ಬಾಂಗ್ಲಾದೇಶದಲ್ಲಿ ಭಗವಾನ್ ವಿಷ್ಣುವಿನ ಬೆಲೆಬಾಳುವ ವಿಗ್ರಹ ಪತ್ತೆ ; ಮಣ್ಣು ಅಗೆಯುವಾಗ ಸಿಕ್ಕರೂ ಸುಮ್ಮನಿದ್ದ ಶಿಕ್ಷಕ

ವಿಷ್ಣುವಿನ ವಿಗ್ರಹವನ್ನು ಅಬು ಯೂಸುಫ್​ ಎಂಬ ಹೆಸರಿನ ಶಿಕ್ಷಕರ ಬಳಿಯಿಂದ ವಶಪಡಿಸಿಕೊಳ್ಳಲಾಗಿದೆ. ಇವರಿಗೆ ಒಂದೂವರೆ ತಿಂಗಳ ಹಿಂದೆಯೇ ವಿಗ್ರಹ ಸಿಕ್ಕಿತ್ತು ಎನ್ನಲಾಗಿದೆ.

ಬಾಂಗ್ಲಾದೇಶದಲ್ಲಿ ಭಗವಾನ್ ವಿಷ್ಣುವಿನ ಬೆಲೆಬಾಳುವ ವಿಗ್ರಹ ಪತ್ತೆ ; ಮಣ್ಣು ಅಗೆಯುವಾಗ ಸಿಕ್ಕರೂ ಸುಮ್ಮನಿದ್ದ ಶಿಕ್ಷಕ
ಪ್ರಾತಿನಿಧಿಕ ಚಿತ್ರ

ಢಾಕಾ: ಸುಮಾರು 1000 ವರ್ಷಗಳಷ್ಟು ಹಳೆಯದು ಎನ್ನಲಾದ, ಶ್ರೀವಿಷ್ಣುವಿನ ಕಪ್ಪುಕಲ್ಲಿನ ವಿಗ್ರಹ (Black Stone Statue) ವನ್ನು ಬಾಂಗ್ಲಾದೇಶ ಪೊಲೀಸ (Bangladesh Police)ರು ವಶಪಡಿಸಿಕೊಂಡಿದ್ದಾರೆ. ಈ ವಿಗ್ರಹವನ್ನು ಅವರು ಕೊಮಿಲ್ಲಾ ಜಿಲ್ಲೆಯ ಬಾರೋ ಗೋಲಿ ಎಂಬ ಗ್ರಾಮದ ಶಿಕ್ಷಕ (Teacher)ರೊಬ್ಬರಿಂದ ವಶಪಡಿಸಿಕೊಂಡಿದ್ದಾರೆ ಎಂದು ಡೇಲಿ ಸ್ಟಾರ್​ ಎಂಬ ನ್ಯೂಸ್​ ಪೇಪರ್​ ವರದಿ ಮಾಡಿದೆ.

ವಿಷ್ಣುವಿನ ಈ ವಿಗ್ರಹ 23 ಇಂಚ್​ಗಳಷ್ಟು ಎತ್ತರವಿದ್ದು, 9.5 ಇಂಚ್​ಗಳಷ್ಟು ಅಗಲವಿದೆ. ಹಾಗೇ, 12 ಕೆಜಿ ತೂಕ ಹೊಂದಿದೆ. ಈ ಬಗ್ಗೆ ದೌಡ್ಕಂಡಿ ಪೊಲೀಸ್​ ಠಾಣೆಯ ಅಧಿಕಾರಿ ನಝರ್​ಉಲ್​ ಇಸ್ಲಾಂ ಮಾಹಿತಿ ನೀಡಿದ್ದು, ವಿಷ್ಣುವಿನ ವಿಗ್ರಹವನ್ನು ಅಬು ಯೂಸುಫ್​ ಎಂಬ ಹೆಸರಿನ ಶಿಕ್ಷಕರ ಬಳಿಯಿಂದ ವಶಪಡಿಸಿಕೊಳ್ಳಲಾಗಿದೆ. ಇವರಿಗೆ ಒಂದೂವರೆ ತಿಂಗಳ ಹಿಂದೆಯೇ ವಿಗ್ರಹ ಸಿಕ್ಕಿತ್ತು. ಆದರೆ ಅವರು ನಮಗೆ ಮಾಹಿತಿ ನೀಡದೆ, ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಅವರ ಬಳಿ ವಿಗ್ರಹ ಇದೆ ಎಂಬ ಪಕ್ಕಾ ಮಾಹಿತಿ ನಮಗೆ ಬೇರೆ ಮೂಲಗಳಿಂದ ಬಂದ ಹಿನ್ನೆಲೆಯಲ್ಲಿ, ಅವರ ಮನೆಗೆ ಹೋಗಿ ವಶಪಡಿಸಿಕೊಳ್ಳಲಾಗಿದೆ ಎಂದೂ ಹೇಳಿದ್ದಾರೆ. ಇನ್ನು ತಮಗೆ ವಿಗ್ರಹ ಹೇಗೆ ಸಿಕ್ಕಿತು ಎಂಬುದನ್ನು ಶಿಕ್ಷಕ ಯೂಸುಫ್​ ತಿಳಿಸಿದ್ದಾರೆ. ಸುಮಾರು 20-22 ದಿನಗಳ ಹಿಂದೆ ಯಾವುದೋ ಒಂದು ಕೆಲಸಕ್ಕೆಂದು ಮಣ್ಣು ಅಗೆಯುತ್ತಿರುವಾಗ ವಿಗ್ರಹ ಸಿಕ್ಕಿತು. ಆದರೆ ನಮ್ಮ ಕೆಲಸದ ಮಧ್ಯೆ ಆ ವಿಷಯವನ್ನು ಪೊಲೀಸರಿಗೆ ತಿಳಿಸುವುದನ್ನೇ ಮರೆತೆವು ಎಂದಿದ್ದಾರೆ.

ಇದೀಗ ಪತ್ತೆಯಾಗಿರುವ ಭಗವಾನ್​ ವಿಷ್ಣುವಿನ ವಿಗ್ರಹ ಅತ್ಯಂತ ಬೆಲೆಬಾಳುವಂಥದ್ದಾಗಿದೆ. ಸುಮಾರು 1000 ವರ್ಷ ಹಳೆಯದು ಎಂದು ನೋಡಿದರೇ ಅನ್ನಿಸುತ್ತಿದೆ. ಅದನ್ನು ಸರಿಯಾಗಿ ಸಂರಕ್ಷಣೆ ಮಾಡುವ ಸಲುವಾಗಿ, ಹೆಚ್ಚಿನ ಅಧ್ಯಯನಕ್ಕಾಗಿ ತಕ್ಷಣವೇ ಮೈನಾಮತಿ ಮ್ಯೂಸಿಯಂಗೆ ಹಸ್ತಾಂತರಿಸಿದರೆ ಒಳ್ಳೆಯದು ಎಂದು ಚಟ್ಟೋಗ್ರಾಮ್ ವಿಭಾಗೀಯ ಪುರಾತತ್ವ ಇಲಾಖೆಯ ಮಾಜಿ ಪ್ರಾದೇಶಿಕ ನಿರ್ದೇಶಕ ಅತೌರ್​ ರೆಹಮಾನ್​ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪ್ರತಿಪಕ್ಷಗಳು ರಾಜಕೀಯ ಲಾಭಕ್ಕಾಗಿ ಸೆಲ್ಫ್ ಗೋಲ್ ಹೊಡೆಯುತ್ತಿವೆ: ಪ್ರಧಾನಿ ನರೇಂದ್ರ ಮೋದಿ

Tokyo Olympics: ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಎರಡನೇ ಬೆಳ್ಳಿ ಪದಕ! ಬೆಳ್ಳಿಗೆ ಮುತ್ತಿಕ್ಕಿದ ಕುಸ್ತಿಪಟು ರವಿ ದಹಿಯಾ

Click on your DTH Provider to Add TV9 Kannada