AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rashmika Mandanna: ‘ಈಗ ನಾನು ಕಲ್ಲಾಗಿದ್ದೇನೆ’; ಟ್ರೋಲ್​ ಮಾಡುವವರಿಗೆ ತಿರುಗೇಟು ಕೊಟ್ಟ ನಟಿ ರಶ್ಮಿಕಾ ಮಂದಣ್ಣ

‘ನಾನು 19ನೇ ವಯಸ್ಸಿನಲ್ಲಿ ಇದ್ದಾಗಿನಿಂದಲೇ ಈ ಟ್ರೋಲ್​ ಕಾಟ ಶುರುವಾಯಿತು. ಆದರೆ ಈಗ ನಾನು ಈ ವಿಚಾರದಲ್ಲಿ ಕಲ್ಲಾಗಿದ್ದೇನೆ. ಇಂದು ಯಾವುದೇ ಟ್ರೋಲ್​ ಕೂಡ ನನಗೆ ಮುಖ್ಯವಾಗುವುದಿಲ್ಲ’ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

Rashmika Mandanna: ‘ಈಗ ನಾನು ಕಲ್ಲಾಗಿದ್ದೇನೆ’; ಟ್ರೋಲ್​ ಮಾಡುವವರಿಗೆ ತಿರುಗೇಟು ಕೊಟ್ಟ ನಟಿ ರಶ್ಮಿಕಾ ಮಂದಣ್ಣ
ರಶ್ಮಿಕಾ
TV9 Web
| Edited By: |

Updated on:Aug 29, 2022 | 10:42 AM

Share

Rashmika Mandanna: ಕೊಡಗಿನ ಕುವರಿ, ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಅಭಿಮಾನಿಗಳ ಸಂಖ್ಯೆ ಎಷ್ಟು ದೊಡ್ಡದಿದೆಯೋ ಅದೇ ರೀತಿ ಅವರನ್ನು ಟ್ರೋಲ್​ (Troll) ಮಾಡುವವರ ಸಂಖ್ಯೆ ಕೂಡ ದೊಡ್ಡದು. ಆರಂಭದ ದಿನಗಳಿಂದಲೂ ಅವರು ಒಂದಿಲ್ಲೊಂದು ರೀತಿಯಲ್ಲಿ ಟ್ರೋಲ್​ಗೆ ಒಳಗಾಗುತ್ತಲೇ ಬಂದಿದ್ದಾರೆ. ರಕ್ಷಿತ್​ ಶೆಟ್ಟಿ ಜೊತೆ ಬ್ರೇಕಪ್​ ಆದ ನಂತರವಂತೂ ಅವರನ್ನು ಟ್ರೋಲ್​ ಮಾಡುವವರ ಸಂಖ್ಯೆ ಹೆಚ್ಚಿತು. ರಶ್ಮಿಕಾ ಏನೇ ಮಾಡಿದರೂ ಅವರನ್ನು ಒಂದು ವರ್ಗದ ನೆಟ್ಟಿಗರು ದ್ವೇಷಿಸಲು ಆರಂಭಿಸಿದರು. ಆ ಬಗ್ಗೆ ಈಗ ರಶ್ಮಿಕಾ ಮಾತನಾಡಿದ್ದಾರೆ. ಟ್ರೋಲ್​ಗಳಿಂದ ಅವರಿಗೆ ಎಷ್ಟು ತೊಂದರೆ ಆಗಿತ್ತು ಎಂಬುದನ್ನು ಅವರು ವಿವರಿಸಿದ್ದಾರೆ. 

ಸಿನಿಮಾ ವಿಮರ್ಶಕಿ ಅನುಪಮಾ ಚೋಪ್ರಾಗೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ಈ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ‘ಆರಂಭದಲ್ಲಿ ಟ್ರೋಲ್​ಗಳನ್ನು ಸಹಿಸುವುದು ತುಂಬ ಕಷ್ಟ ಆಗುತ್ತಿತ್ತು. ನಮ್ಮದು ಫಿಲ್ಮೀ ಕುಟುಂಬ ಅಲ್ಲ. ಇಲ್ಲಿ ಎಲ್ಲವೂ ನನಗೆ ಹೊಸದಾಗಿತ್ತು. ಜನರು ನನ್ನನ್ನು ಟ್ರೋಲ್​ ಮಾಡಿದಾಗ ನಾನು ಅದನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೆ. ಉಸಿರು ಕಟ್ಟಿಸುವಂತಹ ವಾತಾವರಣ ನಿರ್ಮಾಣ ಆಗಿತ್ತು’ ಎಂದು ರಶ್ಮಿಕಾ ಹೇಳಿದ್ದಾರೆ.

‘ಜನರು ಎಲ್ಲದರ ಬಗ್ಗೆ ಮಾತನಾಡಲು ಶುರು ಮಾಡುತ್ತಾರೆ. ನಿಮ್ಮ ದೇಹ, ಬಣ್ಣ, ರಿಲೇಷನ್​​ಶಿಪ್​ ಸೇರಿದಂತೆ ಎಲ್ಲದರ ಬಗ್ಗೆಯೂ ಜನ ಕಮೆಂಟ್​ ಮಾಡುತ್ತಾರೆ. ಚಿಕ್ಕ ಹುಡುಗಿಗೆ ಇದನ್ನೆಲ್ಲ ಸಹಿಸಿಕೊಳ್ಳೋಕೆ ಆಗಲ್ಲ. ತುಂಬ ನೋವಾಗುತ್ತದೆ. ಹಾಗಾಗಿ ನಾನು ಅದರ ಬಗ್ಗೆ ಎಷ್ಟೋ ಬಾರಿ ಮಾತನಾಡಬೇಕಾದ ಅನಿವಾರ್ಯತೆ ಎದುರಾಯಿತು. ಕೆಲಸದ ಬಗ್ಗೆ ಕಮೆಂಟ್​ ಮಾಡಿದರೆ ತೊಂದರೆ ಇಲ್ಲ. ಆದರೆ, ನನ್ನ ಬಾಲ್ಯದ ಫೋಟೋ ಬಗ್ಗೆ ಹಾಗೂ ನನ್ನ ಕುಟುಂಬದ ಬಗ್ಗೆ ಕೆಟ್ಟ ಕಮೆಂಟ್​ ಮಾಡುವುದು ಸರಿಯಲ್ಲ’ ಎಂದಿದ್ದಾರೆ ರಶ್ಮಿಕಾ.

‘ನಾನು 19ನೇ ವಯಸ್ಸಿನಲ್ಲಿ ಇದ್ದಾಗಿನಿಂದಲೂ ಈ ಟ್ರೋಲ್​ ಕಾಟ ಶುರುವಾಯಿತು. ಆದರೆ ಈಗ ನಾನು ಈ ವಿಚಾರದಲ್ಲಿ ಕಲ್ಲಾಗಿದ್ದೇನೆ. ಇಂದು ಯಾವುದೇ ಟ್ರೋಲ್​ ಕೂಡ ನನಗೆ ಮುಖ್ಯವಾಗುವುದಿಲ್ಲ. ಅದನ್ನೆಲ್ಲ ನಾನು ತುಂಬ ಹಗುರವಾಗಿ ತೆಗೆದುಕೊಳ್ಳುತ್ತೇನೆ. ಎಲ್ಲ ಸ್ಟಾರ್​ಗಳು ಸಹ ಇದೇ ರೀತಿ ಆಗಿರುತ್ತಾರೆ ಎನಿಸುತ್ತದೆ’ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

ಸದ್ಯ ರಶ್ಮಿಕಾ ಮಂದಣ್ಣ ಕೈಯಲ್ಲಿ ಹಲವು ಸಿನಿಮಾಗಳಿವೆ. ಬಾಲಿವುಡ್​ನ ‘ಮಿಷನ್​ ಮಜ್ನು’ ಮತ್ತು ‘ಗುಡ್​ ಬೈ’ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಸಿದ್ಧಾರ್ಥ್​ ಮಲ್ಹೋತ್ರಾ, ಅಮಿತಾಭ್​ ಬಚ್ಚನ್​ ರೀತಿಯ ದೊಡ್ಡ ಸ್ಟಾರ್​ ನಟರ ಜೊತೆ ತೆರೆಹಂಚಿಕೊಳ್ಳುವ ಅವಕಾಶ ಅವರಿಗೆ ಸಿಕ್ಕಿದೆ. ಟಾಲಿವುಡ್​ನಲ್ಲಿ ಅಲ್ಲು ಅರ್ಜುನ್​ ಜೊತೆ ನಟಿಸಿರುವ ‘ಪುಷ್ಪ’ ಚಿತ್ರ ಈ ವರ್ಷ ಕ್ರಿಸ್​ಮಸ್​ಗೆ ಬಿಡುಗಡೆ ಆಗಲಿದೆ.

ಇದನ್ನೂ ಓದಿ:

ರಶ್ಮಿಕಾ ಮಂದಣ್ಣ ಬಗ್ಗೆ ಅಪ್ಸೆಟ್​ ಆದ ಕುಟುಂಬದವರು; ಸಂದರ್ಶನದಲ್ಲಿ ಅಳಲು ತೋಡಿಕೊಂಡ ನಟಿ

ರಶ್ಮಿಕಾ ಮಂದಣ್ಣ ಸಿನಿಮಾದಲ್ಲಿ ಸೋನು ಸೂದ್​ ವಿಲನ್​? ಫ್ಯಾನ್ಸ್​ ಇದನ್ನು ಸಹಿಸೋದು ಹೇಗೆ?

Published On - 8:12 am, Sat, 7 August 21

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ