AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ಕೊವಿಡ್​ 19 ಸಾಂಕ್ರಾಮಿಕದ ಅತ್ಯಂತ ಅಪಾಯಕಾರಿ ಹಂತ; ಡೆಲ್ಟಾ ವೈರಾಣು ಬಗ್ಗೆ ಡಬ್ಲ್ಯೂಎಚ್​ಒ ತೀವ್ರ ಆತಂಕ

ವ್ಯಾಕ್ಸಿನೇಶನ್​ನಲ್ಲಿ ಅಸಮಾನತೆ ಇನ್ನೂ ಮುಂದುವರಿದಿರುವುದು ಕಳವಳಕಾರಿಯಾಗಿದೆ. ಬಡದೇಶಗಳಿಗೂ ಸರಿಯಾದ ಪ್ರಮಾನದಲ್ಲಿ ವ್ಯಾಕ್ಸಿನ್ ಸಿಗಬೇಕು ಎಂದು ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.

ಇದು ಕೊವಿಡ್​ 19 ಸಾಂಕ್ರಾಮಿಕದ ಅತ್ಯಂತ ಅಪಾಯಕಾರಿ ಹಂತ; ಡೆಲ್ಟಾ ವೈರಾಣು ಬಗ್ಗೆ ಡಬ್ಲ್ಯೂಎಚ್​ಒ ತೀವ್ರ ಆತಂಕ
ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್
TV9 Web
| Updated By: Lakshmi Hegde|

Updated on: Jul 03, 2021 | 10:08 AM

Share

ಕೊವಿಡ್​ 19 ಎರಡನೇ ಅಲೆ ತುಸು ತಗ್ಗಿದ ಹೊತ್ತಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಇಡೀ ವಿಶ್ವ ಕೊವಿಡ್​ 19 ಸಾಂಕ್ರಾಮಿಕದ ಅತ್ಯಂತ ಅಪಾಯಕಾರಿ ಹಂತದಲ್ಲಿದೆ ಎಂದು ಡಬ್ಲ್ಯೂಎಚ್​​ಒ ಡೈರಕ್ಟರ್​ ಜನರಲ್​ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ. ಕೊವಿಡ್ 19 ರೂಪಾಂತರಿ ವೈರಸ್​ಗಳಲ್ಲೇ ಅತ್ಯಂತ ಮಾರಣಾಂತಿಕವಾದ ಡೆಲ್ಟಾ ವೈರಸ್​ ಇದೀಗ ವಿಶ್ವದ 100ಕ್ಕೂ ಹೆಚ್ಚು ಕಾಣಿಸಿಕೊಂಡಿರುವ ಬೆನ್ನಲ್ಲೇ ಡಬ್ಲ್ಯೂಎಚ್​ಒ ಇಂಥದ್ದೊಂದು ಆತಂಕ ಹೊರಹಾಕಿದೆ.

ಮೊದಲು ಭಾರತದಲ್ಲಿ ಶುರುವಾದ ಡೆಲ್ಟಾ ರೂಪಾಂತರಿ ವೈರಸ್​ ಇನ್ನೂ ವಿಕಸನಗೊಳ್ಳುತ್ತಲೇ ಇದೆ. ಈಗಾಗಲೇ 100ಕ್ಕೂ ಹೆಚ್ಚು ದೇಶಗಳಿಗೆ ವ್ಯಾಪಿಸಿದೆ. ಇರುವ ರೂಪಾಂತರಗಳಲ್ಲೇ ಇದು ಅತ್ಯಂತ ಬಲಶಾಲಿ ಮತ್ತು ಮಾರಣಾಂತಿಕ ವೈರಸ್​ ಎಂದು ಡಾ. ಟೆಡ್ರೋಸ್ ಹೇಳಿದ್ದಾರೆ. ಲಸಿಕೆ ನೀಡುವುದೊಂದೇ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಇರುವ ಮಾರ್ಗ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಮುಂದಿನ ವರ್ಷ ಇದೇ ಸಮಯದಲ್ಲಿ ಎಲ್ಲ ದೇಶಗಳಲ್ಲಿ ಶೇ.70ರಷ್ಟಾದರೂ ಜನರಿಗೆ ಲಸಿಕೆ ಕೊಟ್ಟು ಮುಗಿಸಲು ಆಯಾ ದೇಶಗಳ ನಾಯಕರಿಗೆ ಒತ್ತಾಯಿಸುತ್ತೇನೆ ಎಂದೂ ಹೇಳಿದರು.

ವ್ಯಾಕ್ಸಿನೇಶನ್​ನಲ್ಲಿ ಅಸಮಾನತೆ ಇನ್ನೂ ಮುಂದುವರಿದಿರುವುದು ಕಳವಳಕಾರಿಯಾಗಿದೆ. ಬಡದೇಶಗಳಿಗೂ ಸರಿಯಾದ ಪ್ರಮಾನದಲ್ಲಿ ವ್ಯಾಕ್ಸಿನ್ ಸಿಗಬೇಕು ಎಂದು ಹೇಳಿದ್ದಾರೆ. ಶ್ರೀಮಂತ ರಾಷ್ಟ್ರಗಳಾದ ಯುಎಸ್​ಎ, ಬ್ರಿಟನ್​, ಫ್ರಾನ್ಸ್​, ಕೆನಡಾಗಳು ಸುಮಾರು 1 ಬಿಲಿಯನ್​ ಲಸಿಕೆಗಳನ್ನು ಹಿಂದುಳಿದ ರಾಷ್ಟ್ರಗಳಿಗೆ ದಾನ ಮಾಡುವುದಾಗಿ ಹೇಳಿದ್ದರೂ, ಅದು ಸಾಕಾಗುವುದಿಲ್ಲ. ಎಲ್ಲ ಸೇರಿ 11 ಬಿಲಿಯನ್​ಗಳಷ್ಟಾದರೂ ಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ.

ಇದನ್ನೂ ಓದಿ: ‘ಯಶ್​ ಕೂಡ ನಮ್ಮಂತೆ ಸೊನ್ನೆಯಿಂದ ಬಂದವರು’; ರಾಕಿಂಗ್​ ಸ್ಟಾರ್​ ಬಗ್ಗೆ ವೇಲು ಮಾತು

Dangerous period of pandemic says WHO chief Dr Tedros Adhanom Ghebreyesus