US Independence Day: ಯುಎಸ್​​ಎನಲ್ಲಿ ಇಂದು 245ನೇ ಸ್ವಾತಂತ್ರ್ಯೋತ್ಸವ; ಪಟಾಕಿ ಸಿಡಿಸಿ, ಮೆರವಣಿಗೆ ನಡೆಸಿ ಸಂಭ್ರಮಿಸುತ್ತಿರುವ ನಾಗರಿಕರು

ಗ್ರೇಟ್​ಬ್ರಿಟನ್​ ಹಿಡಿತದಲ್ಲಿದ್ದ ಅಮೆರಿಕದ 13 ವಸಹಾತುಗಳು ಅಧಿಕೃತವಾಗಿ ಸ್ವತಂತ್ರ್ಯಗೊಂಡವು ಎಂಬ ನಿರ್ಣಯವನ್ನು 1776 ಜುಲೈ 4ರಂದು ಯುಎಸ್​ನ ಕಾಂಗ್ರೆಸ್​ ಅಂಗೀಕರಿಸಿತು.

US Independence Day: ಯುಎಸ್​​ಎನಲ್ಲಿ ಇಂದು 245ನೇ ಸ್ವಾತಂತ್ರ್ಯೋತ್ಸವ; ಪಟಾಕಿ ಸಿಡಿಸಿ, ಮೆರವಣಿಗೆ ನಡೆಸಿ ಸಂಭ್ರಮಿಸುತ್ತಿರುವ ನಾಗರಿಕರು
ಯುಎಸ್ ಸ್ವಾತಂತ್ರ್ಯೋತ್ಸವ
Follow us
TV9 Web
| Updated By: Lakshmi Hegde

Updated on: Jul 04, 2021 | 11:38 AM

ಇಂದು ಯುನೈಟೆಡ್​ ಸ್ಟೇಟಸ್​​ನಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ. ಜುಲೈ 4ರಂದು ಯುಎಸ್​​ಗೆ ಬ್ರಿಟಿಷರಿಂದ ಸ್ವಾತಂತ್ರ್ಯ ಲಭಿಸಿದೆ. ಹಾಗಾಗಿ ಪ್ರತಿವರ್ಷವೂ ಜುಲೈ 4ರಂದು ಅಲ್ಲಿ ಸ್ವಾಂತಂತ್ರ್ಯ ದಿನ ಆಚರಿಸಲಾಗುತ್ತದೆ. ಅಂದು ಯುಎಸ್​ನಾದ್ಯಂತ ಸಂಭ್ರಮ ಮನೆ ಮಾಡಿರುತ್ತದೆ. ಇಂದು ಸಾಮಾನ್ಯವಾಗಿ ದೇಶದ ನಾಗರಿಕರು ಪರೇಡ್​​ಗಳಲ್ಲಿ ಪಾಲ್ಗೊಳ್ಳುತ್ತಾರೆ. ಪಟಾಕಿ ಸಿಡಿಸುವುದು, ಮೆರವಣಿಗೆಗಳು ಸಾಮಾನ್ಯವಾಗಿರುತ್ತದೆ. ಒಟ್ಟಾರೆ ಸ್ವಾತಂತ್ರ್ಯ ಬಂದ ದಿನವನ್ನು ಪ್ರತಿವರ್ಷವೂ ಅದ್ದೂರಿಯಾಗಿ ಉತ್ಸವದಂತೆ ಆಚರಿಸುತ್ತಾರೆ. ಆದರೆ ಈ ಬಾರಿ ಕೊರೊನಾ ಸೋಂಕಿನ ಕಾರಣದಿಂದ ಸಾಮಾಜಿಕ ಕಾರ್ಯಕ್ರಮಗಳನ್ನು ನಿಯಮಿತವಾಗಿ ನಡೆಸುವಂತೆ ಸರ್ಕಾರ ಸೂಚನೆ ನೀಡಿದೆ. ಹಾಗೇ, ತೀವ್ರವಾಗಿ ಪಟಾಕಿ ಸಿಡಿಸುವುದರಿಂದ ಅಗ್ನಿ ಅವಘಡಗಳು ಸಂಭವಿಸುವ ಸಾಧ್ಯತೆ ಇರುವ ಕಾರಣಕ್ಕೆ ಅದಕ್ಕೂ ಕಡಿವಾಣ ಹಾಕಲಾಗಿದೆ. ಮೆರವಣಿಗೆಗಳಲ್ಲಿ ಪಟಾಕಿ ಸಿಡಿಸಲು ವೃತ್ತಿಪರರನ್ನೇ ಆಹ್ವಾನಿಸಲಾಗಿದೆ.

ಅಂದಹಾಗೆ ಇಂದು ಯುಎಸ್​​ನಲ್ಲಿ 245ನೇ ಸ್ವಾತಂತ್ರ್ಯೋತ್ಸವವನ್ನು ಆಚರಣೆ ಮಾಡಲಾಗುತ್ತಿದೆ. ಗ್ರೇಟ್​ಬ್ರಿಟನ್​ ಹಿಡಿತದಲ್ಲಿದ್ದ ಅಮೆರಿಕದ 13 ವಸಹಾತುಗಳು ಅಧಿಕೃತವಾಗಿ ಸ್ವತಂತ್ರ್ಯಗೊಂಡವು ಎಂಬ ನಿರ್ಣಯವನ್ನು 1776 ಜುಲೈ 4ರಂದು ಯುಎಸ್​ನ ಕಾಂಗ್ರೆಸ್​ ಅಂಗೀಕರಿಸಿತು. ಅದಾದ ಬಳಿಕ ಪ್ರತಿ ವರ್ಷ ಜುಲೈ ನಾಲ್ಕರಂದು ಯುಎಸ್​ಎ ಸ್ವಾತಂತ್ರ್ಯೋತ್ಸವ ಆಚರಣೆ ಮಾಡುತ್ತ ಬಂದಿದೆ. ನಿಜವಾಗಿಯೂ ಈ 13 ವಸಹಾತುಗಳು 1776 ಜುಲೈ 2ರಂದೇ ಬ್ರಿಟಿಷ್​ ಆಡಳಿತದಿಂದ ಹೊರಬಂದಿದ್ದವು. ಅದಾದ ಎರಡು ದಿನಗಳ ಬಳಿಕ ಅಧಿಕೃತವಾಗಿ ಸ್ವಾತಂತ್ರ್ಯದ ಘೋಷಣೆಯಾಯಿತು. ಯುಎಸ್​ಎನಲ್ಲಿ ಜು.4ಮತ್ತು 5 ಎರಡೂ ದಿನಗಳ ಕಾಲ ಸ್ವಾತಂತ್ರ್ಯದ ಸಂಭ್ರಮ ಇರುತ್ತದೆ.

ಯುಎಸ್​ನ ಸಂಸ್ಥಾಪಕ ಪಿತಾಮಹರು ಎನ್ನಿಸಿಕೊಂಡ, ಪ್ರಮುಖ ನಾಯಕರಾದ ಜಾನ್​ ಆಡಮ್ಸ್​, ಬೆಂಜಮಿನ್​ ಫ್ರಾಂಕ್ಲಿನ್​, ಅಲೆಕ್ಸಾಂಡರ್​ ಹ್ಯಾಮಿಲ್ಟನ್​, ಜಾನ್​ ಜೇ, ಥಾಮಸ್​ ಜೆಫರ್ಸನ್​, ಜೇಮ್ಸ್​ ಮ್ಯಾಡಿಸನ್​, ಜಾರ್ಜ್​ ವಾಷಿಂಗ್ಟನ್​​ ಅವರು ಯುಎಸ್​ನ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವು. ಬ್ರಿಟಿಷರ ವಿರುದ್ಧ ಯುದ್ಧದಲ್ಲಿ ಯುಎಸ್​ನ್ನು ಮುನ್ನಡೆಸಿದವರಾಗಿದ್ದಾರೆ. 13 ವಸಹಾತುಗಳನ್ನು ಒಗ್ಗೂಡಿಸಿ ರಾಷ್ಟ್ರಸ್ಥಾಪನೆ ಮಾಡುವುದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಉದಾರ ಶಾಸ್ತ್ರೀಯ ನೀತಿಗಳ ಆಧಾರದಲ್ಲಿ ಹೊಸ ಸರ್ಕಾರಕ್ಕೊಂದು ರಚನಾತ್ಮಕ ಚೌಕಟ್ಟು ನಿರ್ಮಾಣ ಮಾಡಿದ್ದರು.

ಯುಎಸ್​ಎಯ ಎಲ್ಲ ರಾಜ್ಯಗಳಲ್ಲೂ ಸ್ವಾತಂತ್ರ್ಯ ಬಂದ ಈ ದಿನವನ್ನು ಭರ್ಜರಿ ಸಂತೋಷದಿಂದ ಆಚರಿಸಲಾಗುತ್ತದೆ. ಪಟಾಕಿಯ ಸದ್ದು ಭರ್ಜರಿಯಾಗಿ ಕೇಳುತ್ತದೆ. ಉದ್ದುದ್ದ ಮೆರವಣಿಗೆಗಲು, ಪರೇಡ್​ಗಳು ನಡೆಯುತ್ತವೆ. ಸಂಗೀತ ಕಾರ್ಯಕ್ರಮ ಸೇರಿ ಹಲವು ರೀತಿಯ ಮೇಳಗಳೂ ಜರುಗುತ್ತವೆ. ಯುಎಸ್​ಎನಲ್ಲಿ ಕೆಲವು ರಾಜ್ಯಗಳಲ್ಲಿ ಪಟಾಕಿಯನ್ನು ನಿಷೇಧಿಸಲಾಗಿದೆ. ಆದರೆ ಅಲ್ಲಿ ಉಳಿದ ವಿಧದ ಸಂಭ್ರಮಗಳು ನಡೆಯುತ್ತವೆ.

ಇದನ್ನೂ ಓದಿ: ಅನ್​ಲಾಕ್ 3.0: ರಾಜ್ಯದ ಕಂಪನಿ, ಕಾರ್ಖಾನೆಗಳ ನೌಕರರಿಗೆ ಲಸಿಕೆ ಕಡ್ಡಾಯ; ಲಸಿಕೆ ಇಲ್ಲದೆ ವಾಪಾಸ್ಸಾಗುತ್ತಿದ್ದಾರೆ ಜನ

Today US celebrates 245th Independence Day

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್