ಬಂಗಾರದ ತಟ್ಟೆಯಲ್ಲಿ ಬಿರಿಯಾನಿ ಕೊಡ್ತಾರಂತೆ! ವಿಶ್ವದ ಅತ್ಯಂತ ದುಬಾರಿ ಬಿರಿಯಾನಿ ಬೆಲೆ ಎಷ್ಟು ಗೊತ್ತಾ?

World's Most Expensive Biryani: Bombay Borough ರೆಸ್ಟೋರೆಂಟ್ ಪರಿಚಯಿಸಿರುವ ಈ ಗೋಲ್ಡನ್​ ಬಿರಿಯಾನಿ ಬೆಲೆ ಒಂದು ಪ್ಲೇಟ್​ಗೆ 1,000 ಧೀರಂ ಆಗುತ್ತದೆ. ಅಂದರೆ ಭಾರತೀಯ ರೂಪಾಯಿಯಲ್ಲಿ ಅದರ ಬೆಲೆ ₹19.705.85ರಷ್ಟಾಗಲಿದೆ.

  • TV9 Web Team
  • Published On - 21:51 PM, 24 Feb 2021
ಬಂಗಾರದ ತಟ್ಟೆಯಲ್ಲಿ ಬಿರಿಯಾನಿ ಕೊಡ್ತಾರಂತೆ! ವಿಶ್ವದ ಅತ್ಯಂತ ದುಬಾರಿ ಬಿರಿಯಾನಿ ಬೆಲೆ ಎಷ್ಟು ಗೊತ್ತಾ?
ಬಂಗಾರದ ಬಿರಿಯಾನಿ

ಬಿರಿಯಾನಿ (Biryani) ಅಂದ್ರೆ ಸಾಕು ಕೆಲವರ ಬಾಯಲ್ಲಿ ನೀರಿಳಿಯಲು ಶುರುವಾಗುತ್ತೆ. ಅದರ ಬಣ್ಣಕ್ಕೆ, ಘಮಕ್ಕೆ, ರುಚಿಗೆ ದೇಶ, ಭಾಷೆಗಳ ಗಡಿ ಮೀರಿ ಅಭಿಮಾನಿಗಳಿದ್ದಾರೆ. ಬಿರಿಯಾನಿಯ ಸ್ವಾದಕ್ಕೆ ವಿಶಿಷ್ಟ ಮಾನ್ಯತೆ ಇದ್ದು, ಅದನ್ನು ಜಗತ್ತಿನ ಯಾವುದೇ ಮೂಲೆಗೆ ಹೋಗಿ ತಿಂದರೂ ಅತ್ಯುತ್ತಮವಾಗಿರಬೇಕೆಂದು ಬಿರಿಯಾನಿ ಪ್ರಿಯರು ಬಯಸುತ್ತಾರೆ. ಹೀಗಾಗಿ ಪ್ರತಿ ಊರು ಕೇರಿಗಳಲ್ಲೂ ಬಿರಿಯಾನಿ ಪ್ರವೀಣರಿಗೆ ಎಲ್ಲಿಲ್ಲದ ಬೇಡಿಕೆ ಇರುತ್ತದೆ.

ಬಿರಿಯಾನಿಗಿರುವ ಜಾಗತಿಕ ಮಟ್ಟದ ಖ್ಯಾತಿಯನ್ನು ಗಮನಿಸಿ ದುಬೈನಲ್ಲಿರುವ Bombay Borough ರೆಸ್ಟಾರೆಂಟ್​ ಇದೀಗ ವಿಶೇಷ ರಾಯಲ್​ ಗೋಲ್ಡ್​ ಬಿರಿಯಾನಿ (Royal Gold Biryani) ಪರಿಚಯಿಸಿದೆ. ದೊಡ್ಡ ಚಿನ್ನದ ತಟ್ಟೆಯಲ್ಲಿ ಈ ಬಿರಿಯಾನಿಯನ್ನು ನೀಡಲಾಗುತ್ತಿದ್ದು, ಅದನ್ನು 23 ಕ್ಯಾರೆಟ್​ ಬಂಗಾರದ ಎಳೆಗಳೊಂದಿಗೆ ಅಲಂಕರಿಸಿ ತಿನ್ನಲು ಕೊಡಲಾಗುತ್ತಿದೆಯಂತೆ. ಇದು ನೋಡಲು ಮಾತ್ರವಲ್ಲದೇ ತಿನ್ನಲೂ ವಿಶಿಷ್ಟವಾಗಿರಬೇಕು, ಜಗತ್ತಿನಲ್ಲಿ ಎಲ್ಲೂ ಸಿಗದ ಬಿರಿಯಾನಿ ನಮ್ಮಲ್ಲಿ ಸಿಗಬೇಕು ಎನ್ನುವ ಕಾರಣಕ್ಕೆ ರೆಸ್ಟೋರೆಂಟ್​ನವರು ಬಂಗಾರದ ಮೊರೆ ಹೋಗಿದ್ದಾರಂತೆ.

ಹೆಚ್ಚು ಕಡಿಮೆ ಚಿನ್ನದಷ್ಟೇ ದುಬಾರಿ ರಾಯಲ್​ ಗೋಲ್ಡ್ ಬಿರಿಯಾನಿ
Bombay Borough ರೆಸ್ಟೋರೆಂಟ್ ಪರಿಚಯಿಸಿರುವ ಈ ಗೋಲ್ಡನ್​ ಬಿರಿಯಾನಿ ಬೆಲೆ ಒಂದು ಪ್ಲೇಟ್​ಗೆ 1,000 ಧೀರಂ ಆಗುತ್ತದೆ. ಅಂದರೆ ಭಾರತೀಯ ರೂಪಾಯಿಯಲ್ಲಿ ಅದರ ಬೆಲೆ ₹ 19,705.85 ಆಗಲಿದೆ. ಒಂದು ಪ್ಲೇಟ್​ನಲ್ಲಿ ಅನ್ನ ಮತ್ತು ಮಾಂಸದ ತೂಕ ಸೇರಿ ಸುಮಾರು ಮೂರು ಕೆಜಿ ಬಿರಿಯಾನಿ ಸಿಗಲಿದೆ.

ಅಂದಹಾಗೆ, ಈ ಬಿರಿಯಾನಿಯನ್ನು ಆರ್ಡರ್​ ಮಾಡಿದರೆ ಅದು ನಿಮ್ಮ ಟೇಬಲ್​ಗೆ ಬರಲು ಸುಮಾರು ಮುಕ್ಕಾಲು ಗಂಟೆ ಕಾಯಬೇಕಂತೆ. ಬಂಗಾರದ ತಟ್ಟೆಯಲ್ಲಿ ಬರುವ ಈ ಬಿರಿಯಾನಿಯಲ್ಲಿ ಚಿಕನ್​ ಬಿರಿಯಾನಿ ರೈಸ್​, ಕೀಮಾ ರೈಸ್​, ವೈಟ್​ ಅಂಡ್​ ಸ್ಯಾಫ್ರನ್​ ರೈಸ್​ ಇರಲಿದ್ದು, ಮೇಲೆ ಪುಟಾಣಿ ಆಲೂಗಡ್ಡೆ ಮತ್ತು ಬೇಯಿಸಿದ ಮೊಟ್ಟೆಗಳನ್ನೂ ಕೊಡಲಾಗುತ್ತದೆಯಂತೆ. ಈ ಬಿರಿಯಾನಿ ದರವನ್ನು ಕೇಳಿದ ಮೇಲೆಯೂ ಇದನ್ನು ತಿನ್ನಲೇ ಬೇಕೆನಿಸಿದರೆ ನೀವು ತಕ್ಷಣ ದುಬೈಗೆ ಹೋಗಿಬರುವುದೇ ಒಳ್ಳೆಯದು.

ಇದನ್ನೂ ಓದಿ: ಹೇಗಿದೆ ನೋಡಿ ಹೊಸ ಮಾರುತಿ ಸುಜುಕಿ ಸ್ವಿಫ್ಟ್​ ಫೇಸ್​ಲಿಫ್ಟ್; ಆರಂಭಿಕ ಬೆಲೆ 5.73 ಲಕ್ಷ ರೂಪಾಯಿ