ರಶ್ಮಿಕಾ ಮಂದಣ್ಣ ಬಗ್ಗೆ ಅಪ್ಸೆಟ್​ ಆದ ಕುಟುಂಬದವರು; ಸಂದರ್ಶನದಲ್ಲಿ ಅಳಲು ತೋಡಿಕೊಂಡ ನಟಿ

ರಶ್ಮಿಕಾ ಮಂದಣ್ಣ ಬಗ್ಗೆ ಅಪ್ಸೆಟ್​ ಆದ ಕುಟುಂಬದವರು; ಸಂದರ್ಶನದಲ್ಲಿ ಅಳಲು ತೋಡಿಕೊಂಡ ನಟಿ
ರಶ್ಮಿಕಾ ಮಂದಣ್ಣ

Rashmika Mandanna: ವಿಕಾಸ್​ ಬಹ್ಲ್​ ಆ್ಯಕ್ಷನ್​-ಕಟ್​ ಹೇಳುತ್ತಿರುವ  ‘ಗುಡ್​ಬೈ’ ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಹಿರಿಯ ನಟಿ ನೀನಾ ಗುಪ್ತಾ, ನಟ ಪವೈಲ್​ ಗುಲಾಟಿ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

TV9kannada Web Team

| Edited By: Rajesh Duggumane

Aug 05, 2021 | 5:42 PM

ದಕ್ಷಿಣ ಭಾರತ ಹಾಗೂ ಬಾಲಿವುಡ್​ನಲ್ಲಿ ಬಹುಬೇಡಿಕೆಯ ನಟಿಯರ ಸಾಲಿನಲ್ಲಿ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಮುಂಚೂಣಿಯಲ್ಲಿದ್ದಾರೆ. ಕೈಯಲ್ಲಿ ಹಲವು ಬಿಗ್​ ಬಜೆಟ್​ ಚಿತ್ರಗಳನ್ನು ಹೊಂದಿರುವ ಅವರಿಗೆ ಆಫರ್​ಗಳ ಕೊರತೆ ಆಗಿಲ್ಲ. ಇನ್ನೂ ಘೋಷಣೆ ಆಗದ ಹಲವು ಸಿನಿಮಾಗಳಿಗೆ ರಶ್ಮಿಕಾ ನಾಯಕಿ ಎನ್ನುವ ಗುಸುಗುಸು ಕೂಡ ಜೋರಾಗಿದೆ. ಇದರಲ್ಲಿ ಕೆಲವು ನಿಜವಿರಬಹುದು, ಇನ್ನೂ ಕೆಲವು ಸುಳ್ಳಾಗಿರಬಹುದು. ಆದರೆ, ರಶ್ಮಿಕಾಗೆ ಬೇಡಿಕೆ ಹೆಚ್ಚುತ್ತಿದೆ ಎಂಬುದಂತೂ ಸತ್ಯ. ಈ ಮಧ್ಯೆ ರಶ್ಮಿಕಾ ಮಂದಣ್ಣ ಸಂದರ್ಶನದಲ್ಲಿ ಅಚ್ಚರಿಯ ವಿಚಾರ ಒಂದನ್ನು ಹೇಳಿಕೊಂಡಿದ್ದಾರೆ.

ವಿಕಾಸ್​ ಬಹ್ಲ್​ ಆ್ಯಕ್ಷನ್​-ಕಟ್​ ಹೇಳುತ್ತಿರುವ  ‘ಗುಡ್​ಬೈ’ ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಹಿರಿಯ ನಟಿ ನೀನಾ ಗುಪ್ತಾ, ನಟ ಪವೈಲ್​ ಗುಲಾಟಿ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಬಾಲಿವುಡ್​ನಲ್ಲಿ  ಸಿದ್ಧಾರ್ಥ್​ ಮಲ್ಹೋತ್ರಾಗೆ ಜೋಡಿಯಾಗಿ ‘ಮಿಷನ್​ ಮಜ್ನು’ ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಟಾಲಿವುಡ್​ನಲ್ಲಿ ಅಲ್ಲು ಅರ್ಜುನ್​ ಜೊತೆ ರಶ್ಮಿಕಾ ನಟಿಸಿರುವ ‘ಪುಷ್ಪ’ ಚಿತ್ರಕ್ಕೆ ಕೊನೇ ಹಂತದ ಕೆಲಸಗಳು ನಡೆಯುತ್ತಿವೆ. ಈ ಮೂರು ಚಿತ್ರಗಳ ಶೂಟಿಂಗ್​ಗಾಗಿ ರಶ್ಮಿಕಾ ಹೈದರಾಬಾದ್​ನಿಂದ ಮುಂಬೈ, ಮುಂಬೈನಿಂದ ಹೈದರಾಬಾದ್​ಗೆ ಪ್ರಯಾಣಿಸೋದು ಅನಿವಾರ್ಯ ಆಗಿದೆ. ಇದು ಅವರ ಕುಟುಂಬದವರ ಅಸಮಾಧಾನಕ್ಕೆ ಪ್ರಮುಖ ಕಾರಣ.

ಕೊವಿಡ್​ ಎರಡನೇ ಅಲೆ ನಿಧಾನವಾಗಿ ಕಡಿಮೆ ಆಗುತ್ತಿದೆ. ಈ ಬೆನ್ನಲ್ಲೇ ಮೂರನೇ ಅಲೆ ಬರುವ ಮುನ್ಸೂಚನೆ ಸಿಕ್ಕಿದೆ. ಎಲ್ಲ ಕಡೆಗಳಲ್ಲೂ ಕೊವಿಡ್​ ಪ್ರಕರಣಗಳು ನಿಧಾನವಾಗಿ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿಯೂ ಪ್ರಯಾಣ ಮಾಡೋದು ರಶ್ಮಿಕಾಗೆ ಅನಿವಾರ್ಯ. ಇದನ್ನು ಮನೆಯವರು ವಿರೋಧಿಸಿದ್ದಾರೆ.

ಈ ಬಗ್ಗೆ ಸಂದರ್ಶನದಲ್ಲಿ ರಶ್ಮಿಕಾ ಮಾತನಾಡಿದ್ದಾರೆ. ‘ಬೇರೆಬೇರೆ ಸಿನಿಮಾಗಳ ಶೂಟಿಂಗ್​ ಪಾಲ್ಗೊಳ್ಳುತ್ತಿರುವುದಕ್ಕೆ ನನ್ನ ಕುಟುಂಬ ಅಸಮಾಧಾನ ಹೊಂದಿದೆ. ಅವರ ಕಾಳಜಿ ನನಗೆ ಅರ್ಥ ಆಗುತ್ತದೆ. ಆದರೆ, ಶೂಟಿಂಗ್​ ಮುಂದೂಡುವುದು ನನ್ನ ಕೈನಲ್ಲಿಲ್ಲ. ಶೂಟಿಂಗ್​ ಮುಂದೂಡಿದರೆ ಸಾಕಷ್ಟು ಜನರಿಗೆ ತೊಂದರೆ ಆಗುತ್ತದೆ’ ಎಂದಿದ್ದಾರೆ ರಶ್ಮಿಕಾ.

ಇದನ್ನೂ ಓದಿ: Rashmika Mandanna: ಅಮಿತಾಭ್ ಬಚ್ಚನ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದಕ್ಕೆ ರಶ್ಮಿಕಾ ಮಂದಣ್ಣ ಹೇಳಿದ್ದೇನು?

Follow us on

Related Stories

Most Read Stories

Click on your DTH Provider to Add TV9 Kannada