Sign In

By signing in or creating an account, you agree with Associated Broadcasting Company's Terms & Conditions and Privacy Policy.

ವ್ಯರ್ಥವಾಗಲಿದೆ ಒಂದು ಲಕ್ಷಕ್ಕೂ ಅಧಿಕ ಗ್ರೀನ್ ಕಾರ್ಡ್‌, ಅಮೆರಿಕದಲ್ಲಿರುವ ವಲಸಿಗರಿಗೆ ಅವಕಾಶ ತಪ್ಪುವ ಚಿಂತೆ

Green Card: ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳು ಅಥವಾ ಯುಎಸ್‌ಸಿಐಎಸ್‌ ಪ್ರಕಾರ ಅವರು 1,00,000 ಕ್ಕಿಂತ ಹೆಚ್ಚು ಗ್ರೀನ್ ಕಾರ್ಡ್‌ಗಳನ್ನು ವ್ಯರ್ಥ ಮಾಡುತ್ತಾರೆ ಎಂದು ಸೂಚಿಸುತ್ತದೆ

ವ್ಯರ್ಥವಾಗಲಿದೆ ಒಂದು ಲಕ್ಷಕ್ಕೂ ಅಧಿಕ ಗ್ರೀನ್ ಕಾರ್ಡ್‌, ಅಮೆರಿಕದಲ್ಲಿರುವ ವಲಸಿಗರಿಗೆ ಅವಕಾಶ ತಪ್ಪುವ ಚಿಂತೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Aug 06, 2021 | 4:54 PM

ವಾಷಿಂಗ್ಟನ್: ಸುಮಾರು ಒಂದು ಲಕ್ಷ ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್‌ಗಳು ಎರಡು ತಿಂಗಳಲ್ಲಿ ವ್ಯರ್ಥವಾಗುವ ಅಪಾಯದಲ್ಲಿದ್ದು, ಕಾನೂನುಬದ್ಧ ಕಾಯಂ ನಿವಾಸಕ್ಕಾಗಿ ಕಾಯುತ್ತಿರುವ ಭಾರತೀಯ ಐಟಿ ವೃತ್ತಿಪರರಿಗೆ ತಲೆನೋವು ತಂದಿದೆ. ಅಧಿಕೃತವಾಗಿ ಖಾಯಂ ವಾಸ್ತವ್ಯ ಕಾರ್ಡ್ (Permanent Resident Card) ಎಂದು ಕರೆಯಲ್ಪಡುವ ಗ್ರೀನ್ ಕಾರ್ಡ್, ವಲಸಿಗರಿಗೆ ನೀಡಲಾದ ಒಂದು ದಾಖಲೆಯಾಗಿದ್ದು ಅಮೆರಿಕದಲ್ಲಿ ಶಾಶ್ವತವಾಗಿ ವಾಸಿಸುವವರಿಗೆ ನೀಡಲಾಗಿದೆ. ಉದ್ಯೋಗ ಆಧಾರಿತ ವಲಸಿಗರಿಗೆ ಈ ವರ್ಷದ ಕೋಟಾ 2,61,500 ಆಗಿದೆ. ಇದು ಸಾಮಾನ್ಯ 1,40,000 ಕ್ಕಿಂತ ತುಂಬಾ ಹೆಚ್ಚು ಎಂದು ಭಾರತೀಯ ಉದ್ಯೋಗಿ ಸಂದೀಪ್ ಪವಾರ್ ಪಿಟಿಐಗೆ ತಿಳಿಸಿದ್ದಾರೆ. “ದುರದೃಷ್ಟವಶಾತ್, ಕಾನೂನಿನ ಪ್ರಕಾರ ಈ ವೀಸಾಗಳನ್ನು ಸೆಪ್ಟೆಂಬರ್ 30 ರೊಳಗೆ ನೀಡದಿದ್ದರೆ ಅವುಗಳು ಶಾಶ್ವತವಾಗಿ ಕಳೆದುಹೋಗುತ್ತವೆ” ಎಂದು ಪವಾರ್ ಹೇಳಿದ್ದಾರೆ.

ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳು ಅಥವಾ ಯುಎಸ್‌ಸಿಐಎಸ್‌ ಪ್ರಕಾರ ಅವರು 1,00,000 ಕ್ಕಿಂತ ಹೆಚ್ಚು ಗ್ರೀನ್ ಕಾರ್ಡ್‌ಗಳನ್ನು ವ್ಯರ್ಥ ಮಾಡುತ್ತಾರೆ ಎಂದು ಸೂಚಿಸುತ್ತದೆ. ಇದನ್ನು ಇತ್ತೀಚೆಗೆ ವೀಸಾ ಬಳಕೆಯನ್ನು ನಿರ್ಧರಿಸುವ ರಾಜ್ಯ ಅಧಿಕಾರಿಯಿಂದ ದೃಢಪಡಿಸಲಾಗಿದೆ ಎಂದು ಅವರು ಹೇಳಿದರು.

ಯುಎಸ್‌ಸಿಐಎಸ್ ಅಥವಾ ಬೈಡೆನ್ ಆಡಳಿತವು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಈ ವರ್ಷ ಲಭ್ಯವಿರುವ ಹೆಚ್ಚುವರಿ 1,00,000 ಗ್ರೀನ್ ಕಾರ್ಡ್‌ಗಳು ವ್ಯರ್ಥವಾಗುತ್ತವೆ ಎಂದು ಪವಾರ್ ಹೇಳಿದರು. ಈ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಶ್ವೇತಭವನ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಏತನ್ಮಧ್ಯೆ ಅಮೆರಿಕದಲ್ಲಿ ವಾಸಿಸುತ್ತಿರುವ 125 ಭಾರತೀಯ ಮತ್ತು ಚೀನೀ ಪ್ರಜೆಗಳ ಗುಂಪು ಗ್ರೀನ್ ಕಾರ್ಡ್‌ಗಳನ್ನು ವ್ಯರ್ಥ ಮಾಡುವುದನ್ನು ತಡೆಯಲು ಮೊಕದ್ದಮೆ ದಾಖಲಿಸಿತು.

“ಈ ಗ್ರೀನ್ ಕಾರ್ಡ್‌ಗಳಿಂದ ಪ್ರಯೋಜನ ಪಡೆಯುವ ನೂರಾರು ಸಾವಿರಾರು ಕಾನೂನುಬದ್ಧ ವಲಸಿಗರು ಅಮೆರಿಕದಲ್ಲಿ ಇದ್ದಾರೆ. ಅವರಲ್ಲಿ ಅನೇಕರು ಒಂದು ದಶಕ ಅಥವಾ ಅದಕ್ಕಿಂತ ಹೆಚ್ಚು ಕಾಲ ಕಾಯಂ ನಿವಾಸಿ ಸ್ಥಾನಮಾನಕ್ಕೆ ಹೊಂದಿಕೊಳ್ಳಲು ಕಾಯುತ್ತಿದ್ದಾರೆ. ಆದರೆ ಲಭ್ಯವಿರುವ ವೀಸಾ ಕೊರತೆಯಿಂದಾಗಿ ಅದನ್ನು ಮಾಡಲು ಸಾಧ್ಯವಾಗಲಿಲ್ಲ ಎಂದುಅವರು ಹೇಳಿದರು.

ಆದರೆ ಈ ವರ್ಷ, ಯುಎಸ್‌ಸಿಐಎಸ್ ತನ್ನ ಕೆಲಸವನ್ನು ಸಮರ್ಥವಾಗಿ ಮತ್ತು ತ್ವರಿತವಾಗಿ ಮಾಡಿದರೆ, ಈ ವಲಸಿಗರಿಗೆ ಅಂತಿಮವಾಗಿ ಶಾಶ್ವತ ನಿವಾಸಿಗಳಾಗುವ ಅವಕಾಶವಿದೆ, ಇಲ್ಲದಿದ್ದರೆ ದಶಕಗಳೇ ಬೇಕಾಗಬಹುದು “ಎಂದು ಪವಾರ್ ಹೇಳಿದರು. ಪವಾರ್ ಅವರು ಭಾರತೀಯ ಉದ್ಯೋಗಿಗಳ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ.

“ನನ್ನಂತಹ ಹೆಚ್ಚಿನ ಸಂಭಾವ್ಯ ಫಲಾನುಭವಿಗಳು ಭಾರತದಿಂದ ಬಂದವರು, ಐಎನ್‌ಎನಲ್ಲಿ ಅಂತರ್ಗತವಾಗಿರುವ ಜನಾಂಗೀಯ ಮತ್ತು ತಾರತಮ್ಯದ ಕಾರಣದಿಂದಾಗಿ ಅತ್ಯಂತ ಹಿಂದುಳಿದಿರುವ ದೇಶವಾಗಿದೆ. ಅನೇಕರು ಸಂಗಾತಿಗಳನ್ನು ಹೊಂದಿದ್ದಾರೆ, ಹೆಚ್ಚಾಗಿ ಮಹಿಳೆಯರು, ಅವರುಕಾಯಂ ನಿವಾಸಿಗಳು ಆಗುವವವರೆಗೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎಂದು ಪವಾರ್ ಹೇಳಿದರು.

“ಅನೇಕರಿಗೆ ಮಕ್ಕಳು ಇದ್ದಾರೆ, ವಯಸ್ಸು ಮೀರಿದವರನ್ನು ಸ್ವಯಂ-ಗಡೀಪಾರು ಮಾಡಲು ಒತ್ತಾಯಿಸುತ್ತಾರೆ, ಈ ಗ್ರೀನ್ ಕಾರ್ಡ್‌ಗಳನ್ನು ಬಳಸದಿದ್ದರೆ ಅಪಾರ ಹಾನಿಯುಂಟಾಗುತ್ತದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಗ್ರೀನ್​ ಕಾರ್ಡ್ ಆಕಾಂಕ್ಷಿಗಳಿಗೆ ಟ್ರಂಪ್ ವಿಧಿಸಿದ್ದ ನಿಷೇಧ ತೆರವುಗೊಳಿಸಿದ ಬೈಡನ್

(In US About one lakh employment-based Green Cards are at the risk of being wasted)