AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Japan Rain: ಅಬ್ಬರದ ಮಳೆಗೆ ತತ್ತರಿಸುತ್ತಿದೆ ಜಪಾನ್​; ಇಂದು ಮುಂಜಾನೆ ಅಟಾಮಿಯಲ್ಲಿ ಕಂಡ ದೃಶ್ಯ ನೋಡಿ ಹೆದರಿದ ಸ್ಥಳೀಯರು

ಕಾಣೆಯಾದ 19 ಜನರ ಹುಡುಕಾಟ ನಡೆದಿದೆ. ಇನ್ನುಳಿದವರನ್ನು ರಕ್ಷಣೆ ಮಾಡಲಾಗಿದೆ. ಆ 19 ಮಂದಿ ಬದುಕಿದ್ದಾರೋ..ಇಲ್ಲವೋ ಎಂಬ ಬಗ್ಗೆಯೂ ಅನುಮಾನ ಎಂದು ಶಿಜೌಕಾ ಪ್ರಾಂತದ ಅಧಿಕಾರಿ ತಿಳಿಸಿದ್ದಾರೆ.

Japan Rain: ಅಬ್ಬರದ ಮಳೆಗೆ ತತ್ತರಿಸುತ್ತಿದೆ ಜಪಾನ್​; ಇಂದು ಮುಂಜಾನೆ ಅಟಾಮಿಯಲ್ಲಿ ಕಂಡ ದೃಶ್ಯ ನೋಡಿ ಹೆದರಿದ ಸ್ಥಳೀಯರು
ಜಪಾನ್​ನ ಭೀಕರ ಮಳೆಗೆ ಮಣ್ಣುಕುಸಿತ, ಮನೆಗಳೆಲ್ಲ ಧ್ವಂಸ
TV9 Web
| Edited By: |

Updated on:Jul 03, 2021 | 1:28 PM

Share

ಜಪಾನ್​ನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ದೊಡ್ಡ ಅವಾಂತರಗಳನ್ನೇ ಸೃಷ್ಟಿಸುತ್ತಿದೆ. ಟೋಕಿಯೋದ ಅಟಾಮಿಯಲ್ಲಿ ಭಾರಿ ಪ್ರಮಾಣದಲ್ಲಿ ಮಣ್ಣಿನ ಕುಸಿತ ಉಂಟಾಗಿದ್ದು, ಸಾಲುಸಾಲು ಮನೆಗಳು ಧ್ವಂಸಗೊಂಡಿವೆ ಎಂದು ಜಪಾನ್ ಮಾಧ್ಯಮಗಳು ವರದಿ ಮಾಡಿವೆ. ಈ ದುರಂತದ ನಂತರ ಸುಮಾರು 19 ಜನರು ಮಣ್ಣಿನಡಿ ನಾಪತ್ತೆಯಾಗಿದ್ದಾರೆ ಎಂದು ಅಲ್ಲಿನ ಆಡಳಿತ ತಿಳಿಸಿದ್ದಾಗಿಯೂ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಜಪಾನ್​ನ ಶಿಜೌಕಾ ಪ್ರಾಂತ್ಯದಲ್ಲಿರುವ ಅಟಾಮಿ ಪಟ್ಟಣ ಬಿಸಿನೀರಿನ ಬುಗ್ಗೆಗಳಿಗೆ ಹೆಸರುವಾಸಿ. ಅಟಾಮಿ ಎಂದರೆ ಅರ್ಥವೇ ಬಿಸಿ ಸಾಗರ ಎಂದು. ಈ ಪಟ್ಟಣ ಇಜು ಪೆನಿನ್ಸುಲಾದ ಉತ್ತರದ ತುದಿಯಲ್ಲಿರುವ ಸಗಾಮಿ ಕೊಲ್ಲಿಯಲ್ಲಿ ಭಾಗಶಃ ಮುಳುಗಿರುವ ಜ್ವಾಲಾಮುಖಿ ಕುಂಡದ ಕಡಿದಾದ ಇಳಿಜಾರಿನಲ್ಲಿದೆ. ಸ್ಥಳೀಯ ವಿಪತ್ತು ನಿರ್ವಹಣಾ ಅಧಿಕಾರಿಗಳು ಹೇಳುವ ಪ್ರಕಾರ ಇಂದು ಮುಂಜಾನೆ ಹೊತ್ತಿಗೆ ಅಟಾಮಿಯಲ್ಲಿ ಮಣ್ಣು ಕುಸಿದಿದೆ. ಇದರಿಂದ ಧ್ವಂಸಗೊಂಡ ಮನೆಗಳ ಭಗ್ನಾವಶೇಷಗಳು, ಮಣ್ಣನ್ನು ಒಳಗೊಂಡ ಕಪ್ಪು ಬಣ್ಣದ ನೀರಿನ ಪ್ರವಾಹ ರಸ್ತೆಯ ಮೇಲೆಲ್ಲ ಭಯಂಕರವಾಗಿ ಹರಿದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಸಹಾಯಕತೆಯಿಂದ ಈ ಭೀಕರ ದೃಶ್ಯವನ್ನು ನೋಡಿದ್ದು ಬಿಟ್ಟರೆ ಇನ್ನೇನೂ ಮಾಡಲು ಸಾಧ್ಯವಾಗಲಿಲ್ಲ. ತುಂಬ ಹೆದರಿಕೆಯಾಯಿತು ಎಂದು ಸ್ಥಳೀಯರು ಹೇಳಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.

ಕಾಣೆಯಾದ 19 ಜನರ ಹುಡುಕಾಟ ನಡೆದಿದೆ. ಇನ್ನುಳಿದವರನ್ನು ರಕ್ಷಣೆ ಮಾಡಲಾಗಿದೆ. ಆ 19 ಮಂದಿ ಬದುಕಿದ್ದಾರೋ..ಇಲ್ಲವೋ ಎಂಬ ಬಗ್ಗೆಯೂ ಅನುಮಾನ ಎಂದು ಶಿಜೌಕಾ ಪ್ರಾಂತದ ಅಧಿಕಾರಿ ತಿಳಿಸಿದ್ದಾರೆ. ಕಳೆದ ವಾರದಿಂದಲೂ ಜಪಾನ್​​ ಮಳೆಗೆ ತತ್ತರಿಸುತ್ತಿದೆ. ದೇಶದ ನದಿಗಳೆಲ್ಲ ತುಂಬಿ ಹರಿಯುತ್ತಿದ್ದು, ಆತಂಕ ಸೃಷ್ಟಿಸಿವೆ. ದಿನ ಒಂದಲ್ಲ ಒಂದು ಕಡೆ ಮಣ್ಣು ಕುಸಿತದ ವರದಿಯಾಗುತ್ತಿದೆ.

ಇದನ್ನೂ ಓದಿ: ಚಿಲ್ಲರೆ-ಸಗಟು ವ್ಯಾಪಾರಿಗಳನ್ನು ಎಂಎಸ್​ಎಂಇ ವಲಯಕ್ಕೆ ಸೇರಿಸಿದ್ದು ನಮ್ಮ ಸರ್ಕಾರದ ಮೈಲಿಗಲ್ಲು: ಪ್ರಧಾನಿ ಮೋದಿ ಟ್ವೀಟ್​

Due to Heavy Rain mudslide swept away a row of houses in Atami town of Japan

Published On - 1:27 pm, Sat, 3 July 21

Follow Us
Web contact
Web contact

TV9 Kannada

Read More
ಬೆಂಗಳೂರು ಅಂತಾರಾಷ್ಟ್ರೀಯ ಸ್ಟೇಡಿಯಂ ಗುದ್ದಲಿ ಪೂಜೆಗೆ ಕ್ರಿಕೆಟ್ ದಿಗ್ಗಜರು
ಬೆಂಗಳೂರು ಅಂತಾರಾಷ್ಟ್ರೀಯ ಸ್ಟೇಡಿಯಂ ಗುದ್ದಲಿ ಪೂಜೆಗೆ ಕ್ರಿಕೆಟ್ ದಿಗ್ಗಜರು
ಹೈದರಾಬಾದ್​ಗೆ ಕೊಹ್ಲಿ ಆಗಮನ; ಅಭಿಮಾನಿಗಳಿಂದ ಅನ್ನ ಸಂತರ್ಪಣೆ
ಹೈದರಾಬಾದ್​ಗೆ ಕೊಹ್ಲಿ ಆಗಮನ; ಅಭಿಮಾನಿಗಳಿಂದ ಅನ್ನ ಸಂತರ್ಪಣೆ
ವರುಣಾರ್ಭಟಕ್ಕೆ ಚಿಕ್ಕಮಗಳೂರಲ್ಲಿ ಹೊಳೆಯಂತಾದ ರಸ್ತೆಗಳು
ವರುಣಾರ್ಭಟಕ್ಕೆ ಚಿಕ್ಕಮಗಳೂರಲ್ಲಿ ಹೊಳೆಯಂತಾದ ರಸ್ತೆಗಳು
ಹರಿಹರ ಪಂಚಮಸಾಲಿ ಪೀಠ ವಿವಾದ ಬಗ್ಗೆ ಯತ್ನಾಳ್ ಸ್ಫೋಟಕ ಹೇಳಿಕೆ
ಹರಿಹರ ಪಂಚಮಸಾಲಿ ಪೀಠ ವಿವಾದ ಬಗ್ಗೆ ಯತ್ನಾಳ್ ಸ್ಫೋಟಕ ಹೇಳಿಕೆ
ಕಾರು ಗುದ್ದಿದ ರಭಸಕ್ಕೆ ಆಟೋ ಅಪ್ಪಚ್ಚಿ: 10 ಮಂದಿಗೆ ಗಾಯ
ಕಾರು ಗುದ್ದಿದ ರಭಸಕ್ಕೆ ಆಟೋ ಅಪ್ಪಚ್ಚಿ: 10 ಮಂದಿಗೆ ಗಾಯ
ನಮ್ಮ ಮೆಟ್ರೋ ನೀಲಿ ಮಾರ್ಗಕ್ಕೆ  ಸೌರಶಕ್ತಿ ಬಳಕೆಗೆ ಶಿಫಾರಸು: ಲಾಭ ಏನು?
ನಮ್ಮ ಮೆಟ್ರೋ ನೀಲಿ ಮಾರ್ಗಕ್ಕೆ  ಸೌರಶಕ್ತಿ ಬಳಕೆಗೆ ಶಿಫಾರಸು: ಲಾಭ ಏನು?
ರೀಷ್ಮಾ ನಾಣಯ್ಯಗಿಂತ ಒಳ್ಳೆ ಡ್ಯಾನ್ಸರ್ ಇಲ್ಲ ಬಿಡಿ, ವಿಡಿಯೋ ನೋಡಿ
ರೀಷ್ಮಾ ನಾಣಯ್ಯಗಿಂತ ಒಳ್ಳೆ ಡ್ಯಾನ್ಸರ್ ಇಲ್ಲ ಬಿಡಿ, ವಿಡಿಯೋ ನೋಡಿ
1.85 ಕೆಜಿ ಚಿನ್ನ ಬ್ಯಾಗ್​​​​​ನಲ್ಲಿ ತುಂಬಿಕೊಂಡು ಹೋದ ದೃಶ್ಯ ಇಲ್ಲಿದೆ
1.85 ಕೆಜಿ ಚಿನ್ನ ಬ್ಯಾಗ್​​​​​ನಲ್ಲಿ ತುಂಬಿಕೊಂಡು ಹೋದ ದೃಶ್ಯ ಇಲ್ಲಿದೆ
ವಿಶ್ವನಾಥ ವಿರುದ್ಧ ಎಫ್‌ಐಆರ್: ಸಿದ್ದರಾಮಯ್ಯ ಪುತ್ರನ ವಿರುದ್ಧ ಸ್ಫೋಟಕ ಆರೋಪ
ವಿಶ್ವನಾಥ ವಿರುದ್ಧ ಎಫ್‌ಐಆರ್: ಸಿದ್ದರಾಮಯ್ಯ ಪುತ್ರನ ವಿರುದ್ಧ ಸ್ಫೋಟಕ ಆರೋಪ
ಬೀದರ್​ನಲ್ಲಿ ಬಿರುಗಾಳಿ ಮಳೆ ಆರ್ಭಟಕ್ಕೆ ಒಂದು ಎಕರೆ ಪಪ್ಪಾಯಿ ಬೆಳೆ ನಾಶ
ಬೀದರ್​ನಲ್ಲಿ ಬಿರುಗಾಳಿ ಮಳೆ ಆರ್ಭಟಕ್ಕೆ ಒಂದು ಎಕರೆ ಪಪ್ಪಾಯಿ ಬೆಳೆ ನಾಶ