಟಿವ್​:

ವೈಷ್ಣವಿ ಅಡುಗೆ ಮನೆಯಲ್ಲಿ ಹೆಚ್ಚು ಆ್ಯಕ್ಟಿವ್​. ಇದಲ್ಲದೆ, ಟಾಸ್ಕ್​ಗಳನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ. ತಪ್ಪು ಮಾಡುವುದು ಅವರು ತುಂಬಾನೇ ಕಡಿಮೆ. ತಪ್ಪು ಮಾಡಿದಾಗ ಅದನ್ನು ತಿದ್ದಿಕೊಂಡು ಮುಂದೆ ನಡೆದಿದ್ದಾರೆ. ಎಲ್ಲರ ಜತೆ ಅವರು ಸರಿಸಮಾನವಾಗಿ ಬೆರೆತಿದ್ದಾರೆ. ಇದು ಅವರು ಗೆಲ್ಲೋಕೆ ಸಹಾಯ ಮಾಡಬಹುದು.

ಹಿರಿದಾದ ಅಭಿಮಾನಿ ಬಳಗ:

‘ಅಗ್ನಿಸಾಕ್ಷಿ’ ಧಾರಾವಾಹಿ ಮೂಲಕ ವೈಷ್ಣವಿ ಗುರುತಿಸಿಕೊಂಡವರು. ಆಗಲೇ ಅವರಿಗೆ ದೊಡ್ಡ ಅಭಿಮಾನಿ ಬಳಗ ಇತ್ತು. ಅದು ಈಗ ಮತ್ತಷ್ಟು ವಿಸ್ತರಣೆ ಆಗಿದೆ. ಈ ಕಾರಣಕ್ಕೆ ಅವರಿಗೆ ಹೆಚ್ಚು ವೋಟ್​ಗಳು ಬೀಳುತ್ತಿವೆ. ಕಳೆದ ಎರಡು ವಾರಗಳಿಂದ ಮೊದಲು ಸೇವ್​ ಆಗುತ್ತಿರುವ ಸ್ಪರ್ಧಿ ಎಂದರೆ ಅದು ವೈಷ್ಣವಿ ಅನ್ನೋದನ್ನು ಇಲ್ಲಿ ಗಮನಿಸಬೇಕು.

ಮೈನಸ್​ ಪಾಯಿಂಟ್​

ಕಾಂಪಿಟೇಷನ್​:

ಮಂಜು ಪಾವಗಡ ಹಾಗೂ ಅರವಿಂದ್ ಕಡೆಯಿಂದ ವೈಷ್ಣವಿ ಟಫ್​ ಕಾಂಪಿಟೇಷನ್​ ಎದುರಿಸುತ್ತಿದ್ದಾರೆ. ವೋಟ್​ ಯಾರಿಗೆ ಹೆಚ್ಚು ಬೀಳುತ್ತದೆಯೋ ಅವರು ಗೆದ್ದಂತೆ. ಈ ವಿಚಾರದಲ್ಲಿ ಜನರು ಯಾರ ಕೈ ಹಿಡಿಯುತ್ತಾರೆ ಎಂಬುದನ್ನು ಕಾದು ನೋಡಬೇಕು.

ಇಷ್ಟವಾಗಿಲ್ಲ ಈ ಗುಣಗಳು: 

ವೈಷ್ಣವಿ ಅವರು ಎಷ್ಟೇ ಬದಲಾದರೂ ಅವರ ಕೆಲವು ಗುಣಗಳು ವೀಕ್ಷಕರಿಗೆ ಇಷ್ಟವಾಗಿಲ್ಲ. ಕೆಲವೊಮ್ಮೆ ಅವರು ತುಂಬಾನೇ ಸೈಲೆಂಟ್​ ಆಗಿರುತ್ತಾರೆ. ಇನ್ನೂ ಕೆಲವೊಮ್ಮೆ ವೈಷ್ಣವಿ ಎಲ್ಲರ ಜತೆ ಬೆರೆತರೂ ಬೆರೆತಂತೆ ಇರುವುದಿಲ್ಲ. ಇದು ಅವರಿಗೆ ಮೈನಸ್​ ​ ಆಗಬಹುದು.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಮಂಜು ಕೋರಿಕೆ ದಿವ್ಯಾಗೆ ಶಾಪವಾಯ್ತು; ನೊಂದುಕೊಂಡ ಉರುಡುಗ

Vaishnavi Gowda: ದೊಡ್ಮನೆಯೊಳಗೆ ವೈಷ್ಣವಿ ಜೊತೆ ಚೆನ್ನಾಗಿದ್ದ ರಘು ಗೌಡ ಫಿನಾಲೆ ವೇಳೆಗೆ ಪ್ರಚಾರ ಮಾಡಿದ್ದು ಯಾರ ಪರವಾಗಿ?

Published On - 6:02 pm, Fri, 6 August 21

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್