76 ವರ್ಷಗಳ ಹಿಂದೆ ಅಂದರೆ 1945 ಆಗಸ್ಟ್ 6ರಂದು ಜಪಾನಿಗರಿಗೆ ಅತ್ಯಂತ ಕರಾಳ ದಿನವಾಗಿತ್ತು. ಜಪಾನ್ ಮೇಲೆ ಹಾಕಿದ ಎರಡು ಅಣು ಬಾಂಬ್ಗಳಿಂದ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡರು. ಜಪಾನಿನ ಹಿರೋಶಿಮಾ ಮತ್ತು ನಾಗಾಸಾಕಿ ನಗರವನ್ನು ಗುರಿಯಾಗಿಸಿಕೊಂಡು ಅಮೆರಿಕಾ ಪರಮಾಣು ಬಾಂಬ್ ಸಿಡಿಸಿತು. ಆ ಕರಾಳ ದಿನದಂದು ಪ್ರಾಣ ಕಳೆದುಕೊಂಡವರ ಸ್ಮರಣಾರ್ಥವಾಗಿ ಆಗಸ್ಟ್ 6ರಂದು ಪ್ರತೀ ವರ್ಷ ಹಿರೋಷಿಮಾ ದಿನವನ್ನು ಆಚರಿಸಲಾಗುತ್ತದೆ.
1945 ಆಗಸ್ಟ್ 6ನೇ ತಾರೀಕಿನಂದು ಅಮೆರಿಕಾ ಜಪಾನ್ನ ಹಿರೋಷಿಮಾ ನಗರದ ಮೇಲೆ ಪರಮಾಣು ಬಾಂಬ್ ಎಸೆಯಿತು. ಅದಾದ 3 ದಿನದ ಬಳಿಕ ಮತ್ತೆ ನಾಗಸಾಕಿ ನಗರದ ಮೇಲೆ ಅಣು ಬಾಂಬ್ ಬೀಳಿಸಿತು. ಅದರ ಪರಿಣಾಮ ಶೇ. 40ರಷ್ಟು ಜನರು ಸಾವಿಗೀಡಾದರು. ಸರಿಸುಮಾರು 1.40 ಲಕ್ಷಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡರು. ಅದರಲ್ಲಿ ಹೆಚ್ಚಿನವರು ನಾಗರಿಕರು.
ಆಗಸ್ಟ್ 6 ಮತ್ತು 9 ನೇ ತಾರೀಕಿನಂದು ಅಣು ಬಾಂಬ್ ಸ್ಪೋಟವಾಯಿತು. ಮಾರ್ಪಡಿಸಿದ ಬಿ-29 ಯುರೋನಿಯಂ ಗನ್ ಮಾದರಿಯದ್ದಾದ ಬಾಂಬ್ ದಿ ಲಿಟಲ್ ಬಾಯ್ ಎಂಬ ಹೆಸರಿನಿಂದ ಹಿರೋಶಿಮಾದಲ್ಲಿ ಬೀಳಿಸಿತು. ಆದಾದ 3 ದಿನಗಳ ಬಳಿಕ ದಿ ಫ್ಯಾಟ್ ಮೆನ್ ಎಂಬ ಹೆಸರಿನಿಂದ ನಾಗಾಸಾಕಿಯಲ್ಲಿ ಬೀಳಿಸಿತು.
ಹಿರೋಶಿಮಾದಲ್ಲಿ ನಡೆದ ಸ್ಪೋಟದ ನಂತರ ಸುಮಾರು 80,000 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿತ್ತು. ಆ ನಂತರ ಈ ಸ್ಪೋಟದ ಭೀಕರತೆಯಿಂದಾಗಿ ಅದೆಷ್ಟೋ ಜನ ಪ್ರಾಣ ಕಳೆದುಕೊಂಡರು. ಸ್ಟೋಟ ನಡೆದ ವರ್ಷಗಳ ನಂತರವೂ ಸಹ ಜನರು ಪ್ರಾಣ ಕಳೆದುಕೊಂಡರು. ಈ ಬಾಂಬ್ ಸ್ಟೋಟದ ಪರಿಣಾಮ ಎಷ್ಟು ಭೀಕರವಾಗಿದೆ ಅಂದರೆ ಜಪಾನಿನಲ್ಲಿ ಜನರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಇದನ್ನೂ ಓದಿ:
ಭಾರತದಲ್ಲಿ ನೆಲಕಚ್ಚಿದ್ದ ಈ ಚಿತ್ರ, ಜಪಾನ್ನಲ್ಲಿ ಸೂಪರ್ ಹಿಟ್!