ಭಾರತದಲ್ಲಿ ನೆಲಕಚ್ಚಿದ್ದ ಈ ಚಿತ್ರ, ಜಪಾನ್​ನಲ್ಲಿ ಸೂಪರ್ ಹಿಟ್!

Rajinikanth: ಸೂಪರ್​ಸ್ಟಾರ್ ರಜನಿಕಾಂತ್ ಅವರ ಚಿತ್ರ ದೂರದ ಜಪಾನ್​ನಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳು ಇದನ್ನು ಸಂತಸದಿಂದ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಭಾರತದಲ್ಲಿ ನೆಲಕಚ್ಚಿದ್ದ ಈ ಚಿತ್ರ, ಜಪಾನ್​ನಲ್ಲಿ ಸೂಪರ್ ಹಿಟ್!
ದರ್ಬಾರ್ ಚಿತ್ರದಲ್ಲಿ ನಯನತಾರಾ, ರಜನಿಕಾಂತ್
TV9kannada Web Team

| Edited By: Apurva Kumar Balegere

Jul 20, 2021 | 5:45 PM

ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಭಾರತದಲ್ಲಿ ಸಿಕ್ಕಾಪಟ್ಟೆ ಅಭಿಮಾನಿಗಳಿರುವುದು ವಿಶೇಷವಲ್ಲ ಬಿಡಿ. ಆದರೆ ತಮಿಳಿನ ಈ ಸೂಪರ್​ಸ್ಟಾರ್​ಗೆ ಜಪಾನ್​ನಲ್ಲಿ ಭರ್ಜರಿ ಫ್ಯಾನ್ಸ್​ಗಳಿರುವುದು ನಿಮಗೆ ಗೊತ್ತೇ? ಹೌದು. ರಜನಿಗೆ ಜಪಾನ್​ನಲ್ಲೂ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ. ಎಷ್ಟೋ ಜನ ಅಭಿಮಾನಿಗಳು ರಜನಿ ಅವರ ಚಿತ್ರ ತಮಿಳುನಾಡಿನಲ್ಲಿ ಬಿಡುಗಡೆಯಾಗುವುದನ್ನು ನೋಡುವುದಕ್ಕಾಗಿಯೇ ಬಂದಿದ್ದು ಈ ಹಿಂದೆ ಬಹಳ ಸುದ್ದಿಯಾಗಿತ್ತು. ಇಂತಿಪ್ಪ ರಜನಿ ಪ್ರಭೆ, ಜಪಾನ್​ನಲ್ಲಿ ಪ್ರತೀ ಬಾರಿಯೂ ಅದ್ಭುತ ಕೆಲಸ ಮಾಡುತ್ತದೆ. ಉದಾಹರಣೆಗೆ ಈ ಹಿಂದಿನ ಮುತ್ತು, ಪಡಿಯಪ್ಪ, ಶಿವಾಜಿ ಸೇರಿದಂತೆ ಅನೇಕ ಚಿತ್ರಗಳು ಜಪಾನ್​ನಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದವು. ಈಗ ದರ್ಬಾರ್ ಚಿತ್ರದ ಸರದಿ.

ಕರೊನಾ ಕಾರಣದಿಂದಾಗಿ ದರ್ಬಾರ್ ಚಿತ್ರ ಜಪಾನಿ ಭಾಷೆಗೆ ಡಬ್ ಆಗಿ ಇತ್ತೀಚೆಗಷ್ಟೇ ಅಲ್ಲಿ ಬಿಡುಗಡೆಯಾಗಿದೆ. ಭಾರತದಲ್ಲಿ ನೆಲಕಚ್ಚಿದ್ದ ದರ್ಬಾರ್ ಚಿತ್ರ, ಜಪಾನ್​ನಲ್ಲಿ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ಜಪಾನ್​ನಲ್ಲಿರುವ ರಜನಿ ಅಭಿಮಾನಿಗಳು ಈ ಮಾಹಿತಿಯನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಭಾರತದಲ್ಲಿ 2020ರ ಜನವರಿಯಲ್ಲಿ ಬಿಡುಗಡೆಯಾಗಿತ್ತು. ಅಭಿಮಾನಿಗಳಿಂದ, ವಿಮರ್ಶಕರಿಂದ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಜಪಾನ್​ನಲ್ಲಿ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಾಳೆ ಅಂದರೆ ಜುಲೈ 21ರ ತನಕ ಜಪಾನ್​ನ ಎಮ್​ಕೆಸಿ ಚಿತ್ರಮಂದಿರದಲ್ಲಿ ದರ್ಬಾರ್ ಚಿತ್ರ ಹೌಸ್​ಫುಲ್ ಶೋಗಳಾಗಿ ಬುಕ್ ಆಗಿವೆ. ಭಾರತದಲ್ಲಿ ಇದರ ಗಳಿಕೆ ಉತ್ತಮವಾಗಿರದಿದ್ದರೂ ಜಪಾನ್​ನಲ್ಲಿ ಒಳ್ಳೆಯ ಗಳಿಕೆ ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ. ದರ್ಬಾರ್ ಚಿತ್ರವನ್ನು ಎ.ಆರ್.ಮುರುಗದಾಸ್ ನಿರ್ದೇಶಿಸಿದ್ದು, ಲೈಕಾ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ.

ಹೌಸ್​ಫುಲ್ ಆದ ಕುರಿತು ಟ್ವಿಟರ್​ನಲ್ಲಿ ವೈರಲ್ ಆಗಿರುವ ವಿಡಿಯೊ:

ರಜನಿಕಾಂತ್ ‘ಅಣ್ಣಾತ್ತೆ’ ಚಿತ್ರದ ಚಿತ್ರೀಕರಣಕ್ಕಾಗಿ ಕೊಲ್ಕತ್ತಾಗೆ ತೆರಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಸನ್ ಪಿಚ್ಚರ್ಸ್’ ನಿರ್ಮಿಸುತ್ತಿದ್ದು ಶಿವ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ನಯನತಾರಾ, ಕೀರ್ತಿ ಸುರೇಶ್, ಮೀನಾ, ಖುಷ್ಬು, ಪ್ರಕಾಶ್ ರಾಜ್, ಸೂರಿ, ಸತೀಶ್ ಸೇರಿದಂತೆ ಬಹುದೊಡ್ಡ ತಾರಾ ಬಳಗವಿದೆ.

ಇದನ್ನೂ ಓದಿ:

ಖ್ಯಾತ ನಟಿ ಶಿಲ್ಪಾ ಶೆಟ್ಟಿಗೆ ರಾಜ್​ ಕುಂದ್ರಾ ಸಿಕ್ಕಿದ್ದು ಹೇಗೆ? ಆ ಬಗ್ಗೆ ರಾಜ್​ನ ಮೊದಲ ಪತ್ನಿ ಕವಿತಾ ಏನೆಂದಿದ್ದರು?

ನವರಸನಾಯಕ ಜಗ್ಗೇಶ್ ಅವರ ಬಾಳ ಪಯಣವನ್ನು ಚಿತ್ರಗಳಲ್ಲಿ ನೋಡುವ ಕುತೂಹಲವಿದೆಯೇ?; ಇಲ್ಲಿದೆ ನೋಡಿ

(Superstar Rajinikanth’s movie Darbar is running housefully in Japan)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada