ಅಲ್ಲು ಅರ್ಜುನ್​ ಮುಂದಿನ ಚಿತ್ರಕ್ಕೆ ಕರ್ನಾಟಕದ ಇಬ್ಬರು ಹೀರೋಯಿನ್​ಗಳು?

ಅಲ್ಲು ಅರ್ಜುನ್​ ‘ಐಕಾನ್’​ ಸಿನಿಮಾದಲ್ಲಿ ನಟಿಸಲಿದ್ದಾರೆ. ವೇಣು ಶ್ರೀರಾಮ್​ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದು, ‘ಪುಷ್ಪ ಪಾರ್ಟ್​ 1’ ತೆರೆಗೆ ಬಂದ ನಂತರದಲ್ಲಿ ಈ ಚಿತ್ರ ಸೆಟ್ಟೇರಲಿದೆ.

ಅಲ್ಲು ಅರ್ಜುನ್​ ಮುಂದಿನ ಚಿತ್ರಕ್ಕೆ ಕರ್ನಾಟಕದ ಇಬ್ಬರು ಹೀರೋಯಿನ್​ಗಳು?
ಅಲ್ಲು ಅರ್ಜುನ್​
Follow us
TV9 Web
| Updated By: ಮದನ್​ ಕುಮಾರ್​

Updated on: Aug 10, 2021 | 9:31 AM

ರಶ್ಮಿಕಾ ಮಂದಣ್ಣ ಹಾಗೂ ಪೂಜಾ ಹೆಗ್ಡೆ ದಕ್ಷಿಣ ಭಾರತ ಹಾಗೂ ಬಾಲಿವುಡ್​ನಲ್ಲಿ ಭಾರೀ ಬೇಡಿಕೆ ಹೊಂದಿದ್ದಾರೆ. ಇವರ ಕಾಲ್​ಶೀಟ್​ ಪಡೆಯೋಕೆ ಅನೇಕ ನಿರ್ಮಾಪಕರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಈ ಮಧ್ಯೆ ಅಚ್ಚರಿಯ ವಿಚಾರವೊಂದು ಕೇಳಿ ಬಂದಿದೆ. ಅಲ್ಲು ಅರ್ಜುನ್​ ಮುಂದಿನ ಚಿತ್ರಕ್ಕೆ ಇವರಿಬ್ಬರನ್ನು ಹೀರೋಯಿನ್​ ಆಗಿ ಆಯ್ಕೆ ಮಾಡಲು ತೆರೆಮರೆಯಲ್ಲಿ ಸಿದ್ಧತೆ ನಡೆದಿದೆಯಂತೆ.

ಅಲ್ಲು ಅರ್ಜುನ್​ ‘ಐಕಾನ್’​ ಸಿನಿಮಾದಲ್ಲಿ ನಟಿಸಲಿದ್ದಾರೆ. ವೇಣು ಶ್ರೀರಾಮ್​ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದು, ‘ಪುಷ್ಪ ಪಾರ್ಟ್​ 1’ ತೆರೆಗೆ ಬಂದ ನಂತರದಲ್ಲಿ ಈ ಚಿತ್ರ ಸೆಟ್ಟೇರಲಿದೆ. ವೇಣು ಶ್ರೀರಾಮ್​-ಅಲ್ಲು ಅರ್ಜುನ್​ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ ಎನ್ನಲಾಗಿದೆ. ಇದಕ್ಕೆ  ಇಬ್ಬರ ಕಾಲ್​ಶೀಟ್​ ಕೇಳಲಾಗಿದೆ.

ಹೌದು, ಪೂಜಾ ಹೆಗ್ಡೆ ಹಾಗೂ ರಶ್ಮಿಕಾ ಅವರನ್ನು ಈ ಸಿನಿಮಾಗೆ ನಾಯಕಿಯರನ್ನಾಗಿ ಆಯ್ಕೆ ಮಾಡಿಕೊಳ್ಳಲು ಚಿತ್ರತಂಡ ನಿರ್ಧರಿಸಿದೆ. ಅಲ್ಲು ಅರ್ಜುನ್​ ಹಾಗೂ ಪೂಜಾ ಹೆಗ್ಡೆ ‘ಡಿಜೆ’ ಮತ್ತು ಅಲಾ ವೈಂಕುಂಟಪುರಮುಲೋ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಪುಷ್ಪ ಪಾರ್ಟ್​ 1 ಸಿನಿಮಾದಲ್ಲಿ ಅಲ್ಲುಗೆ ಜತೆಯಾಗಿ ರಶ್ಮಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಇಬ್ಬರೂ ಹೀರೋಯಿನ್​ಗಳು ಒಂದೇ ಚಿತ್ರದಲ್ಲಿ ನಟಿಸುತ್ತಾರಾ ಎಂಬ ಕೌತುಕ ಮನೆ ಮಾಡಿದೆ.

ಈ ಬಗ್ಗೆ ಸದ್ಯ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಆದರೂ ಸೋಶಿಯಲ್​ ಮೀಡಿಯಾದಲ್ಲಿ ಈ ಮಾಹಿತಿ ವೈರಲ್​ ಆಗುತ್ತಿದೆ. ಅಲ್ಲು ಅರ್ಜುನ್​ ಸಿನಿಮಾ ಎಂದರೆ ಅಲ್ಲಿ ಸಾಕಷ್ಟು ಕಮರ್ಷಿಯಲ್​ ಅಂಶಗಳು ಇರುತ್ತವೆ. ಈ ಸಿನಿಮಾ ರಿವೇಂಜ್​ ಡ್ರಾಮಾ ಕಥೆ ಹೊಂದಿರಲಿದೆ ಎನ್ನಲಾಗಿದೆ.

ಬಾಲಿವುಡ್​ನಲ್ಲಿ  ವಿಕಾಸ್​ ಬಹ್ಲ್​ ಆ್ಯಕ್ಷನ್​-ಕಟ್​ ಹೇಳುತ್ತಿರುವ  ‘ಗುಡ್​ಬೈ’ ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಸಿದ್ಧಾರ್ಥ್​ ಮಲ್ಹೋತ್ರಾಗೆ ಜೋಡಿಯಾಗಿ ‘ಮಿಷನ್​ ಮಜ್ನು’ ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಟಾಲಿವುಡ್​ನಲ್ಲಿ ಅಲ್ಲು ಅರ್ಜುನ್​ ಜೊತೆ ರಶ್ಮಿಕಾ ನಟಿಸಿರುವ ‘ಪುಷ್ಪ’ ಚಿತ್ರಕ್ಕೆ ಕೊನೇ ಹಂತದ ಕೆಲಸಗಳು ನಡೆಯುತ್ತಿವೆ. ಪೂಜಾ ಹೆಗ್ಡೆ ಅವರ ಕೈಯಲ್ಲಿ ಮೋಸ್ಟ್​​ ಎಲಿಜೆಬಲ್​ ಬ್ಯಾಚುಲರ್​ ಸೇರಿ ನಾಲ್ಕೈದು ಸಿನಿಮಾಗಳಿವೆ.

ಇದನ್ನೂ ಓದಿ: Rashmika Mandanna: ‘ಈಗ ನಾನು ಕಲ್ಲಾಗಿದ್ದೇನೆ’; ಟ್ರೋಲ್​ ಮಾಡುವವರಿಗೆ ತಿರುಗೇಟು ಕೊಟ್ಟ ನಟಿ ರಶ್ಮಿಕಾ ಮಂದಣ್ಣ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ