ದೇಶದ ಪ್ರತಿಯೊಬ್ಬರಿಗೂ 4000 ರೂ.ನೀಡಲಿದೆಯಾ ಕೇಂದ್ರ ಸರ್ಕಾರ? -ವೈರಲ್ ಆಗುತ್ತಿರುವ ಸಂದೇಶದ ಹಿಂದಿನ ಸತ್ಯ ಇಲ್ಲಿದೆ
ಜೂ.28ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೊವಿಡ್ 19 ಪರಿಹಾರಕ್ಕಾಗಿ ಒಟ್ಟು 8 ಹೊಸ ಯೋಜನೆಗಳನ್ನು ಘೋಷಿಸಿದ್ದರು. ಅದರ ಬೆನ್ನಲ್ಲೇ ಈ ಸಂದೇಶ ವೈರಲ್ ಆಗುತ್ತಿದೆ.
ಕೊವಿಡ್ 19 ಪರಿಹಾರ ನಿಧಿಯಡಿ ಕೇಂದ್ರ ಸರ್ಕಾರ ದೇಶದ ಪ್ರತಿಯೊಬ್ಬರಿಗೂ 4000 ರೂಪಾಯಿ ನೀಡುತ್ತಿದೆ..ಹೀಗೊಂದು ವಾಟ್ಸ್ ಆ್ಯಪ್ ಸಂದೇಶ ನಿಮಗೂ ಬಂದಿದ್ದರೆ ಅಥವಾ ಫೇಸ್ಬುಕ್ ಸೇರಿ ಇನ್ಯಾವುದೇ ಸೋಷಿಯಲ್ ಮೀಡಿಯಾ ಫ್ಲಾಟ್ಫಾರಂನಲ್ಲಿ ನೀವು ಇದನ್ನು ಓದಿದ್ದರೆ ಅದನ್ನು ಅಲ್ಲೇ ನಿರ್ಲಕ್ಷಿಸಿಬಿಡಿ. ಯಾಕೆಂದರೆ ಇದು ಸತ್ಯವಲ್ಲ. ಕೇಂದ್ರ ಸರ್ಕಾರ ಇಂಥ ಹಣಕಾಸು ನೆರವಿನ ಯಾವುದೇ ನಿರ್ಧಾರವನ್ನೂ ಘೋಷಿಸಿಲ್ಲ ಎಂದು ಪಿಐಬಿ (ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ) ಟ್ವೀಟ್ ಮಾಡಿದೆ.
ಜೂ.28ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೊವಿಡ್ 19 ಪರಿಹಾರಕ್ಕಾಗಿ ಒಟ್ಟು 8 ಹೊಸ ಯೋಜನೆಗಳನ್ನು ಘೋಷಿಸಿದ್ದರು. ಕೊವಿಡ್ 19 ನಿಂದ ಸಮಸ್ಯೆಗೊಳಗಾದವರಿಗೆ 1.1 ಲಕ್ಷ ಕೋಟಿ ಸಾಲ ಖಾತರಿ ಯೋಜನೆ ಮತ್ತು ಕಳೆದ ವರ್ಷ ಅನುಷ್ಠಾನಕ್ಕೆ ತರಲಾದ ಆತ್ಮನಿರ್ಭರ ಭಾರತದಡಿ ಇರುವ ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ನಡಿ 1.5 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದರು. ಹೀಗೆ ಹಣಕಾಸು ಮಂತ್ರಿ ಕೊವಿಡ್ 19 ಹೊಸ ಪ್ಯಾಕೇಜ್ ಘೋಷಣೆ ಮಾಡಿದ ಬೆನ್ನಲ್ಲೇ ಹೀಗೊಂದು ತಪ್ಪು ಮಾಹಿತಿ ಹರಡಲು ಶುರುವಾಗಿತ್ತು.
ಹಾಗೇ ಕೊರೊನಾ ಮೂರನೇ ಅಲೆ ನಿಯಂತ್ರಣ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಜುಲೈ 1ರಿಂದ 31ರವರೆಗೆ ದೇಶಾದ್ಯಂತ ಲಾಕ್ಡೌನ್ ಹೇರಲಿದ್ದಾರೆ ಎಂಬ ಪೋಸ್ಟ್ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಅದೂ ಕೂಡ ಸುಳ್ಳು. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಂಥ ಕ್ರಮ ಕೈಗೊಳ್ಳುವ ನಿರ್ಧಾರವನ್ನು ಪ್ರಕಟಿಸಿಲ್ಲ ಎಂದೂ ಪಿಐಬಿ ಟ್ವೀಟ್ ಮಾಡಿದೆ.
एक #WhatsApp मैसेज में दावा किया जा रहा है कि भारत सरकार ‘कोरोना केयर फंड योजना’ के तहत सभी को ₹4000 की सहायता राशि प्रदान कर रही है।#PIBFactCheck: यह दावा #फ़र्ज़ी है। भारत सरकार द्वारा ऐसी कोई योजना नहीं चलाई जा रही है। pic.twitter.com/SSLK6x66He
— PIB Fact Check (@PIBFactCheck) July 2, 2021
ಇದನ್ನೂ ಓದಿ:ಬಾಹುಬಲಿಯೂ ಮಾಡಿರದ ದಾಖಲೆಯನ್ನು ಮಾಡಿದ ‘ಕೆಜಿಎಫ್ 2’; ಇಲ್ಲಿದೆ ಪಕ್ಕಾ ಲೆಕ್ಕ
Government giving 4000 Rs to all under Covid scheme check here to Know trouth behind this message
Published On - 9:21 am, Sat, 3 July 21