AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಜನ್ಮದಿನಾಚರಣೆ; ಎಐಎಡಿಎಂಕೆ ನಾಯಕರಿಂದ ಪುಷ್ಪ ನಮನ

Jayalalitha 73rd birth anniversary: ಜಯಲಲಿತಾ ಅವರ ಸಮಾಧಿಗೆ ತೆರಳಿ ಗೌರವ ನಮನ ಸಲ್ಲಿಸಿದ ನಂತರ ಜಯಲಲಿತಾ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ವಿ.ಕೆ ಶಶಿಕಲಾ ನಾವೆಲ್ಲರೂ ಸಂಘಟಿತವಾಗಿದ್ದುಕೊಂಡು ಮತ್ತೆ ಅಧಿಕಾರಕ್ಕೆ ಬರೋಣ ಎಂದಿದ್ದಾರೆ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಜನ್ಮದಿನಾಚರಣೆ; ಎಐಎಡಿಎಂಕೆ ನಾಯಕರಿಂದ ಪುಷ್ಪ ನಮನ
ಜಯಲಲಿತಾ ಸಮಾಧಿಗೆ ತೆರಳಿ ಪುಷ್ಪ ನಮನ ಸಲ್ಲಿಸಿದ ವಿ.ಕೆ ಶಶಿಕಲಾ
Follow us
ರಶ್ಮಿ ಕಲ್ಲಕಟ್ಟ
|

Updated on:Feb 24, 2021 | 1:50 PM

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅವರ 73ನೇ ಹುಟ್ಟುಹಬ್ಬವಾದ ಇಂದು ಎಐಎಡಿಎಂಕೆ (AIADMK) ನಾಯಕರು ಜಯಲಲಿತಾ ಸಮಾಧಿಗೆ ತೆರಳಿ ಪುಷ್ಪ ನಮನ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ, ಉಪಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ, ಜಯಲಲಿತಾ ಆಪ್ತೆ ವಿ.ಕೆ ಶಶಿಕಲಾ ಮೊದಲಾದವರು ಜಯಲಲಿತಾ ಸಮಾಧಿಗೆ ತೆರಳಿ ಗೌರವ ಸಲ್ಲಿಸಿದ್ದಾರೆ. ಚೆನ್ನೈನಲ್ಲಿರುವ ಎಐಎಡಿಎಂಕೆ ಪ್ರಧಾನ ಕಚೇರಿಯಲ್ಲಿ ಹುಟ್ಟುಹಬ್ಬ ಆಚರಣೆ ನಡೆಯಲಿದೆ.

ಜಯಲಲಿತಾ ಅವರ ಸಮಾಧಿಗೆ ತೆರಳಿ ಗೌರವ ನಮನ ಸಲ್ಲಿಸಿದ ನಂತರ ಜಯಲಲಿತಾ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ವಿ.ಕೆ ಶಶಿಕಲಾ ನಾವೆಲ್ಲರೂ ಸಂಘಟಿತವಾಗಿದ್ದುಕೊಂಡು ಮತ್ತೆ ಅಧಿಕಾರಕ್ಕೆ ಬರೋಣ ಎಂದಿದ್ದಾರೆ. ಟಿಟಿವಿ ದಿನಕರನ್ ಕೂಡಾ ವಿ.ಕೆ. ಶಶಿಕಲಾ ಜತೆಗಿದ್ದರು.

ತಮಿಳುನಾಡಿನಲ್ಲಿ ಮುಂದಿನ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಎಐಎಡಿಎಂಕೆ ಪಕ್ಷವು ಜಯಲಲಿತಾ ಅವರ ಆಡಳಿತದ ದಿನಗಳನ್ನು ಮರಳಿಸಲು ಪ್ರಯತ್ನಿಸುತ್ತಿದೆ.

ಜಯಲಲಿತಾರನ್ನು ಸ್ಮರಿಸಿದ ಮೋದಿ ಜಯಲಲಿತಾ ಅವರ ಜನ್ಮದಿನಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಜಯಲಲಿತಾ ಜೀ ಅವರ ಜನ್ಮದಿನದಂದು ಅವರನ್ನು ಸ್ಮರಿಸಿಕೊಳ್ಳುತ್ತಿದ್ದೇನೆ. ತನ್ನ ಜನ ಪರವಾದ ನೀತಿಗಳು ಮತ್ತು ದೀನ ದಲಿತರನ್ನು ಸಬಲೀಕರಣಗೊಳಿಸುವ ಅವರ ಪ್ರಯತ್ನಗಳು ವ್ಯಾಪಕ ಮೆಚ್ಚುಗೆ ಪಡೆದಿವೆ. ಅವರು ನಮ್ಮ ನಾರೀಶಕ್ತಿಯನ್ನು ಸಶಕ್ತಗೊಳಿಸಲು ಉತ್ತಮ ಪ್ರಯತ್ನಗಳನ್ನು ಮಾಡಿದ್ದರು. ನಾನು ಅವರೊಂದಿಗೆ ನಡೆಸಿದ ಸಂವಹನಗಳನ್ನು ಪ್ರೀತಿಯಿಂದ ನೆನೆಯುತ್ತೇನೆ ಎಂದಿದ್ದಾರೆ ಮೋದಿ.

ತಮಿಳುನಾಡು ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಹೊತ್ತಲ್ಲಿ ಪ್ರಧಾನಿ ನರೇಂದ್ರ ಮೋದಿ ಜಯಲಲಿತಾ ಅವರನ್ನು ನೆನಪಿಸಿಕೊಂಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಎಐಎಡಿಎಂಕೆ- ಬಿಜೆಪಿ ಮೈತ್ರಿ ಚುನಾವಣೆ ಎದುರಿಸಲಿದೆ.

2016 ಡಿಸೆಂಬರ್ 5 ರಂದು ಜಯಲಲಿತಾ ನಿಧನರಾಗಿದ್ದರು. 5 ಬಾರಿ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅಮ್ಮ, ಪುರಚ್ಚಿ ತಲೈವಿ (ಕ್ರಾಂತಿಕಾರಿನಾಯಕಿ) ಎಂದೇ ಖ್ಯಾತರಾಗಿದ್ದವರು. ಅನಾರೋಗ್ಯಕ್ಕೀಡಾಗುವವರೆಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಜಯಲಲಿತಾ ಕಾರ್ಯ ನಿರ್ವಹಿಸಿದ್ದರು. ಜಯಲಲಿತಾ ಮರಣದ ನಂತರ ಎಐಎಡಿಎಂಕೆಯಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಮುಖ್ಯಮಂತ್ರಿ ಎಡಪ್ಪಾಡಿ. ಕೆ ಪಳನಿಸ್ವಾಮಿ ಅವರ ನೇತೃತ್ವದಲ್ಲಿ ಪ್ರಸ್ತುತ ಪಕ್ಷ ಆಡಳಿತ ನಡೆಸುತ್ತಿದೆ. ಏಪ್ರಿಲ್ ತಿಂಗಳಲ್ಲಿ ಇಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದ್ದು ವಿಪಕ್ಷ ಡಿಎಂಕೆ ಜಿದ್ದಾಜಿದ್ದಿನ ಪೈಪೋಟಿ ನೀಡಲು ಸಿದ್ಧವಾಗಿದೆ.

ನಮ್ಮ ಅಮ್ಮ ಜಯಲಲಿತಾ ಅವರ ಆಗ್ರಹದಂತೆ ನಮ್ಮ ಸರ್ಕಾರ ಎಐಎಡಿಎಂಕೆ ಇನ್ನೂ ನೂರು ವರ್ಷ ಇರಬೇಕಿದೆ. ಹಾಗೆ ಇರಬೇಕಾದರೆ ಎಐಎಡಿಎಂಕೆ ಮತ್ತು ಎಎಂಎಂಕೆ (AMMK) ಜತೆಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಬೇಕು. ನಾನು ಶೀಘ್ರದಲ್ಲೇ ನಾಯಕರನ್ನು ಮತ್ತು ಜನರನ್ನು ಭೇಟಿ ಮಾಡುತ್ತೇನೆ ಎಂದು ವಿ.ಕೆ.ಶಶಿಕಲಾ ಹೇಳಿದ್ದಾರೆ.

ಮುಂಬರುವ ಚುನಾವಣೆಯಲ್ಲಿ ಎಐಎಡಿಎಂಕೆ ಜತೆ ಸೇರಲು ದಿನಕರನ್ ಪ್ರಯತ್ನಿಸುತ್ತಲೇ ಇದ್ದಾರೆ. ಚಿನ್ನಮ್ಮ (ವಿ.ಕೆ.ಶಶಿಕಲಾ) ಅವರಿಗೆ ಅದ್ದೂರಿಯಾಗಿ ಸ್ವಾಗತ ನೀಡಿದ ಜನತೆಗೆ ಧನ್ಯವಾದಗಳು ಎಂದು ದಿನಕರನ್ ಇತ್ತೀಚೆಗೆ ಟ್ವೀಟ್ ಮಾಡಿದ್ದರು. ಅಷ್ಟೇ ಅಲ್ಲದೆ ಮುಂದಿನ ಚುನಾವಣೆಯಲ್ಲಿ ಡಿಎಂಕೆಯನ್ನು ಪರಾಭವಗೊಳಿಸಲು ನಾವೆಲ್ಲರೂ ಒಂದಾಗಬೇಕು ಎಂದು ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದರು.

 ಇದನ್ನೂ ಓದಿ: Tamil Nadu Politics: ರಾಜಕೀಯ ವಿಶ್ಲೇಷಣೆ | ಶಶಿಕಲಾ ಆಡೋದು ಗೆಲ್ಲುವ ಆಟವೋ? ಒಡೆಯುವ ಆಟವೋ?

Published On - 12:58 pm, Wed, 24 February 21

ಹುಟ್ಟುಹಬ್ಬದ ದಿನವೇ ಕಣ್ಣೀರು ಹಾಕಿದ ನಟಿ ರಾಗಿಣಿ: ಕಾರಣ?
ಹುಟ್ಟುಹಬ್ಬದ ದಿನವೇ ಕಣ್ಣೀರು ಹಾಕಿದ ನಟಿ ರಾಗಿಣಿ: ಕಾರಣ?
ತಮನ್ನಾ ವಿವಾದದಲ್ಲಿ ಯಶ್ ಹೆಸರು ಹೇಳಿದ ನಟಿ ಕಾರುಣ್ಯ ರಾಮ್
ತಮನ್ನಾ ವಿವಾದದಲ್ಲಿ ಯಶ್ ಹೆಸರು ಹೇಳಿದ ನಟಿ ಕಾರುಣ್ಯ ರಾಮ್
ಇ-ಖಾತಾ ಬಗ್ಗೆ ಮಹತ್ವದ ಮಾಹಿತಿ ನೀಡಿದ ಡಿಕೆ ಶಿವಕುಮಾರ್
ಇ-ಖಾತಾ ಬಗ್ಗೆ ಮಹತ್ವದ ಮಾಹಿತಿ ನೀಡಿದ ಡಿಕೆ ಶಿವಕುಮಾರ್
ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ