ಬಿಗ್ ಬಾಸ್ ಫಿನಾಲೆಯಲ್ಲಿ ಯಾರೂ ಊಹಿಸದ ಎಲಿಮಿನೇಷನ್; ಪ್ರಶಾಂತ್ ಜತೆ ವೈಷ್ಣವಿ ಔಟ್
ಬಿಗ್ ಬಾಸ್ ಗೆಲ್ಲುವ ಸ್ಪರ್ಧಿ ಕಪ್ ಜತೆಗೆ 50 ಲಕ್ಷ ರೂಪಾಯಿ ಹಣವನ್ನು ಮನೆಗೆ ಕೊಂಡೊಯ್ಯಲಿದ್ದಾರೆ. ಅದಕ್ಕೂ ಮೊದಲು ಬಿಗ್ ಬಾಸ್ ಮನೆಯಿಂದ ದಿವ್ಯಾ ಹಾಗೂ ಪ್ರಶಾಂತ್ ಸಂಬರಗಿ ಔಟ್ ಆಗಿದ್ದಾರೆ.

ಕನ್ನಡ ಬಿಗ್ ಬಾಸ್ ಸೀಸನ್ 8ರ ಫಿನಾಲೆ ಇಂದು (ಆ.7) ಹಾಗೂ ನಾಳೆ (ಆ.8) ನಡೆಯುತ್ತಿದೆ. ಈ ಬಾರಿಯ ಬಿಗ್ ಬಾಸ್ ಸೀಸನ್ ಯಾರು ಗೆಲ್ಲಲಿದ್ದಾರೆ ಅನ್ನೋದು ಸದ್ಯದ ಕುತೂಹಲ. ಐದು ಸ್ಪರ್ಧಿಗಳು ಸದ್ಯ ಫಿನಾಲೆ ತಲುಪಿದ್ದು, ಇದರಲ್ಲಿ ಒಬ್ಬರು ಗೆಲ್ಲಲಿದ್ದಾರೆ. ಬಿಗ್ ಬಾಸ್ ಗೆಲ್ಲುವ ಸ್ಪರ್ಧಿ ಕಪ್ ಜತೆಗೆ 50 ಲಕ್ಷ ರೂಪಾಯಿ ಹಣವನ್ನು ಮನೆಗೆ ಕೊಂಡೊಯ್ಯಲಿದ್ದಾರೆ. ಅದಕ್ಕೂ ಮೊದಲು ಬಿಗ್ ಬಾಸ್ ಮನೆಯಿಂದ ಪ್ರಶಾಂತ್ ಸಂಬರಗಿ ಹಾಗೂ ವೈಷ್ಣವಿ ಗೌಡ ಔಟ್ ಆಗಿದ್ದಾರೆ.
ಪ್ರಶಾಂತ್ ಸಂಬರಗಿ ಕೂಡ ಫಿನಾಲೆ ಲಿಸ್ಟ್ನಲ್ಲಿದ್ದರು. ಇವರು ಎರಡು ಬಾರಿ ಬಿಗ್ ಬಾಸ್ ಎಕ್ಸಿಟ್ ಬಾಗಿಲನ್ನು ಮುಟ್ಟಿ ಬಂದಿದ್ದಾರೆ. ಮನೆಯಲ್ಲಿ ನ್ಯಾಯದ ಪರ ಹಾಗೂ ಗುಂಪುಗಾರಿಕೆ ವಿರುದ್ಧ ತೀವ್ರವಾಗಿ ಹೋರಾಡಿದವರು ಪ್ರಶಾಂತ್. ಸಾಕಷ್ಟು ಬಾರಿ ಅವರು ಏರು ಧ್ವನಿಯಲ್ಲಿ ಮಾತನಾಡಿದ್ದಾರೆ. ನಾಲ್ಕು ಬಾರಿ ಕಳಪೆ ಪಟ್ಟ ಪಡೆದಿದ್ದಾರೆ ಪ್ರಶಾಂತ್. ಅಂತಿಮವಾಗಿ ಪ್ರಶಾಂತ್ ಸಂಪೂರ್ಣವಾಗಿ ಬದಲಾಗಿದ್ದರು. ಅವರು ಎಲ್ಲರ ಜತೆ ಬೆರೆಯೋಕೆ ಪ್ರಾರಂಭಿಸಿದ್ದರು. ಇದು ಅವರಿಗೆ ಪ್ಲಸ್ ಪಾಯಿಂಟ್ ಆಗಿತ್ತು. ಆದರೆ, ಅವರು ಮನೆಯಲ್ಲಿ ಉಳಿದುಕೊಳ್ಳೋಕೆ ಸಾಧ್ಯವಾಗಿಲ್ಲ. ಅವರಿಗೆ 6.69 ಲಕ್ಷ ಮತ ಬಿದ್ದಿತ್ತು.
ವೈಷ್ಣವಿ ಗೌಡ ಕೂಡ ಬಿಗ್ ಬಾಸ್ ಮನೆಯಲ್ಲಿ ನಾಲ್ಕನೇ ಸ್ಪರ್ಧಿಯಾಗಿ ಮನೆಯಿಂದ ಔಟ್ ಆಗಿದ್ದಾರೆ. ಬಿಗ್ ಬಾಸ್ ಫಿನಾಲೆ ಪೈಕಿ ವೈಷ್ಣವಿ ಕೂಡ ಇರುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಅಚ್ಚರಿ ಎಂಬಂತೆ ಅವರು ಮನೆಯಿಂದ ಹೊರ ಹೋಗಿದ್ದಾರೆ. ಇದು ಸಾಕಷ್ಟು ಜನರಿಗೆ ಅಚ್ಚರಿ ಮೂಡಿಸಿದ್ದಂತೂ ಸುಳ್ಳಲ್ಲ. ವೈಷ್ಣವಿ ಪಡೆದ ಮತಗಳ ಸಂಖ್ಯೆ 10,21,831.
ಇದನ್ನೂ ಓದಿ: ಗಾಯಕ ನವೀನ್ ಸಜ್ಜು ಪ್ರಕಾರ ’ಕನ್ನಡ ಬಿಗ್ ಬಾಸ್ ಸೀಸನ್ 8’ ಗೆಲ್ಲೋರು ಇವರೇ
ಬಿಗ್ ಬಾಸ್ ಮನೆಯಲ್ಲಿ ನಾಲ್ಕೇ ದಿನಕ್ಕೆ ಎರಡು ಲಕ್ಷ ಸಂಪಾದಿಸಿದ ಅರವಿಂದ್ ಕೆಪಿ




