ಹೈದರಾಬಾದ್: ಹೈದರಾಬಾದ್ ಘಟಸ್ಕರ ವ್ಯಾಪ್ತಿಯಲ್ಲಿ ಸಾಮೂಹಿಕ ಅತ್ಯಾಚಾರದ ಆರೋಪ ಮಾಡಿದ್ದ ಬಿ.ಫಾರ್ಮ ವಿದ್ಯಾರ್ಥಿನಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು, ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಇಂದು ಬೆಳಗ್ಗೆ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು ಇದು ಆತ್ಮಹತ್ಯೆಯೋ? ಅಥವಾ ಹತ್ಯೆಯೋ? ಎಂಬ ಶಂಕೆಗೆ ಕಾರಣವಾಗಿದೆ. ನಿನ್ನೆ ಮಧ್ಯಾಹ್ನ ಶುಗರ್ ಮಾತ್ರೆ ಸೇವಿಸಿದ್ದ ವಿದ್ಯಾರ್ಥಿನಿಗೆ ಸಖಿ ಸೆಂಟರ್‌ನಲ್ಲಿ ಕೌನ್ಸೆಲಿಂಗ್ ಮಾಡಿದ ಬಳಿಕ ಪೊಲೀಸರೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಆದರೆ, ಚಿಕಿತ್ಸೆಯ ಬಳಿಕ ಮನೆಗೆ ಹೋಗಿದ್ದ ವಿದ್ಯಾರ್ಥಿನಿ ಇಂದು (ಫೆಬ್ರವರಿ 24) ಸಾವಿಗೀಡಾಗಿರುವುದು ಈಗ ಅನುಮಾನ ಮೂಡಿಸಿದೆ.
ಅತ್ಯಾಚಾರದ ಆರೋಪ ಮಾಡಿದ್ದ ವಿದ್ಯಾರ್ಥಿನಿ ಖಿನ್ನತೆಯಿಂದ ಬಳಲುತ್ತಿದ್ದು, ಆಕೆಗೆ ಚಿಕಿತ್ಸೆ ನೀಡಿದ್ದ ಉಸ್ಮಾನಿಯಾ ವೈದ್ಯರು ರಾತ್ರಿ ಮನೆಗೆ ಕಳುಹಿಸಿದ್ದರು. ಆದರೆ, ಇಂದು ಬೆಳಗ್ಗೆ ಏಳುವಾಗಲೇ ವಿದ್ಯಾರ್ಥಿನಿ ಸಾವಿಗೀಡಾಗಿದ್ದು ಪ್ರಕರಣವನ್ನು ಮತ್ತಷ್ಟು ಗಂಭೀರಗೊಳಿಸಿದೆ.
ಇದನ್ನೂ ಓದಿ: ಯುವತಿಯೇ ಅತ್ಯಾಚಾರದ ಸುಳ್ಳು ಕತೆ ಸೃಷ್ಟಿಸಿದ್ದಾಳೆ ಎಂದ ರಾಚಕೊಂಡ ಪೊಲೀಸ್ ಕಮೀಷನರ್..!