ಶ್ರೀರಾಮ ನಮ್ಮ ಪೂರ್ವಜ, ಯಾರು ಅದನ್ನು ಒಪ್ಪುತ್ತಿಲ್ಲವೋ ಅವರ ಡಿಎನ್ಎ ಬಗ್ಗೆ ಅನುಮಾನವಿದೆ: ಯೋಗಿ ಆದಿತ್ಯನಾಥ

ಶ್ರೀರಾಮ ನಮ್ಮ ಪೂರ್ವಜ, ಯಾರು ಅದನ್ನು ಒಪ್ಪುತ್ತಿಲ್ಲವೋ ಅವರ ಡಿಎನ್ಎ ಬಗ್ಗೆ ಅನುಮಾನವಿದೆ: ಯೋಗಿ ಆದಿತ್ಯನಾಥ
ಯೋಗಿ ಆದಿತ್ಯನಾಥ್

Yogi Adityanath: ವಿದೇಶಿ ಮುಸ್ಲಿಂ ಕಲಾವಿದರು ತಮ್ಮನ್ನು ರಾಮನ ವಂಶಸ್ಥರು ಎಂದು ಕರೆದುಕೊಳ್ಳುವಲ್ಲಿ ಹೆಮ್ಮೆ ಪಡುತ್ತಾರೆ, ಆದರೆ ಈ ಬಗ್ಗೆ ಸಂದೇಹ ವ್ಯಕ್ತ ಪಡಿಸುತ್ತಿರುವ ಭಾರತೀಯರ ಡಿಎನ್ಎ ಮೇಲೆ ಕೊಂಚ ಅನುಮಾನ ಇದೆ. ರಾಮ ನಮ್ಮ ಪೂರ್ವಜನೆಂದು ನಾವು ಹೆಮ್ಮೆ ಪಡಬೇಕು.

TV9kannada Web Team

| Edited By: Rashmi Kallakatta

Aug 05, 2021 | 3:30 PM

ಲಖನೌ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಭಾರತದಲ್ಲಿನ ಪ್ರತಿಯೊಬ್ಬರೂ ಭಗವಾನ್ ರಾಮನ ವಂಶಸ್ಥರು. ಇದನ್ನು ಯಾರು ಒಪ್ಪುತ್ತಿಲ್ಲವೋ ಅವರ ಡಿಎನ್ಎ ಬಗ್ಗೆ ಅನುಮಾನವಿದೆ ಎಂದು ಅವರು ಹೇಳಿದ್ದಾರೆ. ಆದಿತ್ಯನಾಥ ಅವರು ತಮ್ಮ ಎರಡು ದಿನಗಳ ಭೇಟಿಯ ವೇಳೆ ಗೋರಖ್​​ಪುರದಲ್ಲಿ ಬುಧವಾರ ಈ ಹೇಳಿಕೆ ನೀಡಿದ್ದಾರೆ.

’ಅಯೋಧ್ಯೆಯಲ್ಲಿ ರಾಮಲೀಲಾ ಸಮಯದಲ್ಲಿ ಇಂಡೋನೇಷ್ಯಾದ ಮುಸ್ಲಿಂ ಕಲಾವಿದರೊಂದಿಗಿನ ಅವರ ಸಂವಹನವನ್ನು ನೆನಪಿಸಿಕೊಂಡ ಮುಖ್ಯಮಂತ್ರಿ, ಸಂಸ್ಕೃತಗೊಳಿಸಿದ ಕಲಾವಿದರ ಹೆಸರುಗಳನ್ನು ಕಂಡುಕೊಂಡೆ ಎಂದು ಹೇಳಿದರು. ಇದರ ಹಿಂದಿನ ಕಾರಣವನ್ನು ಕೇಳಿದ ಆದಿತ್ಯನಾಥ ಅವರು ಇಸ್ಲಾಂ ಅನ್ನು ನಂಬುತ್ತಾರೆ ಮತ್ತು ಅನುಸರಿಸುತ್ತಾರೆ ಎಂದು ಕಲಾವಿದರು ಹೇಳಿದರು, ಆದರೆ ಭಗವಾನ್ ರಾಮ್ ಅವರ ಪೂರ್ವಜ ಎಂದು ಹೇಳಿದರು.

ವಿದೇಶಿ ಮುಸ್ಲಿಂ ಕಲಾವಿದರು ತಮ್ಮನ್ನು ರಾಮನ ವಂಶಸ್ಥರು ಎಂದು ಕರೆದುಕೊಳ್ಳುವಲ್ಲಿ ಹೆಮ್ಮೆ ಪಡುತ್ತಾರೆ, ಆದರೆ ಈ ಬಗ್ಗೆ ಸಂದೇಹ ವ್ಯಕ್ತ ಪಡಿಸುತ್ತಿರುವ ಭಾರತೀಯರ ಡಿಎನ್ಎ ಮೇಲೆ ಕೊಂಚ ಅನುಮಾನ ಇದೆ. ರಾಮ ನಮ್ಮ ಪೂರ್ವಜನೆಂದು ನಾವು ಹೆಮ್ಮೆ ಪಡಬೇಕು. ಇಂಡೋನೇಷ್ಯಾ ಈ ಬಗ್ಗೆ ಹೆಮ್ಮೆ ಪಡುತ್ತಿದ್ದರೆ, ನಮ್ಮನ್ನು ತಡೆಯುತ್ತಿರುವುದು ಏನು ಎಂದು ಅವರು ಯೋಗಿ ಕೇಳಿದ್ದಾರೆ.

ಆದಿತ್ಯನಾಥ ಅವರು ಗೋರಖ್​​ಪುರಕ್ಕೆ ಭೇಟಿ ನೀಡಿ, ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿದರು. ನಮ್ಮ ಸರ್ಕಾರದ ಗಮನವು ತನ್ನ ಹಿಂದಿನ ಲೋಕಸಭಾ ಕ್ಷೇತ್ರದ ಮೇಲೆ ಮಾತ್ರವಲ್ಲ, ಇಡೀ ಉತ್ತರ ಪ್ರದೇಶದ ಮೇಲೆ ಕೇಂದ್ರೀಕೃತವಾಗಿದೆ ಎಂದು ಅವರುಹೇಳಿದರು. ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ, ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಮತ್ತು ಗಂಗಾ ಎಕ್ಸ್‌ಪ್ರೆಸ್‌ವೇ ಮುಂತಾದ ರಸ್ತೆ ಯೋಜನೆಗಳು ರಾಜ್ಯದ ಎಲ್ಲರಿಗೂ ಪ್ರಯೋಜನವನ್ನು ನೀಡುತ್ತವೆ ಎಂದಿದ್ದಾರೆ ಯೋಗಿ ಆದಿತ್ಯನಾಥ.

ಸಂಪರ್ಕವನ್ನು ಸುಧಾರಿಸಲು ದೆಹಲಿ ಮತ್ತು ಮೀರತ್ ನಡುವೆ 12 ಪಥದ ರಸ್ತೆಯನ್ನು ನಿರ್ಮಿಸಲಾಗುವುದು . ರಾಜ್ಯದ ಎಲ್ಲಾ ತಹಸಿಲ್ ಪ್ರಧಾನ ಕಚೇರಿಯನ್ನು ಎರಡು ಪಥ ಮತ್ತು ನಾಲ್ಕು ಪಥದ ರಸ್ತೆಗಳೊಂದಿಗೆ ಸಂಪರ್ಕಿಸಲಾಗುತ್ತಿದೆ ಎಂದು ಆದಿತ್ಯನಾಥ ಹೇಳಿದರು.  ಸಂಪರ್ಕ ವ್ಯವಸ್ಥೆ ಬಗ್ಗೆ ಮಾತನಾಡಿದ ಅವರು ಉತ್ತರಪ್ರದೇಶದಲ್ಲಿ ಒಂದೇ ಒಂದು ಮೆಟ್ರೋ ರೈಲು ಇಲ್ಲದ ಸಮಯವಿತ್ತು, ಆದರೆ ಈಗ ಅದನ್ನು ಎರಡು ನಗರಗಳಲ್ಲಿ ಕಾರ್ಯಗತಗೊಳಿಸಲಾಗಿದೆ.ಗೋರಖ್‌ಪುರ, ವಾರಣಾಸಿ, ಮೀರತ್ ಮತ್ತು ಝಾನ್ಸಿಯಲ್ಲಿಯೂ ಮೆಟ್ರೋವನ್ನು ತರುವ ಕೆಲಸದೊಂದಿಗೆ ಕಾನ್ಪುರ ಮತ್ತು ಆಗ್ರಾ ಕೂಡ ಈ ವರ್ಷದ ನವೆಂಬರ್‌ನಲ್ಲಿ ಮೆಟ್ರೋ ನಕ್ಷೆಯಲ್ಲಿ ಸ್ಥಾನ ಪಡೆಯುತ್ತವೆ ಎಂದು ಅವರು ಹೇಳಿದರು.

ತಮ್ಮ ಸರ್ಕಾರ ಮಹಿಳಾ ಭದ್ರತೆ ಮತ್ತು ಅವರ ಸಬಲೀಕರಣದ ಮೇಲೆ ಕೇಂದ್ರೀಕರಿಸಿದೆ ಎಂದು ಆದಿತ್ಯನಾಥ ಹೇಳಿದರು. ಮಿಷನ್ ಶಕ್ತಿ ಅಕ್ಟೋಬರ್ 2020 ರಲ್ಲಿ ಪ್ರಾರಂಭವಾಯಿತು. ಇದು ರಾಜ್ಯದ ಮಹಿಳೆಯರಿಗೆ ಸುರಕ್ಷತೆ ಮತ್ತು ಭದ್ರತೆಯನ್ನು ಖಾತರಿಪಡಿಸುವ ಸರ್ಕಾರದ ಯೋಜನೆಯ ಭಾಗವಾಗಿದೆ ಎಂದು ಅವರು ಹೇಳಿದರು.

ಮಹಿಳಾ ಆರ್ಥಿಕ ಸ್ವಾತಂತ್ರ್ಯಕ್ಕಾಗಿ, ಸಿಎಂ ಬಲಿನೀ ಯಶಸ್ಸನ್ನು ಎತ್ತಿ ತೋರಿಸಿದರು – ಬುಂದೇಲ್‌ಖಂಡ್‌ನಲ್ಲಿ ಮಹಿಳೆಯರಿಂದ ಆರಂಭವಾದ ಕಂಪನಿಯು 22,000 ಕ್ಕೂ ಹೆಚ್ಚು ಮಹಿಳಾ ಉದ್ಯೋಗಿಗಳನ್ನು ಹೊಂದಿದೆ. ಕಳೆದ ಎರಡು ವರ್ಷಗಳಲ್ಲಿ ಕಂಪನಿಯು 6 ಕೋಟಿ ಲಾಭ ಗಳಿಸಿದೆ ಎಂದು ಆದಿತ್ಯನಾಥ ಹೇಳಿದರು, ಗೋರಖ್‌ಪುರ, ಅಯೋಧ್ಯೆ, ಬದೌನ್ ಮತ್ತು ಹತ್ತಿರದ ಜಿಲ್ಲೆಗಳಲ್ಲಿ ಇದೇ ರೀತಿಯ ಪ್ರಯೋಗಗಳನ್ನು ಮಾಡಲಾಗುವುದು ಎಂದಿದ್ದಾರೆ ಅವರು.

ಇದನ್ನೂ ಓದಿ:  ಝಾನ್ಸಿ ರೈಲು ನಿಲ್ದಾಣದ ಹೆಸರು ಬದಲಿಸಲು ಪ್ರಸ್ತಾವನೆ ಸಲ್ಲಿಸಿದ ಯೋಗಿ ಆದಿತ್ಯನಾಥ್ ಸರ್ಕಾರ

ಇದನ್ನೂ ಓದಿ: ಮಾಧ್ಯಮ ವರದಿಗಳು ಸರಿಯಾಗಿದ್ದರೆ ಆರೋಪಗಳು ಗಂಭೀರ: ಪೆಗಾಸಸ್ ಕುರಿತು ಸುಪ್ರೀಂಕೋರ್ಟ್ ಹೇಳಿದ 10 ಸಂಗತಿಗಳು

(Yogi Adityanath says Everyone in India is a descendant of Lord Ram questioned the DNA of those who disagree with him)

Follow us on

Related Stories

Most Read Stories

Click on your DTH Provider to Add TV9 Kannada