ಸಂಸತ್​ ಭವನದ ಬಳಿ ಕೃಷಿ ಸಂಶೋಧನಾ ಕೇಂದ್ರ ಸ್ಥಾಪಿಸಲಿ: ರೈತ ಮುಖಂಡ ರಾಕೇಶ್ ಟಿಕಾಯತ್ ಆಪೇಕ್ಷೆ

Farmers Protest: ಸರ್ಕಾರ ಪಾರ್ಲಿಮೆಂಟ್ ಸದನದ ಬಳಿ ಕೃಷಿ ಸಂಶೋಧನಾ ಕೇಂದ್ರವನ್ನು ಯಾಕೆ ಸ್ಥಾಪಿಸಬಾರದು. ಅಲ್ಲಿ ಬೆಳೆ ಬೆಳೆದು, ಫಸಲು ಪಡೆದ ನಂತರ ಲಾಭ, ನಷ್ಟದ ಲೆಕ್ಕಾಚಾರ ಮಾಡಿ ಸೂಕ್ತ ಬೆಲೆ ನಿರ್ಧರಿಸಬಹುದಲ್ಲವೇ?

ಸಂಸತ್​ ಭವನದ ಬಳಿ ಕೃಷಿ ಸಂಶೋಧನಾ ಕೇಂದ್ರ ಸ್ಥಾಪಿಸಲಿ: ರೈತ ಮುಖಂಡ ರಾಕೇಶ್ ಟಿಕಾಯತ್ ಆಪೇಕ್ಷೆ
ಸಂಸತ್ ಭವನ

ದೆಹಲಿ: ಕೇಂದ್ರ ಸರ್ಕಾರವು ಕೃಷಿ ವಿಜ್ಞಾನಿ ಸ್ವಾಮಿನಾಥನ್ ವರದಿಯನ್ನು ಕಡೆಗಣಿಸುತ್ತಿದೆ ಮತ್ತು ರೈತರು ಭಾರೀ ಪ್ರಮಾಣದಲ್ಲಿ ಬೆಂಬಲ ಬೆಲೆಯನ್ನು (MSP) ಅಪೇಕ್ಷಿಸುತ್ತಿದ್ದಾರೆ ಎಂದು ತಿಳಿದುಕೊಂಡಿದೆ. ಈ ಬಗ್ಗೆ ಸರಿಯಾದ ನಿರ್ಧಾರ ಕೈಗೊಳ್ಳಲು, ಸರ್ಕಾರ ಪಾರ್ಲಿಮೆಂಟ್ ಸದನದ ಬಳಿ ಕೃಷಿ ಸಂಶೋಧನಾ ಕೇಂದ್ರವನ್ನು ಯಾಕೆ ಸ್ಥಾಪಿಸಬಾರದು? ಅಲ್ಲಿ ಬೆಳೆ ಬೆಳೆದು, ಫಸಲು ಪಡೆದ ನಂತರ ಲಾಭ, ನಷ್ಟದ ಲೆಕ್ಕಾಚಾರ ಮಾಡಿ ಸೂಕ್ತ ಬೆಲೆ ನಿರ್ಧರಿಸಬಹುದಲ್ಲವೇ? ಎಂದು ಭಾರತೀಯ ಕಿಸಾನ್ ಯೂನಿಯನ್ (BKU) ನಾಯಕ ರಾಕೇಶ್ ಟಿಕಾಯತ್ ಆಪೇಕ್ಷಿಸಿದ್ದಾರೆ.

ANI ಸುದ್ದಿ ಸಂಸ್ಥೆಯ ಜತೆ ಮಾತನಾಡಿದ ಟಿಕಾಯತ್, ಕೇಂದ್ರ ಸರ್ಕಾರ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯದೇ ಹೋದರೆ ರೈತ ಹೋರಾಟಗಾರರು ಪಾರ್ಲಿಮೆಂಟ್​ಗೆ ಘೆರಾವ್ ಹಾಕುವುದಾಗಿ ಭಾರತೀಯ ಕಿಸಾನ್ ಯೂನಿಯನ್ ಮುಖಂಡ (BKU) ರಾಕೇಶ್ ಟಿಕಾಯತ್ ನಿನ್ನೆ ಎಚ್ಚರಿಕೆ ನೀಡಿದ್ದರು. ದೆಹಲಿ ಮಾರ್ಚ್​ಗೆ ಯಾವಾಗಲಾದರೂ ಕರೆ ನೀಡಬಹುದು. ರೈತರು ತಯಾರಾಗಿರಬೇಕು ಎಂದು ಟಿಕಾಯತ್ ಹೇಳಿದ್ದರು. ರಾಜಸ್ಥಾನದ ಸಿಕರ್ ಎಂಬಲ್ಲಿ ಕಿಸಾನ್ ಮಹಾಪಂಚಾಯತ್ ಉದ್ದೇಶಿಸಿ ಮಂಗಳವಾರ (ಫೆ.23) ರಾಕೇಶ್ ಟಿಕಾಯತ್ ಮಾತನಾಡಿದ್ದರು.

ಇಂಡಿಯಾ ಗೇಟ್ ಬಳಿಯ ಪಾರ್ಕ್​ನಲ್ಲಿ ನೇಗಿಲು ಹಿಡಿದು ನೆಲ ಉತ್ತು, ಬೆಳೆ ಬೆಳೆಯುತ್ತೇವೆ. ಯುನೈಟೆಡ್ ಫ್ರಂಟ್​ನ ರೈತ ಚಳುವಳಿಗಾರರು ಪಾರ್ಲಿಮೆಂಟ್ ಘೆರಾವ್​ಗೆ ದಿನಾಂಕ ನಿಗಧಿ ಮಾಡುತ್ತಾರೆ ಎಂದೂ ಟಿಕಾಯತ್ ತಿಳಿಸಿದ್ದರು. ಜನವರಿ 26ರಂದು ನಡೆದ ಟ್ರ್ಯಾಕ್ಟರ್ ಚಳುವಳಿಗೆ ಕೆಟ್ಟ ಹೆಸರು ತರುವಂತೆ ಷಡ್ಯಂತ್ರ ಹೂಡಲಾಗಿದೆ. ಜನವರಿ 26ರ ಹಿಂಸಾಚಾರವನ್ನು ರೈತರ ಮೇಲೆ ಹೊರಿಸಲಾಗುತ್ತಿದೆ. ಭಾರತದ ತ್ರಿವರ್ಣ ಧ್ವಜವನ್ನು ರೈತರು ಬಹಳ ಪ್ರೀತಿಸುತ್ತಾರೆ. ರೈತರು ರಾಜಕೀಯ ನಾಯಕರಂತಲ್ಲ ಎಂದು ಟಿಕಾಯತ್ ಗುಡುಗಿದ್ದರು.

ರಾಕೇಶ್ ಟಿಕಾಯತ್ ಪಾರ್ಲಿಮೆಂಟ್​ ಮಾರ್ಚ್

ಇದನ್ನೂ ಓದಿ: ಕೃಷಿ ಕಾಯ್ದೆಗಳ ಹಿಂಪಡೆಯದೇ ಹೋದರೆ ಪಾರ್ಲಿಮೆಂಟ್​ಗೆ ಘೇರಾವ್: ರಾಕೇಶ್ ಟಿಕಾಯತ್ ಎಚ್ಚರಿಕೆ

ಛೇ! ರೈತ ನಾಯಕ ರಾಕೇಶ್ ಟಿಕಾಯತ್ ಭಾಷಣ ಕೇಳಿ ತಾವೇ ಬೆಳೆದ ಬೆಳೆಯನ್ನು ಕೈಯಾರೆ ನಾಶಪಡಿಸಿದ ರೈತ ಕುಟುಂಬ

Click on your DTH Provider to Add TV9 Kannada