ನಟ ಡಿನೋ ಮೊರಿಯಾ, ಅಹ್ಮದ್ ಪಟೇಲ್ ಅಳಿಯ ಸೇರಿ ನಾಲ್ವರ ಆಸ್ತಿ ವಶಪಡಿಸಿಕೊಂಡ ಜಾರಿ ನಿರ್ದೇಶನಾಲಯ
ಬಯೋಟೆಕ್ ಕಂಪನಿಗೆ ಸಂಬಂಧಿಸಿದಂತೆ ನಾಲ್ವರ ಆಸ್ತಿ ವಶಪಡಿಸಿಕೊಳ್ಳಲು ನಾಲ್ಕು ಪ್ರತ್ಯೇಕ ಪ್ರಾಥಮಿಕ ಆದೇಶವನ್ನೇ ನೀಡಲಾಗಿದೆ. ಒಟ್ಟಾರೆ 8.70 ಕೋಟಿ ರೂ.ಮೌಲ್ಯದ ಆಸ್ತಿ ವಶವಾಗಿದೆ.
ಈ ಪ್ರಕರಣ ಗುಜರಾತ್ ಮೂಲದ ಔಷಧೀಯ ಕಂಪನಿ ಸ್ಟರ್ಲಿಂಗ್ ಬಯೋಟೆಕ್ ಮತ್ತು ಅದರ ಪ್ರವರ್ತಕ ಸಹೋದರರಾದ ನಿತಿನ್ ಸಂದೇಸರ್ ಮತ್ತು ಚೇತನ್ ಸಂದೇಸರ್ ಅವರಿಗೆ ಸಂಬಂಧಪಟ್ಟದ್ದಾಗಿದೆ. ಈ ಸಹೋದರರು ಬ್ಯಾಂಕ್ನಿಂದ 14,500 ಕೋಟಿ ರೂಪಾಯಿಯಷ್ಟು ಸಾಲ ಪಡೆದು ವಂಚಿಸಿದ್ದಾರೆ. ಕಾಂಗ್ರೆಸ್ ನಾಯಕ ದಿವಂಗತ ಅಹ್ಮದ್ ಪಟೇಲ್ ಅವರ ಅಳಿಯ, ನಟರಾದ ಡಿನೋ ಮೊರಿಯಾ, ಸಂಜಯ್ ಖಾನ್, ಡಿಜೆ ಅಕ್ವೀಲ್ ಅವರ ಆಸ್ತಿಯನ್ನು ಶುಕ್ರವಾರ ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ಮುಟ್ಟುಗೋಲು ಹಾಕಿಕೊಂಡಿದೆ. ಹಣ ಅಕ್ರಮ ವರ್ಗಾವಣೆ ಮೂಲಕ ಬ್ಯಾಂಕ್ಗೆ ವಂಚನೆ ಮಾಡಿದ ಪ್ರಕರಣದಡಿ ಇವರ ಆಸ್ತಿಯನ್ನು ಇಡಿ ವಶಪಡಿಸಿಕೊಂಡಿದ್ದು, ತನಿಖಾ ದಳ ವಶಪಡಿಸಿಕೊಂಡಿರುವ ನಾಲ್ಕೂ ಜನರ ಒಟ್ಟು ಆಸ್ತಿ ಮೊಟ್ಟ 8.79 ಕೋಟಿ ರೂಪಾಯಿ ಆಗಿದೆ.
ಈ ಪ್ರಕರಣ ಗುಜರಾತ್ ಮೂಲದ ಔಷಧೀಯ ಕಂಪನಿ ಸ್ಟರ್ಲಿಂಗ್ ಬಯೋಟೆಕ್ ಮತ್ತು ಅದರ ಪ್ರವರ್ತಕ ಸಹೋದರರಾದ ನಿತಿನ್ ಸಂದೇಸರ್ ಮತ್ತು ಚೇತನ್ ಸಂದೇಸರ್ ಅವರಿಗೆ ಸಂಬಂಧಪಟ್ಟದ್ದಾಗಿದೆ. ಈ ಸಹೋದರರು ಬ್ಯಾಂಕ್ನಿಂದ 14,500 ಕೋಟಿ ರೂಪಾಯಿಯಷ್ಟು ಸಾಲ ಪಡೆದು ವಂಚಿಸಿದ್ದಾರೆ. ಇದು ದೇಶಭ್ರಷ್ಟ ವ್ಯಾಪಾರಿ ನೀರವ್ ಮೋದಿ ಪಂಜಾಬ್ ನ್ಯಾಶನಲ್ ಬ್ಯಾಂಕ್ಗೆ ವಂಚಿಸಿದ ಮೊತ್ತ (11,400 ರೂ.)ಕ್ಕಿಂತಲೂ ಹೆಚ್ಚು.
ಈ ಬಯೋಟೆಕ್ ಕಂಪನಿಗೆ ಸಂಬಂಧಿಸಿದಂತೆ ನಾಲ್ವರ ಆಸ್ತಿ ವಶಪಡಿಸಿಕೊಳ್ಳಲು ನಾಲ್ಕು ಪ್ರತ್ಯೇಕ ಪ್ರಾಥಮಿಕ ಆದೇಶವನ್ನೇ ನೀಡಲಾಗಿದೆ. ಒಟ್ಟಾರೆ 8.70 ಕೋಟಿ ರೂ.ಮೌಲ್ಯದ ಆಸ್ತಿ ವಶವಾಗಿದ್ದು, ಅದರಲ್ಲಿ ಸಂಜಯ್ ಖಾನ್ರದ್ದು 3 ಕೋಟಿ ರೂ.ಮೌಲ್ಯದ ಆಸ್ತಿ, ಡಿನೋ ಮೊರಿಯಾರ 1.4 ಕೋಟಿ ರೂ., ಡಿಜಿ ಅಕ್ವೀಲ್ರ 1.98 ಕೋಟಿ ರೂ. ಮೌಲ್ಯದ ಆಸ್ತಿ ವಶಪಡಿಸಿಕೊಳ್ಳಲಾಗಿದೆ. ಹಾಗೂ ಮೃತ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅಳಿಯ ಇರ್ಫಾನ್ ಅಹ್ಮದ್ ಸಿದ್ಧಕಿ ಅವರ 2.41 ಕೋಟಿ ರೂ.ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಲಾಗಿದೆ ಎಂದು ಇಡಿ ತಿಳಿಸಿದೆ. ಮುಟ್ಟುಗೋಲು ಹಾಕಿದ ಆಸ್ತಿಯಲ್ಲಿ ಮೂರು ವಾಹನಗಳು, ಬ್ಯಾಂಕ್ ಅಕೌಂಟ್ಗಳು, ಶೇರ್ಗಳು, ಮ್ಯುಚ್ಯುವಲ್ ಫಂಡ್ಗಳೂ ಇವೆ ಎಂದೂ ಇಡಿ ಹೇಳಿದೆ.
ಸಂದೇಸರ್ ಸಹೋದರರ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿದ್ಧಕಿ, ಮೊರಿಯೊ, ಅಕ್ವೀಲ್ ಅವರನ್ನು ಇಡಿ ವಿಚಾರಣೆಗೆ ಒಳಪಡಿಸಿತ್ತು. ಇವರೆಲ್ಲರೂ ಸಂದೇಸರ್ ಕುಟುಂಬದೊಂದಿಗೆ ಆಪ್ತರಾಗಿದ್ದರು ಎಂಬ ಮಾಹಿತಿಯನ್ನು, ಅವರ ಮನೆಯ ಉದ್ಯೋಗ ಸುನೀಲ್ ಯಾದವ್ ಎಂಬಾತ ಹೇಳಿಕೆ ನೀಡಿದ್ದ. ಅದನ್ನು ದಾಖಲಿಸಿದ್ದ ಇಡಿ ಕೂಡಲೇ ವಿಚಾರಣೆ ಶುರು ಮಾಡಿತ್ತು.
ಇದನ್ನೂ ಓದಿ: ದಾಬಸ್‌ಪೇಟೆಯ 3 ಅಂಗಡಿಗಳಲ್ಲಿ ಸರಣಿ ಕಳ್ಳತನ; ಅಂಗಡಿಗಳ ಶೆಟರ್ ಮುರಿದು ನಗದು ದೋಚಿರುವ ಕಳ್ಳರು
Published On - 11:13 am, Sat, 3 July 21