‘ಅರವಿಂದ್ ಪೊಸೆಸಿವ್​​ನೆಸ್​ ಒಂದು ದಿನ ನಿಮಗೆ ಉಸಿರುಗಟ್ಟಿಸುತ್ತದೆ’; ದಿವ್ಯಾಗೆ ಇದು ಎಚ್ಚರಿಕೆಯ ಗಂಟೆ

ಅರವಿಂದ್​ ನೋಡಿದರೆ ನಿನ್ನ ತಂದೆಯನ್ನು ಕಂಡಂತೆ ಆಗುತ್ತದೆ ಎಂದು ದಿವ್ಯಾಗೆ ಹೇಳಿದರು ಪ್ರಶಾಂತ್​. ಏಕೆ ಎನ್ನುವ ಪ್ರಶ್ನೆಯನ್ನು ದಿವ್ಯಾ ಕೇಳಿದರು.

‘ಅರವಿಂದ್ ಪೊಸೆಸಿವ್​​ನೆಸ್​ ಒಂದು ದಿನ ನಿಮಗೆ ಉಸಿರುಗಟ್ಟಿಸುತ್ತದೆ’; ದಿವ್ಯಾಗೆ ಇದು ಎಚ್ಚರಿಕೆಯ ಗಂಟೆ
ದಿವ್ಯಾ ಉರುಡುಗ
Follow us
TV9 Web
| Updated By: Vinay Bhat

Updated on: Aug 06, 2021 | 6:42 AM

ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆ.ಪಿ. ನಡುವೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಇವರ ನಡುವೆ ಪ್ರೀತಿ ಇದೆ ಎಂಬುದು ವೀಕ್ಷಕರಿಗೆ ಸ್ಪಷ್ಟವಾಗಿದೆ. ದಿವ್ಯಾಗೆ ಅರವಿಂದ್ ಕೊಂಚ ಹೆಚ್ಚೇ ಕಾಳಜಿ ತೋರಿಸುತ್ತಾರೆ. ಆದರೆ, ಕೆಲವೊಮ್ಮೆ ಇದು ಅತಿಯಾಗುತ್ತದೆ ಎಂಬುದು ಪ್ರಶಾಂತ್​ ಸಂಬರಗಿ ಅಭಿಪ್ರಾಯ. ಈ ಬಗ್ಗೆ ಅವರು ಓಪನ್​ ಆಗಿಯೇ ಹೇಳಿದ್ದಾರೆ. ಆದರೆ, ದಿವ್ಯಾ ಇದನ್ನು ಒಪ್ಪಿಕೊಂಡಿಲ್ಲ.

‘ಅರವಿಂದ್​ ನೋಡಿದರೆ ನಿನ್ನ ತಂದೆಯನ್ನು ಕಂಡಂತೆ ಆಗುತ್ತದೆ’ ಎಂದು ದಿವ್ಯಾಗೆ ಪ್ರಶಾಂತ್ ಹೇಳಿದರು​. ‘ಏಕೆ?’ ಎನ್ನುವ ಪ್ರಶ್ನೆಯನ್ನು ದಿವ್ಯಾ ಕೇಳಿದರು. ‘ಆತ ಕೆಲವೊಮ್ಮೆ ನಡೆದುಕೊಳ್ಳುವ ರೀತಿ ಹಾಗೆಯೇ ಇರುತ್ತದೆ. ತುಂಬಾ ಸ್ಟ್ರಿಕ್ಟ್​ ಆಗಿ ನಡೆದುಕೊಳ್ಳುತ್ತಾನೆ’ ಎಂದರು ಪ್ರಶಾಂತ್​.

ಸ್ವಲ್ಪ ಸಮಯದ ನಂತರ ಇಬ್ಬರೂ ಗಾರ್ಡನ್​ ಏರಿಯಾದಲ್ಲಿ ಕೂತರು. ಈ ವೇಳೆ ಪ್ರಶಾಂತ್​ ಇದೇ ಮಾತನ್ನು ಹೇಳಿದರು. ‘ಅರವಿಂದ್ ತುಂಬಾ ಪೊಸೆಸಿವ್. ಅವರ ಪೊಸೆಸಿವ್​ನೆಸ್​ ಮುಂದೊಂದು ದಿನ ನಿನಗೆ ಉಸಿರುಗಟ್ಟಿಸುತ್ತದೆ. ಅವನು ನಿನ್ನ ಜತೆ ನಡೆದುಕೊಳ್ಳೋದು ಜಡ್​ ಪ್ಲಸ್​ ಸೆಕ್ಯೂರಿಟಿ ತರ ಕಾಣಿಸುತ್ತದೆ. ಆರಂಭದಲ್ಲಿ ಇದು ಚೆನ್ನಾಗಿ ಕಾಣುತ್ತದೆ. ಆದರೆ, ಮುಂದೊಂದು ದಿನ ನಿನಗೆ ಸ್ಪೇಸ್​ ಬೇಕು ಅನಿಸುತ್ತದೆ. ಹೀಗಾಗಿ, ಆ ಪೊಸೆಸಿವ್​ನೆಸ್​ಗೆ ಈಗಲೇ ಬ್ರೇಕ್​ ಹಾಕು’ ಎಂದು ಕಿವಿ ಮಾತು ಹೇಳಿದರು. ದಿವ್ಯಾ ಉರುಡುಗ ಈ ಮಾತನ್ನು ಒಪ್ಪಿಲ್ಲ. ‘ಪಾಪ ಆ ರೀತಿ ಇಲ್ಲ. ಅವರು ಸೂಕ್ಷ್ಮ’ ಎಂದರು ದಿವ್ಯಾ.

ಮಂಜು ಪಾವಗಡ, ಅರವಿಂದ್ ಕೆ.ಪಿ., ಪ್ರಶಾಂತ್​ ಸಂಬರಗಿ, ದಿವ್ಯಾ ಉರುಡುಗ ಹಾಗೂ ವೈಷ್ಣವಿ ಫಿನಾಲೆ ತಲುಪಿದ್ದಾರೆ. ಇವರಲ್ಲಿ ಅತಿ ಹೆಚ್ಚು ವೋಟ್​ ಪಡೆದವರು ಗೆಲ್ಲುತ್ತಾರೆ. ಇವರಲ್ಲಿ ಗೆಲ್ಲೋದು ಯಾರು ಎನ್ನುವ ಬಗ್ಗೆ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ.

ಇದನ್ನೂ ಓದಿ: ಬಿಗ್​ ಬಾಸ್​ನಿಂದ ಎಲಿಮಿನೇಟ್​ ಆದ ಮೇಲೂ ದಿವ್ಯಾಗೆ ಮಂಜು ಮೇಲಿನ ಭಾವನೆ ಬದಲಾಗಿಲ್ಲ; ಇಲ್ಲಿದೆ ವಿಡಿಯೋ ಸಾಕ್ಷಿ

ಫಿನಾಲೆ ಹಿಂದಿನ ವಾರದಲ್ಲಿ ಪ್ರಶಾಂತ್​ ಕಮ್​ಬ್ಯಾಕ್​; ಮಂಜು, ಅರವಿಂದ್​ ಹಿಂದಿಕ್ಕಿದ ಸಂಬರಗಿ

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್