ಪ್ರತಿಪಕ್ಷಗಳು ರಾಜಕೀಯ ಲಾಭಕ್ಕಾಗಿ ಸೆಲ್ಫ್ ಗೋಲ್ ಹೊಡೆಯುತ್ತಿವೆ: ಪ್ರಧಾನಿ ನರೇಂದ್ರ ಮೋದಿ

Narendra Modi: ಒಂದು ಕಡೆ ನಮ್ಮ ದೇಶ, ನಮ್ಮ ಯುವಕರು ತುಂಬಾ ಸಾಧನೆ ಮಾಡುತ್ತಿದ್ದಾರೆ. ಗೆಲವಿನ ಗೋಲು ಹೊಡೆಯುತ್ತಿದ್ದಾರೆ. ಆದರೂ ಕೆಲವು ಜನರು ತಮ್ಮ ರಾಜಕೀಯ ಉದ್ದೇಶಗಳಿಗಾಗಿ ಸೆಲ್ಫ್ ಗೋಲ್ ಹೊಡೆಯುತ್ತಿದ್ದಾರೆ.

ಪ್ರತಿಪಕ್ಷಗಳು ರಾಜಕೀಯ ಲಾಭಕ್ಕಾಗಿ ಸೆಲ್ಫ್ ಗೋಲ್ ಹೊಡೆಯುತ್ತಿವೆ: ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ದೆಹಲಿ: ಭಾರತವು ಇಂದು ಒಲಿಂಪಿಕ್ಸ್‌ನಲ್ಲಿ ಹಾಕಿ ಪಂದ್ಯದಲ್ಲಿ ಅದ್ಭುತ ಗೆಲುವನ್ನು ಸಂಭ್ರಮಿಸುತ್ತಿರುವ ಹೊತ್ತಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳು ರಾಜಕೀಯ ಲಾಭಕ್ಕಾಗಿ “ಸೆಲ್ಫ್-ಗೋಲುಗಳನ್ನು” ಹೊಡೆಯುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

“ಒಂದು ಕಡೆ ನಮ್ಮ ದೇಶ, ನಮ್ಮ ಯುವಕರು ತುಂಬಾ ಸಾಧನೆ ಮಾಡುತ್ತಿದ್ದಾರೆ. ಗೆಲವಿನ ಗೋಲು ಹೊಡೆಯುತ್ತಿದ್ದಾರೆ. ಆದರೂ ಕೆಲವು ಜನರು ತಮ್ಮ ರಾಜಕೀಯ ಉದ್ದೇಶಗಳಿಗಾಗಿ ಸೆಲ್ಫ್ ಗೋಲ್ ಹೊಡೆಯುತ್ತಿದ್ದಾರೆ. ದೇಶಕ್ಕೆ ಏನು ಬೇಕು, ದೇಶ ಏನು ಸಾಧನೆ ಮಾಡಿದೆ ಮತ್ತು ದೇಶ ಯಾವ ರೀತಿ ಬದಲಾಗುತ್ತಿದೆ ಎಂಬುದರ ಬಗ್ಗೆ ಅವರಿಗೆ ಬೇಕಾಗಿಲ್ಲ ಎಂದ ವರ್ಚುವಲ್ ಸಂವಾದದಲ್ಲಿ ಮೋದಿ ಹೇಳಿದ್ದಾರೆ.

ಉತ್ತರಪ್ರದೇಶದಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಫಲಾನುಭವಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸುತ್ತಿದ್ದರು. ಭಾರತೀಯ ಪುರುಷರ ತಂಡವು ಒಲಿಂಪಿಕ್ಸ್‌ನಲ್ಲಿ ಜರ್ಮನಿಯನ್ನು ಸೋಲಿಸಿ ಕಂಚಿನ ಪದಕ ಗೆದ್ದು ಬೀಗಿದ್ದು, 41 ವರ್ಷಗಳ ನಂತರ ಭಾರತ ಹಾಕಿಯಲ್ಲಿ ಪದಕ ಗೆದ್ದಿದೆ.

ಸಂಸತ್​ನಲ್ಲಿ ಪೆಗಾಸಸ್ ಬೇಹುಗಾರಿಕೆ ಆರೋಪ, ಇಂಧನ ಬೆಲೆಏರಿಕೆ,ರೈತರ ಪ್ರತಿಭಟನೆ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಚರ್ಚಿಸಬೇಕು ಎಂದು ಒತ್ತಾಯಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿ ಕಲಾಪಕ್ಕೆ ಪದೇ ಪದೇ ಅಡ್ಡಿಯುಂಟು ಮಾಡುತ್ತಿವೆ.

ಸಂಸತ್ ಕಾರ್ಯನಿರ್ವಹಿಸಲು ಅವಕಾಶ ನೀಡದೆ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಜನರನ್ನು ಅವಮಾನಿಸಲಾಗಿದೆ ಎಂದು ಈ ಹಿಂದೆ ಪ್ರಧಾನಿ ಮೋದಿ ಆರೋಪಿಸಿದ್ದರು.  “ಎರಡೂ ಸದನಗಳಲ್ಲಿ ಪ್ರತಿಪಕ್ಷಗಳ ಕೃತ್ಯಗಳಿಂದ ಸಂಸತ್​​ನ್ನು ಅವಮಾನಿಸಲಾಗುತ್ತಿದೆ. ಕಾಗದವನ್ನು ಕಿತ್ತುಕೊಂಡು ಅದನ್ನು ಹರಿದು ಹಾಕಿದ ವ್ಯಕ್ತಿಯು ತನ್ನ ಕೃತ್ಯಗಳ ಬಗ್ಗೆ ಪಶ್ಚಾತ್ತಾಪ ಪಡುವುದಿಲ್ಲ” ಎಂದು ಮಂಗಳವಾರ ಬಿಜೆಪಿ ಸಂಸದರ ಸಭೆಯಲ್ಲಿ ಪ್ರಧಾನಿ ಹೇಳಿದರು.

ಅವರು ಪೆಗಾಸಸ್ ಹಗರಣದ ಬಗ್ಗೆ ಹೇಳಿಕೆ ನೀಡಲು ಹೊರಟಿದ್ದಾಗ ತೃಣಮೂಲ ಸಂಸದ ಸಂತನು ಸೇನ್ ಅವರು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರ ಕಾಗದಗಳನ್ನು ಕಸಿದುಕೊಂಡ ಘಟನೆಯನ್ನು ಅವರು ಇಲ್ಲಿ ಹೇಳಿದ್ದಾರೆ. ಅದೇ ವೇಳೆ ಮಸೂದೆಗಳನ್ನು ಅಂಗೀಕರಿಸುತ್ತಿದ್ದಿರೋ, ಪಾಪ್ಡಿ ಚಾಟ್ ಮಾಡುತ್ತಿದ್ದರೋ ಎಂದು ಡೆರೆಕ್ ಒಬ್ರೇನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಮೋದಿ, ಮಸೂದೆಗಳ ಅಂಗೀಕಾರಕ್ಕೆ ಸಂಬಂಧಿಸಿದಂತೆ ಹಿರಿಯ ಸಂಸದರ ಅವಹೇಳನಕಾರಿ ಹೇಳಿಕೆಗಳು ಇದು ಎಂದು ಖಂಡಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಕೇಂದ್ರದ ಮೋದಿ ಸರ್ಕಾರ ತಮಿಳುನಾಡನ್ನೇ ಬೆಂಬಲಿಸಲಿದೆ: ಅಣ್ಣಾಮಲೈ

ಇದನ್ನೂ ಓದಿ:  ಶ್ರೀರಾಮ ನಮ್ಮ ಪೂರ್ವಜ, ಯಾರು ಅದನ್ನು ಒಪ್ಪುತ್ತಿಲ್ಲವೋ ಅವರ ಡಿಎನ್ಎ ಬಗ್ಗೆ ಅನುಮಾನವಿದೆ: ಯೋಗಿ ಆದಿತ್ಯನಾಥ

(Opposition shooting self-goals for political gains says PM Narendra Modi)

Click on your DTH Provider to Add TV9 Kannada