ಪಾಕಿಸ್ತಾನದ ಒಂದು ಪ್ರಾಂತ್ಯದಲ್ಲಿ ಅರೋಪಕ್ಕೊಳಗಾದವನು ಅನಾಗರಿಕ ಪದ್ದತಿಯಿಂದ ತನ್ನ ಅಮಾಯಕತೆ ಸಾಬೀತು ಮಾಡಬೇಕು
ಆರೋಪಿಗಳು, ತೆಹ್ಸೀಬ್ ಹೆಸರಿನ ಕುರಿ ಕಾಯುವ ಬಾಲಕನೆ ಮೇಲೆ ಚಹಾದ ಕೆಟಲ್ ಕದ್ದ ಆರೋಪ ಹೊರಿಸಿ ಅವನಿಗೆ ಹಾಗೆ ಮಾಡಲು ಬಲವಂತ ಮಾಡಿರುವರೆಂದು ಅವನ ತಂದೆ ಜಾನ್ ಮುಹಮ್ಮದ್ ದೂರು ಸಲ್ಲಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಡೆರಾ ಘಾಜಿ ಖಾನ್, ಪಾಕಿಸ್ತಾನ: ಒಂದು ಚಿಕ್ಕ ಮಗುವಿಗೆ ತಾನು ಕಳ್ಳತನ ಮಾಡಿಲ್ಲ ಎಂದು ಸಾಬೀತು ಮಾಡಲು ಕೆಂಡದಂತೆ ಕಾದ ಕೊಡಲಿಯ ನೆತ್ತಿಯನ್ನು ನೆಕ್ಕುವಂತೆ ಮಾಡಿದ ಮೂವರು ನರರೂಪಿ ರಾಕ್ಷಸರನ್ನು ಡೆರಾ ಘಾಜಿ ಖಾನ್ ಎಂಬಲ್ಲಿ ಬಂಧಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಸದರಿ ಮಾಧ್ಯಮದಲ್ಲಿ ವರದಿಯಾಗಿರುವ ಹಾಗೆ ಫಜಾಲಾ ಕಛ್ ತುಮನ್ ಬುಜ್ದಾರ್ನ ಬಾರ್ಡರ್ ಮಿಲಿಟರಿ ಪೊಲೀಸ್ (ಬಿ ಎಮ್ ಪಿ), ಒಬ್ಬ ಚಿಕ್ಕ ಬಾಲಕನನ್ನು ಕಳ್ಳತನದ ಪ್ರಕರಣವೊಂದರಲ್ಲಿ ಅಮಾಯಕತೆ ಸಾಬೀತು ಮಾಡಲು ಕಾದ ಕೊಡಲಿಯ ತಲೆ ಭಾಗವನ್ನು ನೆಕ್ಕುವಂತೆ ಬಲವಂತ ಮಾಡಿದ ಆರೋಪದಲ್ಲಿ ಮೂವರನ್ನು ಬಂಧಿಸಿದ್ದಾರೆ.
ಆರೋಪಿಗಳು, ತೆಹ್ಸೀಬ್ ಹೆಸರಿನ ಕುರಿ ಕಾಯುವ ಬಾಲಕನೆ ಮೇಲೆ ಚಹಾದ ಕೆಟಲ್ ಕದ್ದ ಆರೋಪ ಹೊರಿಸಿ ಅವನಿಗೆ ಹಾಗೆ ಮಾಡಲು ಬಲವಂತ ಮಾಡಿರುವರೆಂದು ಅವನ ತಂದೆ ಜಾನ್ ಮುಹಮ್ಮದ್ ದೂರು ಸಲ್ಲಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ತೆಹ್ಸೀಬ್ ನಾಲಿಗೆಗೆ ತೀವ್ರ ಸ್ವರೂಪದ ಸುಟ್ಟ ಗಾಯಗಳಾಗಿವೆ ಮತ್ತು ಚಿಕಿತ್ಸೆಗಾಗಿ ಅವನನ್ನು ತೆಹ್ಸೀಲ್ ಹೆಡ್ಕ್ವಾರ್ಟರ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಸಿರಾಜ್, ಅಬ್ದುಲ್ ರಹೀಮ್ ಮತ್ತು ಮುಹಮ್ಮದ್ ರಹೀಮ್ ಹೆಸರಿನ ಅರೋಪಿಗಳನ್ನು ಬಂಧಿಸಲಾಗಿದೆ. ವರದಿಯಲ್ಲಿ ಒದಗಿಸಲಾಗಿರುವ ಮಾಹಿತಿಯ ಪ್ರಕಾರ ತಖ್ತ್ ಸುಲೈಮಾನ್ ತೆಹ್ಸಿಲ್ ಪ್ರಾಂತ್ಯದ ಬಲೂಚ್ ಬುಡಕಟ್ಟು ಜನಾಂಗದಲ್ಲಿ ವ್ಯಕ್ತಿಯೊಬ್ಬನ ಅಮಾಯಕತೆ ಸಾಬೀತು ಮಾಡಲು ಅತ್ಯಂತ ಕಠೋರ ಮತ್ತು ಅನಾಗರಿಕ ನೀರು ಮತ್ತು ಬೆಂಕಿಯ ಪದ್ಧತಿಯನ್ನು ಈಗಲೂ ಬಳಸಲಾಗುತ್ತಿದೆ. ಹಾಗೆ ಆರೋಪಕ್ಕೊಳಗಾದ ವ್ಯಕ್ತಿ ಒಂದು ನಿರ್ದಿಷ್ಟ ಅವಧಿವರೆಗೆ ನೀರಿನಲ್ಲಿದ್ದು ಬದುಕುಳಿದನೆಂದರೆ ಅವನನ್ನು ಅಮಾಯಕ ಎಂದು ಪರಿಗಣಿಸಲಾಗುತ್ತದೆ. ಅ ಸಮಯಕ್ಕಿಂತ ಮೊದಲೇ ಅವನು ಹೊರಬಂದರೆ ಅವನು ತಪ್ಪಿತಸ್ಥ ಎಂದು ಪರಿಗಣಿಸಲಾಗುತ್ತದೆ.
ಕಾಯಿಸಿದ ಕಬ್ಬಿಣವನ್ನು ನೆಕ್ಕಲು ಹಿಂಜರಿಯದಿದ್ದರೆ ಅವನನ್ನು ನಿರ್ದೋಷಿ ಅಂತ ಟ್ರೀಟ್ ಮಾಡಿತ್ತಾರೆ, ಅವನೇನಾದರೂ ಭಯಪಟ್ಟು ಬೆಂಕಿ ದಾಟಲು ಅಥವಅ ಕಾಯಿಸಿದ ಕಬ್ಬಿಣ ನೆಕ್ಕಲು ನಿರಾಕರಿಸಿದರೆ ಅವನು ಅಪರಾಧಿ.
ಪಾಕಿಸ್ತಾನದಲ್ಲಿ ಮಕ್ಕಳ ಮೇಲೆ ಅಪರಾಧ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬರುತ್ತಿದೆ ಎಂದು ಅಲ್ಲಿನ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದರಲ್ಲಿ ಮಕ್ಕಳ ಲೈಂಗಿಕ ಶೋಷಣೆ, ಅಪಹರಣ ಮತ್ತು ಬಾಲ್ಯ ವಿವಾಹ ಸೇರಿವೆ. 2020 ರಿಂದ ಪಾಕಿಸ್ತಾನದಲ್ಲಿ ಪ್ರತಿದಿನ ಸರಾಸರಿ 8 ಮಕ್ಕಳ ಇಂಥ ಶೋಷಣಗಳು ನಡೆಯುತ್ತಿವೆ. ‘2020ರ ಕ್ರೂರ ನಂಬರ್ಗಳು’ ಶೀರ್ಷಿಕೆಯಡಿ ಪ್ರಕಟವಾದ ಅಂಕಿ-ಅಂಶಗಳ ಸಂಗ್ರಹದಲ್ಲಿ ಈ ವಿಷಯ ಬಯಲಾಗಿದೆ.
ಇದನ್ನೂ ಓದಿ: Pakistan: ಭಾರತದ ವಾಯು ಗಡಿಯಲ್ಲಿ ಸಂಚರಿಸಲು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿಮಾನಕ್ಕೆ ಅನುಮತಿ