ಕನ್ನಡದ ‘ಪಿಂಕಿ ಎಲ್ಲಿ?’ ಚಿತ್ರ ಮೆಲ್ಬರ್ನ್ ಭಾರತೀಯ ಚಲನಚಿತ್ರೋತ್ಸವದ ಪ್ರಶಸ್ತಿ ಸುತ್ತಿಗೆ ಆಯ್ಕೆ

IFFM: ಮೆಲ್ಬರ್ನ್ ಭಾರತೀಯ ಚಲನಚಿತ್ರೋತ್ಸವದ ಪ್ರಶಸ್ತಿ ಸುತ್ತಿಗೆ ಕನ್ನಡದ ‘ಪಿಂಕಿ ಎಲ್ಲಿ’ ಆಯ್ಕೆಯಾಗಿದ್ದು, ಹಲವು ವಿಭಾಗಗಳಲ್ಲಿ ಸ್ಪರ್ಧಿಸಲಿದೆ. ಪ್ರಶಸ್ತಿ ಸಮಾರಂಭವು ಆಗಸ್ಟ್ 20ರಂದು ನಡೆಯಲಿದೆ.

ಕನ್ನಡದ ‘ಪಿಂಕಿ ಎಲ್ಲಿ?’ ಚಿತ್ರ ಮೆಲ್ಬರ್ನ್ ಭಾರತೀಯ ಚಲನಚಿತ್ರೋತ್ಸವದ ಪ್ರಶಸ್ತಿ ಸುತ್ತಿಗೆ ಆಯ್ಕೆ
ಸ್ಥಳ್​ಪುರಾಣ್, ಪಿಂಕಿ ಎಲ್ಲಿ ಹಾಗೂ ಫೈರ್ ಇನ್​ ದಿ ಮೌಂಟೇನ್ ಚಿತ್ರದ ಪೋಸ್ಟರ್​ಗಳು
Follow us
TV9 Web
| Updated By: shivaprasad.hs

Updated on: Aug 05, 2021 | 5:46 PM

ಮೆಲ್ಬರ್ನ್ ಭಾರತೀಯ ಚಲನಚಿತ್ರೋತ್ಸವ- 2021(ಐಎಫ್​ಎಫ್​ಎಂ)ರ ಅಂತಿಮ ಪ್ರಶಸ್ತಿ ಸುತ್ತಿಗೆ ಆಯ್ಕೆಯಾದ ಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಕನ್ನಡದ ‘ಪಿಂಕಿ ಎಲ್ಲಿ’ ಚಿತ್ರ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಪಿಂಕಿ ಎಲ್ಲಿ ಚಿತ್ರವು ಅತ್ಯುತ್ತಮ ಸ್ವತಂತ್ರ ಚಲನ ಚಿತ್ರ ಹಾಗೂ ಅತ್ಯುತ್ತಮ ನಿರ್ದೇಶಕ ವಿಭಾಗದಲ್ಲಿ ಸ್ಪರ್ಧಿಸಲಿದೆ. ಹನ್ನೆರಡನೇ ವರ್ಷದ ಚಿತ್ರೋತ್ಸವದ ಪಟ್ಟಿಯನ್ನು ಮೆಲ್ಬರ್ನ್​ನ ವಿಕ್ಟೋರಿಯಾ ಸರ್ಕಾರವು ಬಿಡುಗಡೆಗೊಳಿಸಿದ್ದು, ಪ್ರಶಸ್ತಿ ಸಮಾರಂಭವು ಆನ್​ಲೈನ್​ನಲ್ಲಿ ನಡೆಯಲಿದೆ ಎಂದು ತಿಳಿಸಲಾಗಿದೆ. ಹಿಂದಿಯ ಲೂಡೊ, ಶೆರ್ನಿ ಚಿತ್ರಗಳು, ಮಲಯಾಳಂನ ದಿ ಗ್ರೇಟ್ ಇಂಡಿಯನ್ ಕಿಚನ್, ತಮಿಳಿನ ‘ಸೂರರೈ ಪೊಟ್ರು’ ಮೊದಲಾದ ಚಿತ್ರಗಳು ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ರೀಚಾ ಛಡ್ಡಾ ಹಾಗೂ ನಿರ್ದೇಶಕ ಓನಿರ್ ಐಎಫ್​ಎಫ್​ಎಂ ಚಿತ್ರೋತ್ಸವಕ್ಕೆ ತೀರ್ಪುಗಾರರಾಗಿದ್ದಾರೆ. ಭಾರತದ ವಿವಿಧ ಭಾಷೆಯ ನೂರಕ್ಕೂ ಅಧಿಕ ಅತ್ಯುತ್ತಮ ಚಿತ್ರಗಳನ್ನು ಆಗಸ್ಟಟ್ 12ರಿಂದ ಆಗಸ್ಟ್ 20ರ ನಡುವೆ ಪ್ರದರ್ಶಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ. ಇತ್ತೀಚೆಗೆ ಒಟಿಟಿ ಮಾದರಿಯ ಚಿತ್ರಗಳು ಅಧಿಕವಾಗಿರುವ ಕಾರಣ ಅದಕ್ಕಾಗಿ ಪ್ರತ್ಯೇಕ ಪ್ರಶಸ್ತಿಯನ್ನು ಆಯೋಜಿಸಿರುವ ಆಯೋಜಕರು, ಅದರಲ್ಲಿ ಅತ್ಯುತ್ತಮ ಸೀರೀಸ್, ಸೀರೀಸ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಉತ್ತಮ ನಟ ಹಾಗೂ ಉತ್ತಮ ನಟಿ ಪ್ರಶಸ್ತಿಯನ್ನು ಘೋಷಿಸಿದ್ದಾರೆ.

ಅಂತಿಮ ಸುತ್ತಿಗೆ ಆಯ್ಕೆಯಾದ ಚಿತ್ರಗಳ ಪಟ್ಟಿ ಇಲ್ಲಿದೆ:

ಅತ್ಯುತ್ತಮ ಚಿತ್ರ:

ಕಾಯಟ್ಟಮ್ (ಮಲಯಾಳಂ) – ಸನಲ್ ಕುಮಾರ್ ಸಸಿಧರನ್(ನಿರ್ದೇಶನ)

ಲೂಟ್​ಕೇಸ್ (ಹಿಂದಿ)- ರಾಜೇಶ್ ಕೃಷ್ಣನ್

ಲುಡೊ(ಹಿಂದಿ)- ಅನುರಾಗ್ ಬಸು

ಶೆರ್ನಿ (ಹಿಂದಿ)- ಅಮಿತ್ ಮಸುರ್ಕರ್

ಸೂರರೈ ಪೊಟ್ರು(ತಮಿಳು)- ಸುಧಾ ಕೊಂಗರಾ

ತಷೇರ್ಘಾರ್(ಬೆಂಗಾಲಿ)- ಸುದಿಪ್ತೊ ರಾಯ್

ಅತ್ಯುತ್ತಮ ಸ್ವತಂತ್ರ ಚಿತ್ರಗಳು:

ಪಿಂಕಿ ಎಲ್ಲಿ? (ಕನ್ನಡ)- ಪೃಥ್ವಿ ಕೊಣ್ಣನೂರ್

ಫೈರ್ ಇನ್ ದಿ ಮೌಂಟೇನ್ಸ್- ಅಜಿತ್ ಪಾಲ್ ಸಿಂಗ್

ಗಾಡ್ ಇನ್ ದಿ ಬಾಲ್ಕನಿ- ಬಿಸ್ವಜೀತ್ ಬೋರಾ

ನಾಸಿರ್- ಅರುಣ್ ಕಾರ್ತಿಕ್

ಸೆತ್ತುಮಾನ್- ತಮಿಳ್

ಸ್ಥಳ್​ಪುರಾಣ್- ಅಕ್ಷಯ್ ಇಂಡಿಕಾರ್

ದಿ ಗ್ರೇಟ್ ಇಂಡಿಯನ್ ಕಿಚನ್- ಜಿಯೊ ಬೇಬಿ

ಅತ್ಯುತ್ತಮ ನಿರ್ದೇಶಕ: 

ಪೃಥ್ವಿ ಕೊಣ್ಣನೂರ್- ಪಿಂಕಿ ಎಲ್ಲಿ?

ಅಜಿತ್ ಪಾಲ್ ಸಿಂಗ್- ಫೈರ್ ಇನ್ ದಿ ಮೌಂಟೇನ್ಸ್

ಅಕ್ಷಯ್ ಇಂಡಿಕಾರ್- ಸ್ಥಳ್​ಪುರಾಣ್

ಅಮಿತ್ ಮಸುರ್ಕರ್- ಶೆರ್ನಿ

ಅನುರಾಗ್ ಬಸು- ಲುಡೊ

ಅರುಣ್ ಕಾರ್ತಿಕ್- ನಾಸಿರ್

ಬಿಸ್ವಜೀತ್ ಬೋರಾ- ಗಾಡ್ ಇನ್ ದಿ ಬಾಲ್ಕನಿ

ಜಿಯೊ ಬೇಬಿ- ದಿ ಗ್ರೇಟ್ ಇಂಡಿಯನ್ ಕಿಚನ್

ಸನಲ್ ಕುಮಾರ್- ಸಸಿಧರನ್ ಕಾಯಟ್ಟಮ್ ಸುಧಾ ಕೊಂಗರಾ- ಸೂರರೈ ಪೊಟ್ರು

ಅತ್ಯುತ್ತಮ ಸೀರೀಸ್​ಗಳು:

ಬಂದಿಶ್ ಬ್ಯಾಂಡಿಟ್ಸ್

ಚುರೈಲ್ಸ್ ಮಿರ್ಜಾಪುರ್ ಸೀಸನ್ 2

ಮಿಸ್​ಮ್ಯಾಚ್ಡ್

ದಿ ಫ್ಯಾಮಿಲಿ ಮ್ಯಾನ್ ಸೀಸನ್ 2

ಇನ್ನೂ ಹಲವಾರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಭಾರತದ ವಿವಿಧ ಭಾಷೆಯ ಚಿತ್ರಗಳು ಪ್ರಶಸ್ತಿ ರೇಸ್​ನಲ್ಲಿವೆ.

ಇದನ್ನೂ ಓದಿ: 

ಬಾಂಗ್ಲಾದೇಶದಲ್ಲಿ ಭಗವಾನ್ ವಿಷ್ಣುವಿನ ಬೆಲೆಬಾಳುವ ವಿಗ್ರಹ ಪತ್ತೆ ; ಮಣ್ಣು ಅಗೆಯುವಾಗ ಸಿಕ್ಕರೂ ಸುಮ್ಮನಿದ್ದ ಶಿಕ್ಷಕ

Sanya Malhotra: ಮಾಂಸಾಹಾರವನ್ನು ತ್ಯಜಿಸಿ ಸಸ್ಯಾಹಾರಿಯಾದ ದಂಗಲ್ ನಟಿ; ಅವರ ಈ ನಿರ್ಧಾರಕ್ಕೆ ಕಾರಣವೇನು?

(Kannada M0vie Pinki Elli selected for Melbourne Indian Film Festival Ludo and Sherni also selected for Final)

Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್