ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ‘ಹೊಂಬಾಳೆ ಫಿಲ್ಮ್ಸ್’ (Hombale Films) ಮೂಲಕ ಶುಕ್ರವಾರ (ಆ.6) ಹೊಸ ಸಿನಿಮಾ ಘೋಷಣೆ ಆಗಲಿದೆ. ಈಗಾಗಲೇ ಕೆಜಿಎಫ್: ಚಾಪ್ಟರ್ 2, (KGF Chapter 2) ಸಲಾರ್ ರೀತಿಯ ದೈತ್ಯ ಸಿನಿಮಾಗಳನ್ನು ನಿರ್ಮಿಸುತ್ತಿರುವ ನಿರ್ಮಾಪಕ ವಿಜಯ್ ಕಿರಗಂದೂರು (Vijay Kiraganduru) ಅವರು ಈಗ 11ನೇ ಸಿನಿಮಾ ನಿರ್ಮಾಣಕ್ಕೆ ಸಜ್ಜಾಗಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾ ಮೂಲಕ ಸಡನ್ ಆಗಿ ಸುದ್ದಿ ನೀಡಲಾಗಿದೆ. ಅದರಲ್ಲಿ ಬರೆದಿರುವ ‘ನಿನ್ನೊಳಗಿನ ಕಿಚ್ಚು ನಿಮ್ಮನ್ನು ಸುಡದಿರಲಿ’ ಎಂಬ ಒಂದು ಸಾಲು ಗಮನ ಸೆಳೆಯುತ್ತಿದೆ.
“𝐋𝐞𝐭 𝐭𝐡𝐞 𝐅𝐢𝐫𝐞 𝐰𝐢𝐭𝐡𝐢𝐧 𝐘𝐨𝐮 𝐧𝐨𝐭 𝐁𝐮𝐫𝐧 𝐘𝐨𝐮”.
Unveiling Title and First Look of #Hombale11 at 11:43 AM tomorrow.@VKiragandur @HombaleFilms @HombaleGroup pic.twitter.com/lqjYQv8rKg
— Hombale Films (@hombalefilms) August 5, 2021
‘ಹೊಂಬಾಳೆ ಫಿಲ್ಮ್ಸ್’ ಕಡೆಯಿಂದ ಯಾವುದೇ ಹೊಸ ಸುದ್ದಿ ಬರುವುದಿದ್ದರೂ ಒಂದು ದಿನ ಮುಂಚಿತವಾಗಿ ತಿಳಿಸಲಾಗುತ್ತದೆ. ಆದರೆ ಆ ಸಂಪ್ರದಾಯವನ್ನು ಈಗ ನಿರ್ಮಾಪಕರು ಮುರಿದಿದ್ದಾರೆ. ಯಾವುದೇ ಸೂಚನೆ ನೀಡದೇ ಸೋಶಿಯಲ್ ಮೀಡಿಯಾ ಮೂಲಕ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಇದು ಸಿನಿಪ್ರಿಯರಿಗೆ ಅಚ್ಚರಿ ಮೂಡಿಸಿದೆ. ‘ಕಿಚ್ಚು’ ಎಂಬ ಪದ ಈ ಪೋಸ್ಟರ್ನಲ್ಲಿ ಹೈಲೈಟ್ ಆಗಿರುವುದರಿಂದ ಕಿಚ್ಚ ಸುದೀಪ್ ಜೊತೆ ‘ಹೊಂಬಾಳೆ ಫಿಲ್ಮ್ಸ್’ ಕೈ ಜೋಡಿಸಲಿದೆಯಾ ಎಂಬ ಅನುಮಾನ ಬಲವಾಗಿದೆ. ಈ ಬಗ್ಗೆ ಶುಕ್ರವಾರ ಬೆಳಗ್ಗೆ 11.43ಕ್ಕೆ ಉತ್ತರ ಸಿಗಲಿದೆ.
ಪ್ರಸ್ತುತ ಈ ಸಂಸ್ಥೆಯ ಅಡಿಯಲ್ಲಿ ಬಹುನಿರೀಕ್ಷಿತ ಸಿನಿಮಾಗಳು ಮೂಡಿಬರುತ್ತಿವೆ. ಯಶ್ ನಟನೆಯ ‘ಕೆಜಿಎಫ್: ಚಾಪ್ಟರ್ 2’ ಹಾಗೂ ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ಕೆಲಸಗಳು ಬಿರುಸಿನಿಂದ ಸಾಗಿವೆ. ಈ ಎರಡೂ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶಕರು. ಶ್ರೀಮುರಳಿ ನಟನೆಯ ‘ಭಗೀರ’ ಸೆಟ್ಟೇರಬೇಕಿದೆ. ಕೆಲವೇ ದಿನಗಳ ಹಿಂದೆ ಪುನೀತ್ ರಾಜ್ಕುಮಾರ್ ಮತ್ತು ಪವನ್ ಕುಮಾರ್ ಕಾಂಬಿನೇಷನ್ನ ‘ದ್ವಿತ್ವ’ ಚಿತ್ರದ ಶೀರ್ಷಿಕೆ ಮತ್ತು ಫಸ್ಟ್ಲುಕ್ ಲಾಂಚ್ ಮಾಡಲಾಗಿತ್ತು. ಈ ನಿರ್ಮಾಣ ಸಂಸ್ಥೆಯ 10ನೇ ಚಿತ್ರವಾಗಿ ರಕ್ಷಿತ್ ಶೆಟ್ಟಿ ನಾಯಕತ್ವದ ‘ರಿಚರ್ಡ್ ಆ್ಯಂಟೊನಿ’ ಘೋಷಣೆ ಆಗಿತ್ತು. ಈಗ ಇದ್ದಕ್ಕಿದಂತೆಯೇ 11ನೇ ಸಿನಿಮಾ ಕುರಿತು ‘ಹೊಂಬಾಳೆ ಫಿಲ್ಮ್ಸ್’ ಕೌತುಕ ಮೂಡಿಸಿದೆ.
ಕೊರೊನಾ ವೈರಸ್ ಕಾರಣದಿಂದ ‘ಕೆಜಿಎಫ್: ಚಾಪ್ಟರ್ 2’ ಬಿಡುಗಡೆ ದಿನಾಂಕ ಮುಂದೂಡಿಕೆ ಆಗಿದೆ. ಹೊಸ ರಿಲೀಸ್ ಡೇಟ್ ಯಾವಾಗ ಘೋಷಣೆ ಆಗಲಿದೆ ಎಂದು ಸಿನಿಪ್ರಿಯರು ಕಾಯುತ್ತಿದ್ದಾರೆ. ‘ಹೊಂಬಾಳೆ ಫಿಲ್ಮ್ಸ್’ ಕಡೆಯಿಂದ ಆ ಬಗ್ಗೆ ಏನಾದರೂ ಹೊಸ ನ್ಯೂಸ್ ಸಿಗಬಹುದೇ ಎಂದು ಕಾದಿದ್ದ ಎಲ್ಲರಿಗೂ 11ನೇ ಸಿನಿಮಾದ ಸುದ್ದಿ ನಿಜಕ್ಕೂ ಅಚ್ಚರಿ ಮೂಡಿಸಿದೆ. ಈ ಸಿನಿಮಾದ ಹೀರೋ ಯಾರು? ಫಸ್ಟ್ಲುಕ್ ಹೇಗಿರಲಿದೆ? ಯಾರು ನಿರ್ದೇಶನ ಮಾಡಲಿದ್ದಾರೆ? ಶೀರ್ಷಿಕೆ ಏನು ಎಂಬಿತ್ಯಾದಿ ಪ್ರಶ್ನೆಗಳು ಈಗ ಎಲ್ಲ ಮನದಲ್ಲಿ ಕೊರೆಯುತ್ತಿವೆ.
ಇದನ್ನೂ ಓದಿ:
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ‘ದ್ವಿತ್ವ’ ಚಿತ್ರಕ್ಕೆ ನಾಯಕಿಯಾದ ತ್ರಿಷಾ ಕೃಷ್ಣನ್
‘ಕೆಜಿಎಫ್’ ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದ ಮಾತಿನಿಂದ ಮುಗಿಯಿತು ‘ಕಿರಿಕ್ ಪಾರ್ಟಿ’ ವಿವಾದ