Pakistan: ಭಾರತದ ವಾಯು ಗಡಿಯಲ್ಲಿ ಸಂಚರಿಸಲು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿಮಾನಕ್ಕೆ ಅನುಮತಿ

ಗಣ್ಯರ ವಿದೇಶ ಪ್ರವಾಸಕ್ಕೆ ತಮ್ಮ ವಾಯು ಪ್ರದೇಶ ಬಳಸಿಕೊಳ್ಳಲು ಎಲ್ಲ ದೇಶಗಳು ಸಹಜವಾಗಿಯೇ ಅನುಮತಿ ನೀಡುತ್ತವೆ. ಆದರೆ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿದ್ದ ವಿಮಾನವು ಅಮೆರಿಕಕ್ಕೆ ತೆರಳುವಾಗ ತನ್ನ ವಾಯು ಪ್ರದೇಶ ಬಳಸಲು ಪಾಕಿಸ್ತಾನ ಅನುಮತಿ ನಿರಾಕರಿಸಿತ್ತು.

  • TV9 Web Team
  • Published On - 16:40 PM, 23 Feb 2021
Pakistan: ಭಾರತದ ವಾಯು ಗಡಿಯಲ್ಲಿ ಸಂಚರಿಸಲು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿಮಾನಕ್ಕೆ ಅನುಮತಿ
ಪಾಕ್ ಪ್ರಧಾನಿ ಇಮ್ರಾನ್ ಖಾನ್

ದೆಹಲಿ: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಎರಡು ದಿನಗಳ ಶ್ರೀಲಂಕಾ ಪ್ರವಾಸಕ್ಕೆ ಭಾರತದ ಭೂಮೇಲ್ಮೈಯ ವಾಯು ಪ್ರದೇಶವನ್ನು ಬಳಸಿಕೊಳ್ಳಲು ಭಾರತ ಸರ್ಕಾರ ಒಪ್ಪಿಗೆ ಸೂಚಿಸಿದೆ. ಇಂದಿನ ಅವರ ಶ್ರೀಲಂಕಾ ಭೇಟಿಗೆ ತನ್ನ ವಾಯು ಪ್ರದೇಶವನ್ನು ಬಳಸಿಕೊಳ್ಳಲು ಒಪ್ಪಿಗೆ ಸೂಚಿಸಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸಕ್ಕೆ ತೆರಳುವಾಗ ತನ್ನ ವಾಯು ಗಡಿಯ ಮೂಲಕ ಹಾದುಹೋಗಲು ಪಾಕಿಸ್ತಾನ ಅನುಮತಿ ನೀಡಲು ನಿರಾಕರಿಸಿತ್ತು. 2019ರಲ್ಲಿ ಪಾಕಿಸ್ತಾನ ಅನುಮತಿ ನಿರಾಕರಣೆಯ ಈ ಕ್ರಮ ಕೈಗೊಂಡಿದ್ದರೂ ಇದೀಗ ಭಾರತವು ಪಾಕಿಸ್ತಾನದ ಪ್ರಧಾನಿಯ ವಿಮಾನವು ಭಾರತದ ವಾಯುಗಡಿಯಲ್ಲಿ ಹಾದು ಹೋಗಲು ಅನುಮತಿ ನೀಡಿದೆ. ಹೀಗಾಗಿ ಭಾರತದ ಮೇಲೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿಮಾನ ಹಾದುಹೋಗಲಿದೆ.

ಪುಲ್ವಾಮಾ ದಾಳಿಯ ನಂತರ ತನ್ನ ವಾಯುಪ್ರದೇಶವನ್ನು ಬಳಸಿಕೊಳ್ಳಲು ಪಾಕಿಸ್ತಾನಕ್ಕೆ ಭಾರತ ಅನುಮತಿ ನಿರಾಕರಿಸಿತ್ತು. ಆದರೆ ಈ ಬಾರಿ ಶ್ರೀಲಂಕಾ ಪ್ರವಾಸಕ್ಕೆ ತೆರಳುತ್ತಿರುವ ಇಮ್ರಾನ್ ಖಾನ್ ಅವರ ವಿಮಾನವು ಭಾರತದ ವಾಯುಗಡಿಯಲ್ಲಿ ಸಂಚರಿಸಲು ಅನುಮತಿ ನೀಡಿದೆ.

ಅತಿಗಣ್ಯರ ವಿದೇಶ ಪ್ರವಾಸಕ್ಕೆ ತಮ್ಮ ವಾಯು ಪ್ರದೇಶನ್ನು ಬಳಸಿಕೊಳ್ಳಲು ಸಹಜವಾಗಿಯೇ ಎಲ್ಲಾ ದೇಶಗಳು ಅನುಮತಿ ನೀಡುತ್ತವೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸಕ್ಕೆ ತನ್ನ ವಾಯು ಪ್ರದೇಶದ ಮೂಲಕ ಹಾದುಹೋಗಲು ಪಾಕಿಸ್ತಾನ ಅನುಮತಿ ನಿರಾಕರಿಸಿತ್ತು.

ಈ ಬೆಳವಣಿಗೆಗಳ ನಡುವೆ ಭಾರತದ ಜತೆ ವೈಮನಸ್ಸು ಕಟ್ಟಿಕೊಳ್ಳಬಹುದಾದ ಸಂಭವ ಇರುವುದರಿಂದ ಶ್ರೀಲಂಕಾ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಸಂಸತ್​ನಲ್ಲಿ ಆಯೋಜನೆಯಾಗಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಭಾಷಣವನ್ನು ರದ್ದುಗೊಳಿಸಿರುವ ಶ್ರೀಲಂಕಾ ಭಾರತದ ಜತೆ ವೈಮನಸ್ಸು ಕಟ್ಟಿಕೊಳ್ಳಲು ಇಷ್ಟವಿಲ್ಲ ಎಂಬ ಸಂದೇಶವನ್ನು ಪರೋಕ್ಷವಾಗಿ ರವಾನಿಸಿದೆ.

ಇದನ್ನೂ ಓದಿ: Fact Check | ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ ಪಾಕ್ ಪಿಎಂ ಇಮ್ರಾನ್ ಖಾನ್ ; ವೈರಲ್ ವಿಡಿಯೊದಲ್ಲೇನಿದೆ?