ಮೂರು ಮದುವೆಯಾಚೆಗೂ ನನಗೆ ಹಲವರೊಂದಿಗೆ ಅಫೇರ್ ಇತ್ತು..ಹುಟ್ಟಿದ ಮಕ್ಕಳೂ ಲೆಕ್ಕವಿಲ್ಲ: ಫುಟ್ಬಾಲ್ ದಂತಕತೆ ಪೀಲೆ ಬಿಚ್ಚಿಟ್ಟ ಸತ್ಯ
ಪೀಲೆ ಅವರಿಗೆ ಮೊದಲ ಪತ್ನಿ ರೋಸ್‌ಮೆರಿ ಡಾಸ್ ರೀಸ್ ಚೋಲ್ಬಿ ಮತ್ತು ಎರಡನೇ ಪತ್ನಿ ಅಸಿರಿಯಾ ಲೆಮೋಸ್ ಸೀಕ್ಸಾಸ್ರಿಂದ ಕೆಲ್ಲಿ(50), ಎಡಿನ್ಹೋ (50), ಜೆನಿಫರ್ (42) ಮತ್ತು ಅವಳಿ ಮಕ್ಕಳಾದ ಜೋಶುವಾ, ಕೆಲೆಸ್ಟೆ (24) ಎಂಬ ಐವರು ಮಕ್ಕಳಿದ್ದಾರೆ.
ಫುಟ್ಬಾಲ್ ದಂತಕತೆ, ಬ್ರೆಜಿಲ್ ಆಟಗಾರ ಪೀಲೆ (ಎಡ್ಸನ್ ಅರಾಂಟೆಸ್ ಡು ನಾಸ್ಸಿಮೆಂಟೊ) ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಮೂರು ಬಾರಿ ಅಂದರೆ 1958, 1962 ಮತ್ತು 1970ರಲ್ಲಿ ವಿಶ್ವಕಪ್ ಗೆದ್ದ ಈ ಆಟಗಾರನನ್ನು ಈಗಲೂ ಅದೆಷ್ಟೋ ಯುವಕರು ತಮ್ಮ ರೋಲ್ ಮಾಡೆಲ್ ಎಂದುಕೊಳ್ಳುತ್ತಿದ್ದಾರೆ. ಅವರಂತೆ ಆಗಲು ಪ್ರಯತ್ನಿಸುತ್ತಾರೆ. ಫುಟ್ಬಾಲ್ ಗ್ರೌಂಡ್ನಲ್ಲಿ ಅದ್ಭುತ ಸಾಧನೆ ತೋರಿರುವ ಪೀಲೆಯ ವೈಯಕ್ತಿಕ ಜೀವನ ಇದೀಗ ಸುದ್ದಿಯಲ್ಲಿದೆ.
ಪೀಲೆ ತಮ್ಮ ಸಾಂಸರಿಕ ಜೀವನದ ಬಗ್ಗೆ ಒಂದು ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ನಾನು ಮೂರು ಬಾರಿ ಮದುವೆಯಾಗಿದ್ದೇನೆ. ಆದರೆ ಆ ಮೂವರು ಪತ್ನಿಯರಷ್ಟೇ ಅಲ್ಲ, ಅದರಾಚೆಗೂ ನನಗೆ ಅಫೇರ್ಗಳಿದ್ದವು. ಹಲವು ಮಹಿಳೆಯರ ಸಂಗ ಇತ್ತು. ಇವರೆಲ್ಲರಿಂದ ನನಗೆ ಎಷ್ಟು ಮಕ್ಕಳು ಹುಟ್ಟಿದ್ದಾರೆ ಎಂಬುದೂ ಲೆಕ್ಕವಿಲ್ಲ ಎಂದೂ ಪೀಲೆ ಒಪ್ಪಿಕೊಂಡಿದ್ದಾರೆ. ಬೇರೆ ಎಲ್ಲ ಪ್ರಾಮಾಣಿಕತೆ ಮಧ್ಯೆ ನನಗೆ ಅಫೇರ್ಗಳು ಇದ್ದಿದ್ದೂ ಸತ್ಯ. ಹೀಗೆ ನಾನು ಸಂಬಂಧ ಹೊಂದಿದ್ದ ಕೆಲವು ಮಹಿಳೆಯರಿಗೆ ಮಗುವೂ ಜನಿಸಿದೆ. ಅದು ನಂತರದ ದಿನಗಳಲ್ಲಿ ನನಗೆ ಗೊತ್ತಾಯಿತು ಎಂದು ಪೀಲೆ ತಿಳಿಸಿದ್ದಾಗಿ ಇಂಗ್ಲಿಷ್ ಟ್ಯಾಬ್ಲಾಯ್ಡ್ ಪತ್ರಿಕೆಯೊಂದು ವರದಿ ಮಾಡಿದೆ. ಅಷ್ಟೇ ಅಲ್ಲ, ತನಗೆ ಅಫೇರ್ ಇರುವ ಬಗ್ಗೆ ನನ್ನ ಮೊದಲ ಪತ್ನಿ, ಮೊದಲ ಗರ್ಲ್ಫ್ರೆಂಡ್ಗೂ ಗೊತ್ತಿತ್ತು. ನಾನು ಎಂದಿಗೂ ಸುಳ್ಳು ಹೇಳಲಿಲ್ಲ ಎಂದೂ ಪೀಲೆ ಹೇಳಿಕೊಂಡಿದ್ದಾರೆ.
ಪೀಲೆ ಅವರಿಗೆ ಮೊದಲ ಪತ್ನಿ ರೋಸ್‌ಮೆರಿ ಡಾಸ್ ರೀಸ್ ಚೋಲ್ಬಿ ಮತ್ತು ಎರಡನೇ ಪತ್ನಿ ಅಸಿರಿಯಾ ಲೆಮೋಸ್ ಸೀಕ್ಸಾಸ್ರಿಂದ ಕೆಲ್ಲಿ(50), ಎಡಿನ್ಹೋ (50), ಜೆನಿಫರ್ (42) ಮತ್ತು ಅವಳಿ ಮಕ್ಕಳಾದ ಜೋಶುವಾ, ಕೆಲೆಸ್ಟೆ (24) ಎಂಬ ಐವರು ಮಕ್ಕಳಿದ್ದಾರೆ. ಇನ್ನು ಪೀಲೆ ಅನಿಸಿಯಾ ಮಚಾದೋ ಎಂಬ ಮನೆ ಕೆಲಸದವಳ ಜತೆ ಅನೈತಿಕ ಸಂಬಂಧ ಹೊಂದಿದ್ದರು. ಇವರಿಬ್ಬರಿಗೆ ಜನಿಸಿದ್ದ ಸಂದ್ರಾ 2006ರಲ್ಲಿ ಕ್ಯಾನ್ಸರ್ನಿಂದ ಮೃತಪಟ್ಟಿದ್ದಾರೆ. 1968ರ ಸಮಯದಲ್ಲಿ ಪತ್ರಕರ್ತೆ ಲೆನಿಟಾ ಕರ್ಟ್ಜ್ ಜತೆ ಅಫೇರ್ ಇಟ್ಟುಕೊಂಡಿದ್ದರು. ಇವರಿಬ್ಬರಿಗೆ ಹುಟ್ಟಿದ ಮಗಳು ಫ್ಲಾವಿಯಾ (52). ಇವರ ಹೊರತಾಗಿಯೂ ಅವರಿಗೆ ಮಕ್ಕಳಿದ್ದಾರೆ. ಇದನ್ನು ಪೀಲೆ ಒಪ್ಪಿಕೊಂಡಿದ್ದಾರೆ ಎಂದೂ ಇಂಗ್ಲಿಷ್ ಪತ್ರಿಕೆಯಲ್ಲಿ ವರದಿಯಾಗಿದೆ.
ಇದನ್ನೂ ಓದಿ: ಅತ್ಯಾಚಾರದ ಕಟ್ಟುಕತೆ ಕಟ್ಟಿದ್ದ ಫಾರ್ಮಸಿ ವಿದ್ಯಾರ್ಥಿನಿ ಸಾವು; ಆತ್ಮಹತ್ಯೆಯೋ, ಹತ್ಯೆಯೋ?
Published On - 3:04 pm, Wed, 24 February 21